ಮಡಿಕೇರಿ, ಫೆ. 28: ‘ನಾವು ಮನುಜರು, ಏನೂ ತಪ್ಪು ಮಾಡದವರು, ನಮ್ಮಲ್ಲಿ ಮನುಷ್ಯತ್ವವನ್ನು ಕಾಣಿ’ ಎಂದು ಒಂದು ವಿದ್ಯಾರ್ಥಿ ಸಮೂಹ ಕಿರು ನಾಟಕ ಪ್ರದರ್ಶಿಸಿದರೆ, ಮತ್ತೊಂದು ತಂಡ ಹಿಂದಿ ಹಾಡಿಗೆ ನೃತ್ಯ, ಇನ್ನೊಂದು ತಂಡ ಜಾನಪದ ನೃತ್ಯ ಇತ್ಯಾದಿ ಪ್ರದರ್ಶಿಸಿ ಇಂದು ಮೈತ್ರಿ ಸಭಾಂಗಣದಲ್ಲಿ ‘ಮಕ್ಕಳ ಹಬ್ಬ’ ದಲ್ಲಿ ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಸಿದರು.ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕ, ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮವು ನಗರದ ಮೈತ್ರಿ ಸಭಾಂಗಣದಲ್ಲಿ ಜಿಲ್ಲೆಯ ಸುಮಾರು ಹನ್ನೆರಡು

(ಮೊದಲ ಪುಟದಿಂದ) ಶಾಲೆಗಳಿಂದ ಇಪ್ಪತ್ತು ತಂಡಗಳು, ಏಳುನೂರು ವಿದ್ಯಾರ್ಥಿಗಳು ಲಗುಬಗೆಯಿಂದ ಭಾಗವಹಿಸಿ ಸಾಂಸ್ಕøತಿಕ ಕಾರ್ಯಕ್ರಮಗಳು, ಒಳಾಂಗಣ ಮತ್ತು ಹೊರಾಂಗಣ ಚಟುವಟಿಕೆ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡರು.

ಸಂತ್ರಸ್ತ ತಂದೆಯೊಬ್ಬ ಸಮಾಜದ ಅಸಡ್ಡೆ, ಶೋಷಣೆಗಳಿಂದ ನೊಂದು ಅಸುನೀಗುತ್ತಾನೆ. ಅವನ ಮಕ್ಕಳು ಅದೇ ದುಃಸ್ಥಿತಿಯಲ್ಲಿ ಬವಣೆ ಪಟ್ಟು ಪ್ರತಿಭಟನೆ ನಡೆಸುವ ನಾಟಕ ಬಾಲಮಂದಿರದ ವಿದ್ಯಾರ್ಥಿಗಳಿಂದ ಪ್ರದರ್ಶಿತವಾಯಿತು.

ಈ ಸಂದರ್ಭ ಹೇಮಂತ ಪಿ.ಬಿ.(ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ), ಕು.ಅರ್ಚನಾ ವಿ.ಎನ್.(ಸರಕಾರಿ ಪ್ರೌಢಶಾಲೆ ಹಾಕತ್ತೂರು), ಮಾ.ನೂತನ್ ಪಿ.ಎನ್.(ಕೇಂದ್ರೀಯ ವಿದ್ಯಾಲಯ ಕೊಡಗು), ಕು.ದೀಪಾಲಿ ದೇಚಮ್ಮ ಎನ್.ಎ(ಲಯನ್ಸ್ ಹೈಸ್ಕೂಲ್ ಗೋಣಿಕೊಪ್ಪಲು), ಕು.ರವೀನಾ ಧರ್ಮಪ್ಪ(ಜ್ಞಾನಗಂಗಾ ರೆಸಿಡೆನ್ಸಿಯಲ್ ಸ್ಕೂಲ್ ಹಾರಂಗಿ), ಕು.ಮೌಲ್ಯ ಸಿ.ವೈ. (ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್), ಕು.ಅಕ್ಷತಾ ದೇವಿ ಎ.(ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್), ಕು.ಕೋಡಿ ಲಾಸ್ಯ ಚಂದ್ರಶೇಖರ್ (ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್), ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದಕ್ಕಾಗಿ 10,000 ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಮಕ್ಕಳು ಮುಂದಿನ ಪ್ರಜೆಗಳು, ಮಕ್ಕಳು ಈಗ ಕಲಿತಿದ್ದನ್ನು ಮುಂದೆ ಮೈಗೂಡಿಸಿಕೊಳ್ಳಬೇಕು. ಮಕ್ಕಳು ನೀವು ರಂಜಿಸಿ ಇತರರನ್ನು ರಂಜಿಸಿ, ಪಾಠದ ಜೊತೆಗೆ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದರು.

ಶಕ್ತಿ ದಿನಪತ್ರಿಕೆಯ ಸಂಪಾದಕ ಬಿ.ಜಿ. ಅನಂತಶಯನ ಅವರು ಮಾತನಾಡಿ ಪೋಷಕರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಮೇಲೆ ಒತ್ತಡ ಹಾಕಬಾರದು. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು ಹಾಗೂ ಮಕ್ಕಳು ತಮ್ಮಲ್ಲಿ ವಿಶೇಷ ಶಕ್ತಿ ಇದೆ ಎಂದು ತಿಳಿದು ಮುಂದೆ ಬರಬೇಕು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು ಅವರು ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಮಕ್ಕಳಿಗೆ ಸೂಕ್ತ ವಾತಾವರಣ ನಿರ್ಮಿಸಿ ಕೊಡುವದು ಎಲ್ಲರ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಉತಮ ಪ್ರಜೆಯಾಗಲು ಹಾಗೂ ಅವರ ಸ್ವಾವಲಂಬಿ ಜೀವನಕ್ಕೆ ಅಡಿಪಾಯ ಹಾಕುವದು ನಮ್ಮ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕದ ಉಪ ನಿರೀಕ್ಷಕರಾದ ಕರೀಂ ರಾವತರ್, ಮಕ್ಕಳ ಕಲ್ಯಾಣ ಸಮಿತಿಯ ¸ದಸ್ಯರಾದ ಅನಿತಾ ಕಾವೇರಪ್ಪ, ಗಾಯತ್ರಿ ಇತರರು ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಮ್ತಾಜ್ ಸ್ವಾಗತಿಸಿ, ಕೆ.ವಿ.ಸತ್ಯಭಾಮ ನಿರೂಪಿಸಿದರು.