ವೀರಾಜಪೇಟೆ, ಫೆ. 25: ಕೆದಮುಳ್ಳೂರು-ಮೂರುರೋಡು-ಕಡಂಗ ಭಾಗದ ರಸ್ತೆಗಳು ದುಸ್ಥಿತಿಯಲ್ಲಿದ್ದು, ಸರಕಾರದ ನೆರವಿನೊಂದಿಗೆ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದ್ದಾರೆ.

ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರ್‍ರೋಡ್-ಕಡಂಗ ಲಿಂಕ್ ರಸ್ತೆಯ ಅಗಲೀಕರಣ ಮತ್ತು ದುರಸ್ತಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 4 ಕಿ.ಮೀ. ದೂರವಿರುವ ಈ ರಸ್ತೆಯ ದುರಸ್ತಿ ಹಾಗೂ ಅಗಲೀಕರಣ ಮತ್ತು ಚರಂಡಿ ನಿರ್ಮಾಣ ಸೇರಿ ಒಟ್ಟು ರೂ. 7.20 ಲಕ್ಷ ಮಂಜೂರಾಗಿದ್ದು, ಅದರಲ್ಲಿ ಜಿಲ್ಲಾ ಪಂಚಾಯಿತಿಯಿಂದ ರೂ. 3.70 ಲಕ್ಷ ಹಾಗೂ ಶಾಸಕರ ನಿಧಿಯಿಂದ ರೂ. 3.50 ಲಕ್ಷ ಅನುದಾನ ಬಂದಿರುವದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಕಿರಣ್ ಕುಮಾರ್, ಎಂ.ಬಿ. ದೇವಯ್ಯ, ಸ್ಥಳೀಯ ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಬೊಳಕಾರಂಡ ರವಿ ಅಯ್ಯಣ್ಣ, ಎ. ಹರೀಶ್, ಚೋಟು ಬಿದ್ದಪ್ಪ, ಬೆಳೆಗಾರರಾದ ಕಾಶಿ ಕುಂಞಪ್ಪ, ಕೆ. ಪೂವಯ್ಯ, ಮಾಳೇಟಿರ ಜಪ್ಪು, ಪಿ.ಸಿ. ರಾಮಚಂದ್ರ ಉಪಸ್ಥಿತರಿದ್ದರು.