ಕೂಡಿಗೆ, ಫೆ. 27: ಶಿವರಾತ್ರಿಯ ಅಂಗವಾಗಿ ತೊರೆನೂರಿನ ಶನಿದೇವರ ದೇವಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಜನಪದೋತ್ಸವವು ನೆರೆದಿದ್ದ ಅಸಂಖ್ಯಾತ ಗ್ರಾಮಸ್ಥರ ಜನಮನ ಸೂರೆಗೊಂಡಿತು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶನೇಶ್ವರ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗ ದೊಂದಿಗೆ ಆಯೋಜಿಸಿದ್ದ ಜನಪದೋತ್ಸವವನ್ನು ರಂಗಾಯಣದ ಜನಾರ್ದನ್ (ಜನ್ನಿ) ಅವರು ಉದ್ಘಾಟಿಸಿ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕøತಿಗೆ ಇಂದಿನ ಯುವ ಜನತೆ ವಾಲುತ್ತಿರುವ ಈ ಸಂದರ್ಭದಲ್ಲಿ ದೇಶೀಯ ಸಂಸ್ಕøತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜನಪದ ಕಾರ್ಯಕ್ರಮಗಳು ಅನಿವಾರ್ಯ ವಾಗಿವೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಊರ ಜನರ ಮನಸ್ಥಿತಿಯನ್ನು ಒಗ್ಗೂಡಿಸುತ್ತದೆ. ಯುವಜನತೆಯಲ್ಲಿ ಭಕ್ತಿಭಾವ ತುಂಬಿಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳ ಅಗತ್ಯವಿದೆ ಎಂದರು.

ಜಿ.ಪಂ ಮಾಜಿ ಸದಸ್ಯರಾದ ವಿ.ಪಿ.ಶಶಿಧರ್ ಮಾತನಾಡಿ, ದೇಶದಲ್ಲಿನ ಸಾಂಸ್ಕøತಿಕ ಪ್ರತಿಭೆಗಳು ಗ್ರಾಮೀಣ ಪ್ರದೇಶದಿಂದಲೇ ಹೆಚ್ಚು ಬಂದಿರುವದರಿಂದ ಇಂತಹ ಜನಪದ ಉತ್ಸವಗಳು ಪ್ರತಿಭೆಗಳನ್ನು ಗುರುತಿಸಿ ಸಂಸ್ಕøತಿಯನ್ನು ಉಳಿಸುತ್ತಿವೆ. ಮೌಲ್ಯವರ್ಧಿತ ಮನಸ್ಸು ವೃದ್ಧಿಸಲು ಇಂತಹ ಕಾರ್ಯಕ್ರಮ ಗಳು ಪ್ರತಿ ಗ್ರಾಮದಲ್ಲೂ ನಡೆಯಬೇಕೆಂದರು.

ತೊರೆನೂರು ವಿರಕ್ತ ಮಠದ ಮಲ್ಲೇಶಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಶಿರಂಗಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ರಮೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ಲೋಕೇಶ್‍ಸಾಗರ್, ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಚಂದ್ರಪ್ಪ, ದೇವಾಲಯ ಸಮಿತಿಯ ಕಾರ್ಯದರ್ಶಿ ಕೃಷ್ಣೇಗೌಡ, ತಾ.ಪಂ ಮಾಜಿ ಉಪಾಧ್ಯಕ್ಷ ಪಾಂಡುರಂಗ, ಮುತ್ತಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್, ತೊರೆನೂರು ಗ್ರಾ.ಪಂ ಸದಸ್ಯ ಮಹೇಶ್, ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಟಿ.ಬಿ.ಜಗದೀಶ ಸೇರಿದಂತೆ ಮತ್ತಿತರರು ಇದ್ದರು.

ಇದೇ ಸಂದರ್ಭ ದೇವಾಲಯ ಸಮಿತಿಯ ವತಿಯಿಂದ ಹಲವಾರು ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಜನಾರ್ದನ (ಜನ್ನಿ) ಮತ್ತು ಲೋಕೇಶ್ ಸಾಗರ್ ಅವರ ನೇತೃತ್ವದಲ್ಲಿ ಪ್ರಾರಂಭಗೊಂಡ ಜನಪದೋತ್ಸವ ಮುಂಜಾನೆ ಯವರೆಗೂ ಜನರನ್ನು ಆಕರ್ಷಿಸಿತು.