ಮಡಿಕೇರಿ, ಫೆ. 27: ವಿಶ್ವ ದಂತ ಶಿಕ್ಷಣ ಸಂಘದ ಸಹಯೋಗ ದೊಂದಿಗೆ ವೀರಾಜಪೇಟೆ ದಂತ ಮಹಾವಿದ್ಯಾಲಯದ ಆಶ್ರಯದಲ್ಲಿ ಪ್ರಥಮ ವರ್ಷದ ದಂತ ಪದವೀಧರರ ಕಾರ್ಯಕ್ರಮವನ್ನು ದಂತ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಅತಿಥಿ ಉಪನ್ಯಾಸಕರು ಸಂಶೋಧನೆಯಲ್ಲಿನ ಮೂಲಭೂತ ಸೌಕರ್ಯಗಳು ಹಾಗೂ ಉಪಯೋಗಗಳ ಬಗ್ಗೆ ಇಲ್ಲಿ ನೆರೆದ ಪದವೀಧರರಿಗೆ ಮನವರಿಕೆ ಮಾಡಿಕೊಡುತ್ತಾರೆ.
ದೇಶದ ಸಂಶೋಧನೆಯು ವಿವಿಧ ರೀತಿಯ ಅಸ್ತಿತ್ವದಲ್ಲಿರುವ ಹಾಗೂ ಆಶಾಭಂಗವಾಗುವ ಸರಕಾರದ ನೀತಿಗಳಿಂದ ಮುಗ್ಗರಿಸಿದೆ. ಕಳೆದ 7 ದಶಕಗಳಿಂದ ನಡೆದುಕೊಂಡು ಬಂದಿರುವ ಈ ಅಸಮರ್ಥತೆಯನ್ನು ಸರಿಪಡಿಸಲು ಮೂಲಭೂತ ಸೌಕರ್ಯಗಳ ಅವಶ್ಯಕತೆ ಕಂಡುಬರುತ್ತಿದೆ.
ಪ್ರಪಂಚದ ಸಂಶೋಧನೆಯಲ್ಲಿ ಭಾರತದ ಪಾಲು ತೀರಾ ಹತಾಶದಾಯಕ. ಭಾರತ ದೇಶ ಅತೀ ಹೆಚ್ಚು ವಿದ್ಯಾಸಂಸ್ಥೆಗಳನ್ನು ಹೊಂದಿದ್ದರೂ ಸಂಶೋಧನೆಯಲ್ಲಿ ನಿರಾಶದಾಯಕ ಪಾಲನ್ನು ಹೊಂದಿರುತ್ತದೆ. ಅದರಲ್ಲೂ ವೈದ್ಯಕೀಯ ರಂಗದಲ್ಲಿ ಶೇ. 4.3, ವಿಜ್ಞಾನ ರಂಗದಲ್ಲಿ ಶೇ. 3.4, ಸಾಮಾಜಿಕ ವಿಜ್ಞಾನದಲ್ಲಿ ಶೇ. 1.6, ಹಕ್ಕುಪತ್ರ ಶೇ. 2 ಸಂಶೋಧನೆಯ ಪಾಲು ಹೊಂದಿರುತ್ತದೆ.
ಏಷ್ಯಾ ಖಂಡದಲ್ಲಿ ಅತೀ ಚಿಕ್ಕ ರಾಷ್ಟ್ರಗಳಾದ ದಕ್ಷಿಣ ಕೊರಿಯ 7ನೇ ವಿಶ್ವ ದರ್ಜೆಯ ಹಾಗೂ ತೈವಾನ್ 3ನೇ ವಿಶ್ವ ದರ್ಜೆಯ ವಿಶ್ವವಿದ್ಯಾಲಯ ಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಕೊಡಗು ದಂತ ಮಹಾವಿದ್ಯಾಲಯ ವಾರ್ಷಿಕ ದಂತ ಪದವೀಧರರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತ ಮತ್ತು ದಕ್ಷಿಣ ಏಶೀಯಾದ ವಿವಿಧ ವಿದ್ಯಾಸಂಸ್ಥೆ ಗಳಿಂದ ಬಂದು ತಮ್ಮ ಸಂಶೋಧನೆ ಗಳನ್ನು ಹಂಚಿಕೊಳ್ಳಲಿದ್ದಾರೆ.