ಗೋಣಿಕೊಪ್ಪಲು,ಫೆ. 27 : ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ಭಗವಾನ್ ರಾಮಕೃಷ್ಣರ 182 ನೇ ಹುಟ್ಟು ಹಬ್ಬ ತಾ. 28 ರಂದು (ಇಂದು) ರಾಮಕೃಷ್ಣ ಶಾರದಾಶ್ರಮದಲ್ಲಿ ನಡೆಯಲಿದೆ.

ಬೆಳಿಗ್ಗೆ 5.30 ಕ್ಕೆ ಮಂಗಳಾರತಿ, ಉಷಾಕೀರ್ತನೆ, 8 ಕ್ಕೆ ಪೂಜೆ, 10 ಕ್ಕೆ ವಿಷ್ಣು ಸಹಸ್ರನಾಮ, 10. 30 ಕ್ಕೆ ಹೋಮ, 11.30 ಕ್ಕೆ ಪ್ರವಚನ, 12.15 ಕ್ಕೆ ಭಜನೆ, 12.45 ಕ್ಕೆ ಆರತಿ, 1 ಕ್ಕೆ ಪ್ರಸಾದ ವಿನಿಯೋಗ, ಸಂಜೆ 6 ಕ್ಕೆ ಆರತಿ ಮತ್ತು ಭಜನೆ, 7 ಕ್ಕೆ ಬೆಂಗಳೂರಿನ ವಿಧ್ವಾನ್ ದತ್ತಾತ್ರೇಯ ವೇಲಣ್‍ಕರ್ ತಂಡದಿಂದ ಹರಿಕತೆ ನಡೆಯಲಿದೆ ಎಂದು ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧಸ್ವರೂಪ ನಂದಾಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.