ಗೋಣಿಕೊಪ್ಪಲು, ಫೆ. 25: ಗೋಣಿಕೊಪ್ಪಲು ಮಹಿಳಾ ಸಮಾಜದಲ್ಲಿ ಟಿ.ಪಿ. ರಮೇಶ್ ಸಮಕ್ಷಮದಲ್ಲಿ ಕೊಡಗು ಜಿಲ್ಲಾ ಬಲಿಜ ಸಮಾಜ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಂತಿಮ ಪರಿಷ್ಕøತ ಪಟ್ಟಿಯನ್ನು ಕುಶಾಲನಗರ ಕಾವೇರಿ ನಿಸರ್ಗಧಾಮದಲ್ಲಿ ನಡೆದ ಸಭೆಯಲ್ಲಿ ಸಮಾಜದ ಕಾನೂನು ಸಲಹೆಗಾರ ಮಡಿಕೇರಿ ವಕೀಲ ಎಂ.ವಿ. ಸಂಜಯ್ ರಾಜ್ ಸಮ್ಮುಖದಲ್ಲಿ ಪ್ರಕಟಿಸಲಾಯಿತು.

ಅಧ್ಯಕ್ಷರಾಗಿ ಟಿ.ಎಲ್. ಶ್ರೀನಿವಾಸ್ (ಗೋಣಿಕೊಪ್ಪಲು), ಉಪಾಧ್ಯಕ್ಷರನ್ನಾಗಿ ಟಿ.ಹೆಚ್. ಉದಯಕುಮಾರ್ (ಮಡಿಕೇರಿ ತಾಲೂಕು), ಎಸ್.ಕೆ. ಯತಿರಾಜ್ (ವೀರಾಜಪೇಟೆ ತಾಲೂಕು) ಮತ್ತು ಗೀತಾ ಹರೀಶ್ (ಸೋಮವಾರಪೇಟೆ ತಾಲೂಕು) ಅವರ ಆಯ್ಕೆ ಅಂತಿಮಗೊಂಡಿದೆ.

ಪ್ರಧಾನ ಕಾರ್ಯದರ್ಶಿ ಲೋಕೇಶ್ ಟಿ.ವಿ. (ಮೇಕೇರಿ), ಸಹ ಕಾರ್ಯದರ್ಶಿ ಟಿ.ಸಿ.ಗೀತಾನಾಯ್ಡು (ಪಾಲಿಬೆಟ್ಟ) ಮತ್ತು ಎಸ್. ಸ್ಪಂದನ್ (ಕುಶಾಲನಗರ). ಕೋಶಾಧಿಕಾರಿ ಟಿ.ಎನ್. ಲೋಕನಾಥ್ (ಮೂರ್ನಾಡು), ಕಾನೂನು ಸಲಹೆ ಗಾರರಾಗಿ ಎಂ.ವಿ. ಸಂಜಯ್ ರಾಜ್, ವಕೀಲರು (ಮಡಿಕೇರಿ), ಮೂರು ತಾಲೂಕು ಸಂಘಟನಾ ಸಂಚಾಲಕ ರನ್ನಾಗಿ ಟಿ.ಎಂ. ಪದ್ಮಾವತಿ, ಮಡಿಕೇರಿ (ಮಡಿಕೇರಿ ತಾಲೂಕು), ಟಿ.ಹೆಚ್. ಮಂಜುನಾಥ್ ಸಿದ್ದಾಪುರ(ವೀರಾಜಪೇಟೆ ತಾಲೂಕು) ಹಾಗೂ ಟಿ.ಎಲ್. ಸುಮಾ ಸುಂಟಿಕೊಪ್ಪ (ಸೋಮವಾರಪೇಟೆ ತಾಲೂಕು) ಮತ್ತು ನಿರ್ದೇಶಕರನ್ನಾಗಿ ಟಿ.ವಿ. ಭವಾನಿ (ನಾಪೆÇೀಕ್ಲು) ಅವರನ್ನು ಆಯ್ಕೆ ಮಾಡಲಾಗಿದೆ. ಮೂರು ತಾಲೂಕಿನ ಬಲಿಜ ಸಮಾಜ ಅಧ್ಯಕ್ಷರು ಜಿಲ್ಲಾ ಬಲಿಜ ಸಮಾಜ ಸಭೆಗಳಿಗೆ ಖಾಯಂ ಆಹ್ವಾನಿತ ರಾಗಿರುತ್ತಾರೆ.

ಸಭೆಯಲ್ಲಿ ಮಡಿಕೇರಿ ತಾಲೂಕು ಬಲಿಜ ಸಮಾಜ ಅಧ್ಯಕ್ಷೆ ಮೂರ್ನಾಡುವಿನ ಮೀನಾಕ್ಷಿ ಕೇಶವ್, ವೀರಾಜಪೇಟೆ ತಾಲೂಕು ಬಲಿಜ ಸಮಾಜ ಅಧ್ಯಕ್ಷ ಎಸ್.ಕೆ. ಗಣೇಶ್ ನಾಯ್ಡು, ಕುಶಾಲನಗರ ಶ್ರೀ ಅಮರನಾರಾಯಣ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿ. ಸತ್ಯನಾರಾಯಣ, ಬಲಿಜ ವಿದ್ಯಾಭಿವೃದ್ಧಿ ಸಂಘದ ನೂತನ ಅಧ್ಯಕ್ಷೆ ಶ್ವೇತಾ ಎನ್. ನಾಯ್ಡು, ಪ್ರಧಾನ ಕಾರ್ಯದರ್ಶಿ ಟಿ.ಕೆ.ಲಲಿತಾ ಮುಂತಾದವರು ಮಾತನಾಡಿದರು. ಕಳೆದ ಸಾಲಿನ ಸಭೆಯ ವರದಿಯನ್ನು ಗೀತಾನಾಯ್ಡು ಓದಿದರು, ಸುಮಾ ಸುಂಟಿಕೊಪ್ಪ ವಂದಿಸಿದರು.