ಮಡಿಕೇರಿ, ಫೆ. 27: ಸಹಸ್ರಮಾನಗಳಿಂದ ಪ್ರಕೃತಿಯ ಆರಾಧನೆಯೊಂದಿಗೆ ಕಾಡಿನ ನಡುವೆ ಬದುಕು ಕಂಡುಕೊಂಡಿರುವ ಆದಿವಾಸಿ ಗಿರಿಜನರು ತಮ್ಮ ಮೂಲ ಸಂಸ್ಕøತಿ ಹಾಗೂ ಪೂಜೆ ಪದ್ಧತಿ ತೊರೆಯದಿರುವಂತೆ, ಆದಿವಾಸಿಗಳ ಸಾಂಸ್ಕøತಿಕ ಕಲಾಮೇಳ ಸಮಿತಿ ಅಧ್ಯಕ್ಷ ಜೆ.ಕೆ. ರಾಮು ಕರೆ ನೀಡಿದರು. ಚೆನ್ನಂಗಿ ಗ್ರಾ.ಪಂ. ವ್ಯಾಪ್ತಿಯ ಚೊಟ್ಟಪಾರೆ ಹಾಡಿಯಲ್ಲಿ ಇತ್ತೀಚೆಗೆ ಗಿರಿಜನರ ಸಾಂಸ್ಕøತಿಕ ಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಪೂರ್ವಜರು ಕಂಡುಕೊಂಡಿರುವ ವಿಶಿಷ್ಟ ಜಾನಪದ ಕಲೆ, ಸಂಸ್ಕøತಿ, ಪೂಜಾ ಪದ್ಧತಿ ಬಿಟ್ಟು ಅನ್ಯಮತೀಯ ಚಟುವಟಿಕೆಯತ್ತ ಹೋಗಬಾರದೆಂದು ರಾಮು ಕಳಕಳಿ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಪರಿಷತ್‍ನ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಅವರು ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ, ಪರಿಷತ್ತಿನಿಂದ ನಗದು ರೂಪದಲ್ಲಿ ಪ್ರೋತ್ಸಾಹ ನೀಡಿ ಶುಭ ಕೋರಿದರು. ಗಿರಿಜನರು ಕಾಡಿನ ನಡುವೆ ಕಟ್ಟಿಕೊಂಡಿರುವ ಮುಗ್ಧ ಜೀವನ ಕ್ರಮದೊಂದಿಗೆ ಹಾಸುಹೊಕ್ಕಾಗಿರುವ ಜಾನಪದ ಸಂಸÀ್ಕøತಿಯನ್ನು ಸದಾ ಉಳಿಸಿ -ಬೆಳೆಸಿಕೊಳ್ಳುವಂತೆ ಅವರು ಕರೆ ನೀಡಿದರು.

ಉಪನ್ಯಾಸಕ ಜೆ. ಸೋಮಣ್ಣ ಅವರು ಪಾಲ್ಗೊಂಡು ಮಾತನಾಡಿ, ಪ್ರಕೃತಿಯ ಕಂದಮ್ಮರಾಗಿರುವ ಗಿರಿಜನರು ಕಾಡಿನ ನಡುವೆ ಪ್ರಾಣಿ ಸಂಕುಲದೊಂದಿಗೆ ಬದುಕುತ್ತಿದ್ದು, ಆಧುನಿಕ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾ, ಜಾನಪದ ಸಂಸ್ಕøತಿಯನ್ನು ಮರೆಯದಿರುವಂತೆ ತಿಳಿಹೇಳಿದರು.

(ಮೊದಲ ಪುಟದಿಂದ) ಜಾನಪದ ಪರಿಷತ್ತಿನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಮಾತನಾಡಿ, ಡಿ.ವಿ.ಜಿ. ಅವರ ಕಗ್ಗ ಸಿರಿಯ ನುಡಿಯಂತೆ ಕಾಡಿನ ಮಧ್ಯೆ ಸುಂದರ ಜಾನಪದ ಬದುಕು ಹೊಂದಿರುವ ಗಿರಿಜನ ಎಲ್ಲಾ ಕಾಲಕ್ಕೂ ಅವಿಸ್ಮರಣೀಯರೆಂದು ಪ್ರಶಂಶಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ಅವರು, ಗಿರಿಜನರು ಕಷ್ಟಕೋಟಲೆಗಳ ನಡುವೆಯೂ ಶ್ರೀಮಂತ ಸಂಸ್ಕøತಿ - ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವದು ಹೆಮ್ಮೆಯೆಂದು ಕೊಂಡಾಡಿದರು.

ಇಲಾಖೆ ಹಾಗೂ ಸರಕಾರದ ಪ್ರೋತ್ಸಾಹದಿಂದ ಗಿರಿಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಎಲ್ಲರ ಸಹಕಾರ ಅಗತ್ಯವೆಂದು ಮಂಜುನಾಥ್ ಸಲಹೆ ನೀಡಿದರು. ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಎಸ್.ಎಸ್. ಸಂಪತ್ ಕುಮಾರ್, ಎಚ್.ಟಿ. ಅನಿಲ್, ಚಿ.ನಾ. ಸೋಮೇಶ್, ಮೊದಲಾದವರು ಪಾಲ್ಗೊಂಡು ಗಿರಿಜನ ಕಲಾ ಮೇಳಕ್ಕೆ ಶುಭ ಕೋರಿದರು.

ಕೊಡಗು ಸೇರಿದಂತೆ ಹೊರಜಿಲ್ಲೆಯ ವಿವಿಧ ತಂಡಗಳು ತಮ್ಮ ಅಮೋಘ ಕಲಾ ಪ್ರಾಕಾರಗಳನ್ನು ಪ್ರದರ್ಶಿಸಿ ಹಾಡಿ ಜನತೆ ಕುಣಿದು ಕುಪ್ಪಳಿಸುವಂತೆ ಪ್ರೇರೇಪಿಸಿದವು. ಅಧಿಕ ಸಂಖ್ಯೆಯಲ್ಲಿ ಗಿರಿಜನ ಕುಟುಂಬಗಳು ಪಾಲ್ಗೊಂಡಿದ್ದ ಜಾನಪದ ಕಾರ್ಯಕ್ರಮದಲ್ಲಿ ಹಾಡಿಯ ವಿದ್ಯಾರ್ಥಿನಿ ಮಂಜುಳ ರಾಮು ನಿರೂಪಣೆಯೊಂದಿಗೆ, ಮಂಜುನಾಥ ಸ್ವಾಗತಿಸಿ, ವಂದಿಸಿದರು.