ನಾಪೆÇೀಕ್ಲು, ಫೆ. 27: ಕಳೆದ 26 ವರ್ಷಗಳಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಕೊಡವರ ಹಕ್ಕೊತ್ತಾಯಕ್ಕಾಗಿ ಶ್ರಮಿಸುತ್ತಿದೆ. ಅದರೊಂದಿಗೆ ಕಳೆದ 18 ವರ್ಷಗಳಿಂದ ಕೊಡವರನ್ನು ಬುಡಕಟ್ಟು ಜನಾಂಗ ಎಂದು ಘೋಷಿಸಲು ಹೋರಾಡುತ್ತಿದ್ದು, ಅದು ಅಂತಿಮ ಘಟ್ಟ ತಲುಪಿದೆ ಎಂದು ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಹೇಳಿದರು.
ಕಕ್ಕಬ್ಬೆ ಮುತ್ತವ್ವ ಹಾಲ್ನಲ್ಲಿ ಕರೆದಿದ್ದ ಜನ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಕೊಡವರ ಹಿತಾಶಕ್ತಿಗೆ ಬದ್ಧವಾಗಿ ಸಿಎನ್ಸಿ ತನ್ನ ಹೋರಾಟವನ್ನು ನಡೆಸುತ್ತಾ ಬಂದಿದೆ. ಇದರಲ್ಲಿ ಯಾವದೇ ದುರುದ್ದೇಶವಿಲ್ಲ. ಕೊಡವರ ಸರ್ವಾಂಗೀಣ ಏಳಿಗೆಗಾಗಿ ಕೊಡವರನ್ನು ಟ್ರೈಬಲ್ ಸ್ಟೇಟಸ್ ಪಟ್ಟಿಗೆ ಸೇರಿಸುವದು, ಕೊಡವ ಭಾಷೆಯನ್ನು ಎಂಟನೇ ಪರಿಚೇಧಕ್ಕೆ ಸೇರಿಸುವದು, ಕೋವಿ ಹಕ್ಕು, ದೇವಟ್ ಪರಂಬುವನ್ನು ಸ್ಮಾರಕ ಮಾಡುವ ಬಗ್ಗೆ ಸರಕಾರವನ್ನು ಒತ್ತಾಯಿಸುತ್ತಾ ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಇದಕ್ಕೆ ಪೂರಕವಾದ ಪ್ರತಿಕ್ರಿಯೆಗಳು ನಡೆಯುತ್ತಿದೆ ಎಂದರು.
ಕೊಡಗನ್ನು ಮಾವೋವಾದಿಗಳು ರೆಡ್ ಕಾರಿಡಾರ್ ಮಾಡಲು ಹೊರಟಿರುವ ಜೊತೆಯಲ್ಲಿಯೇ ಐಎಸ್ಐಎಫ್ ಜಿಲ್ಲೆಯಲ್ಲಿ ತನ್ನ ಕರಾಳ ಬಾಹುವನ್ನು ಚಾಚುತ್ತಿದೆ. ಜಿಲ್ಲೆಯ ಕೊಡವರು ಈ ಬಗ್ಗೆ ಜಾಗೃತರಾಗಿ ಕೊಡವ ಭೂಮಿ ಮತ್ತು ತಮ್ಮ ನೆಲೆಯನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಈ ಬಗ್ಗೆ ಸಿಎನ್ಸಿ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದು, ಮುಂದೆಯೂ ಇದನ್ನು ಮುಂದುವರಿಸಲಾಗುವದು ಎಂದರು. ದಿಡ್ಡಳ್ಳಿ ಪ್ರಕರಣದ ಬಗ್ಗೆ ಮಾತನಾಡಿದ ಅವರು ದಲಿತರು, ಬಡವರು, ನಿರ್ಗತಿಕರನ್ನು ಬಳಸಿಕೊಂಡು ಸಿಎನ್ಸಿಯನ್ನು ಹತ್ತಿಕ್ಕುವ ಹುನ್ನಾರ ಕಂಡು ಬರುತ್ತಿದೆ. ಇದಕ್ಕೆ ನಮ್ಮವರೇ ಪರೋಕ್ಷವಾಗಿ ಸಹಕರಿಸುತ್ತಿರುವದು ಕಂಡು ಬರುತ್ತಿದೆ. ಇದು ಖಂಡನೀಯ ಎಂದರು.
ಸಿಎನ್ಸಿಯನ್ನು ವಿರೋಧಿಸಿ ಕೊಡಗಿನಲ್ಲಿ ಹಲವು ಸಂಘಟನೆಗಳು ಹುಟ್ಟಿಕೊಂಡಿದೆ. ಆದರೆ ಅವರಿಂದ ಸಿಎನ್ಸಿಯನ್ನು ಏನೂ ಮಾಡಲು ಆಗುವದಿಲ್ಲ ಎಂದರು.
ಸಿಎನ್ಸಿ ಕಳೆದ 17 ವರ್ಷಗಳಿಂದ ಕೊಡವರು ಬುಡಕಟ್ಟು ಜನಾಂಗ ಎಂದು ಘೋಷಿಸಲು ಕೇಂದ್ರ ಮತ್ತು ರಾಜ್ಯ ಮಂತ್ರಿಗಳು ಮುಖಂಡರನ್ನು ಭೇಟಿಯಾಗಿ ವಿವರ ಸಲ್ಲಿಸಿದ ಫಲವಾಗಿ ಇಂದು ಈ ಕಾರ್ಯ ಅಂತಿಮ ಘಟ್ಟ ತಲುಪಿದೆ. ಕಳೆದ ವರ್ಷ ಈ ಬಗ್ಗೆ ಸರ್ವೇ ಕಾರ್ಯ ಆರಂಭ ಗೊಂಡಿತ್ತಾದರೂ, ಕೊಡವ ಹಿತಶತ್ರುಗಳ ಕುತಂತ್ರದ ಫಲವಾಗಿ ಅದನ್ನು ತಡೆಹಿಡಿಯಲಾಗಿತ್ತು. ಈಗ ಮತ್ತೇ ಪುನಃರಾರಂಭಕ್ಕೆ ಹಸಿರು ನಿಶಾನೆ ದೊರೆತಿದೆ ಎಂದರು.
ಈ ಸಂದರ್ಭದಲ್ಲಿ ಮಡಿಕೇರಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸಿಎನ್ಸಿ ಮುಖಂಡರಾದ ಬಾಚಮಂಡ ಬೆಲ್ಲು ಪೂವಪ್ಪ, ಕಸ್ತೂರಿ ಪೂವಪ್ಪ, ರಾಜಾ ಪೂವಣ್ಣ, ಅಪ್ಪಾರಂಡ ಮೀರಾ ನಂಜಪ್ಪ, ಅರೆಯಡ ಗಿರೀಶ್, ಕಲಿಯಂಡ ಸುನಂದ, ಮಾದಂಡ ಉಮೇಶ್, ಕಲಿಯಂಡ ಸರಸು ಮಾದಪ್ಪ, ಅಪ್ಪಾರಂಡ ದೇವಿ ದೇವಯ್ಯ, ಸುನಿಲ್, ಅಲ್ಲಾರಂಡ ಸನ್ನು ಅಯ್ಯಪ್ಪ, ಅಪ್ಪಾರಂಡ ಪ್ರಕಾಶ್ ಮತ್ತಿತರರು ಇದ್ದರು.