ಮಡಿಕೇರಿ, ಫೆ. 27: ಬೈಕ್‍ನಲ್ಲಿ ಬಂದು ಚೈನ್ ಅಪಹರಿಸಿರುವವರ ತಂಡ ಮಡಿಕೇರಿ ನಗರಕ್ಕೂ ಕಾಲಿರಿಸಿದೆ ಎಂಬ ಆತಂಕ ನಗರದಲ್ಲಿ ಮನೆ ಮಾಡಿದೆ.ಕಳೆದ ಶುಕ್ರವಾರ ಮಧ್ಯಾಹ್ನ ಜ್ಯೋತಿ ನಗರ ಕಾರ್ಮಿಕ ಮಹಿಳೆ ಸುಮಿತ್ರ ಎಂಬವರು ನಗರದ ಕಾನ್ವೆಂಟ್ ಜಂಕ್ಷನ್‍ನಲ್ಲಿ ಮನೆ ಕೆಲಸ ಮುಗಿಸಿ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ಕಪ್ಪು ಬಣ್ಣದ ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ಸುಮಿತ್ರ ಅವರ ಕತ್ತಿನಲ್ಲಿದ್ದ 3 ಪವನ್ ಚಿನ್ನದ ತಾಳಿ ಚೈನ್ ಅನ್ನು ಅಪಹರಿಸಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.