*ಗೋಣಿಕೊಪ್ಪಲು, ಫೆ. 27: ವೀರಾಜಪೇಟೆ ಭಾ.ಜ.ಪ ಮಹಿಳಾ ಘಟಕ ಕಾರ್ಯಕಾರಿಣಿ ಸಭೆ ತಾಲೂಕು ಅಧ್ಯಕ್ಷೆ ಚೇದಂಡ ಸುಮಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ದೇಶ ಕಟ್ಟಲು ಮತ್ತು ಅಭಿವೃದ್ಧಿಯತ್ತ ಸಾಗಲು ಮಹಿಳೆಯರ ಪಾತ್ರ ಬಹು ಮುಖ್ಯ. ಉತ್ತಮ ಮಾನಸಿಕತೆ ಬೆಳೆಸಿಕೊಂಡರೆ ರಾಜಕೀಯದಲ್ಲಿ ಬೆಳೆಯಲು ಸಾಧ್ಯ. ಮೋದಿ ಕನಸ್ಸುಗಳಿಗೆ ಕೈ ಜೋಡಿಸುವ ಮೂಲಕ ದೇಶ ಕಟ್ಟುವ ಕಾಯಕಕ್ಕೆ ಮಹಿಳೆಯರು ಮುಂದಾಗಬೇಕು.
ಜಿಲ್ಲಾ ಬಿ.ಜೆ.ಪಿ. ಮಹಿಳಾ ಘಟಕ ಅಧ್ಯಕ್ಷೆ ಯಮುನಾ ನಾಣಯ್ಯ ಮಾತನಾಡಿ, ಮಹಿಳಾ ಶಕ್ತಿ ದೇಶದ ಆಸ್ತಿ. ಸ್ವಚ್ಛಭಾರತ ಮಾಡಲು ಮಹಿಳೆಯರಿಂದ ಸಾಧ್ಯ. ಮನೆ ಮತ್ತು ಮನಸ್ಸು ಸ್ವಚ್ಛವಾಗಿದ್ದರೆ, ದೇಶ ಸ್ವಚ್ಛವಾಗಿಡಬಹುದು. ರಾಜಕೀಯದಲ್ಲಿ ತನ್ನ ನಾಯಕತ್ವವನ್ನು ಬೆಳೆಸಿಕೊಳ್ಳಲು ಶಿಸ್ತು, ಸಮಯಪಾಲನೆ ಮುಖ್ಯ ಎಂದರು.
ಜಿಲ್ಲಾ ಬಿ.ಜೆ.ಪಿ. ಮಹಿಳಾ ಘಟಕ ಅಧ್ಯಕ್ಷೆ ಯಮುನಾ ಮಾತನಾಡಿ, ಮಹಿಳಾ ಶಕ್ತಿ ದೇಶದ ಆಸ್ತಿ. ಸ್ವಚ್ಛಭಾರತ ಮಾಡಲು ಮಹಿಳೆಯರಿಂದ ಸಾಧ್ಯ. ಮನೆ ಮತ್ತು ಮನಸ್ಸು ಸ್ವಚ್ಛವಾಗಿದ್ದರೆ, ದೇಶವನ್ನು ಸ್ವಚ್ಛವಾಗಿಡಬಹುದು ಎಂದರು.
ಜಿಲ್ಲಾ ಬಿ.ಜೆ.ಪಿ. ಘಟಕದ ಉಪಾಧ್ಯಕ್ಷೆ ತೀತಿರ ಊರ್ಮಿಳಾ ಮಾತನಾಡಿ, ಒಗ್ಗಟ್ಟಿನಿಂದ ನಮ್ಮ ದೇಶವನ್ನು ಬೆಳೆಸುವದರ ಜೊತೆಗೆ ಪಕ್ಷಕ್ಕೆ ಬೆನ್ನೆಲುಬಾಗಬೇಕು. ಮಹಿಳೆಯರಿಂದ ದೇಶ ಕಟ್ಟಲು ಸಾಧ್ಯ ಎಂಬವದನ್ನು ಸಾಬೀತು ಪಡಿಸುವವರೆಗೂ ನಮ್ಮೊಳಗಿನ ಹೋರಾಟಕ್ಕೆ ವಿಶ್ರಾಂತಿ ನೀಡಬಾರದು ಎಂದರು.
ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಚೇದಂಡ ಸುಮಿ ಸುಬ್ಬಯ್ಯ ಮಾತನಾಡಿ, ಮಹಿಳೆಯರಿಗೆ, ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಸೌಲಭ್ಯಗಳನ್ನು ಒದಗಿಸಿದ ಕೇಂದ್ರ ಸರಕಾರ ಮಹಿಳೆಯರ ಅಭಿವೃದ್ಧಿಯ ಕನಸ್ಸು ಕಾಣುತ್ತಿದೆ. ಪಕ್ಷ ಸಂಘಟನೆಗೆ ಮಹಿಳೆಯರು ಬೇಧ, ಭಾವ ಮರೆತು ಕೈಜೋಡಿಸಬೇಕು ಎಂದು ಕರೆ ನೀಡಿದರು.
ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ಬಿ.ಜೆ.ಪಿ. ಪಕ್ಷ ಭಾರತೀಯ ಪ್ರಜಾಪ್ರಭುತ್ವಕ್ಕೆ ಗೌರವ ನೀಡುತ್ತದೆ. ಕುಟುಂಬ ರಾಜಕೀಯ, ತಂದೆ ಮಕ್ಕಳ ರಾಜಕೀಯ ಬಿ.ಜೆ.ಪಿ.ಯಲ್ಲಿ ಇಲ್ಲ. ದೇಶದ ಅಭಿವೃದ್ಧಿ ಬಿ.ಜೆ.ಪಿ.ಯ ಕನಸ್ಸು ಎಂದರು.
ಬಿ.ಜೆ.ಪಿ. ಮಹಿಳಾ ಘಟಕದ ತಾಲೂಕು ಉಪಾಧ್ಯಕ್ಷರುಗಳಾದ ಶಾರದಾ, ಮುತ್ತಮ್ಮ, ರಾಣಿ ನಾರಾಯಣ್, ಕೊಣಿಯಂಡ ಬೋಜಮ್ಮ, ಕಾರ್ಯದರ್ಶಿಗಳಾದ ರತಿ ಅಚ್ಚಪ್ಪ, ಸೀತಮ್ಮ ಸದಸ್ಯರಾದ ಅನಿತಾ, ಧನಲಕ್ಷ್ಮಿ ಉಪಸ್ಥಿತರಿದ್ದರು.