ಭಾಗಮಂಡಲ, ಮಾ. 1: ಕೆದಂಬಾಡಿ ಕ್ರಿಕೆಟ್ ಕ್ಲಬ್ ಮತ್ತು ಕೆದಂಬಾಡಿ ಕುಟುಂಬಸ್ಥರು ಸೇರಿ ನಡೆಸುವ ಕೆದಂಬಾಡಿ ಕ್ರಿಕೆಟ್ ಹಬ್ಬವು ಏಪ್ರಿಲ್ 6ರಿಂದ 21ರವರೆಗೆ ನಡೆಯಲಿದೆ ಎಂದು ಕೆದಂಬಾಡಿ ಐನ್‍ಮನೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕ್ಲಬ್‍ನ ಅಧ್ಯಕ್ಷ ಕೆದಂಬಾಡಿ ಜಯಪ್ರಕಾಶ್ ಹೇಳಿದರು. ಈ ಬಾರಿ 180 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಳೆದ ವರ್ಷ 160 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ ದಕ್ಷಿಣ ಕನ್ನಡದ ಗೌಡ ಕುಟುಂಬಗಳು ಭಾಗವಹಿಸಲಿವೆ. ಕೊನೆಯ ದಿನ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಈ ವರ್ಷ ನಡೆಯುತ್ತಿರುವ 24ನೇ ಕ್ರಿಕೆಟ್ ಹಬ್ಬದ ವೇದಿಕೆಗೆ ಮೈದಾನ ಸಜ್ಜುಗೊಂಡಿದೆ. ಮುಂದಿನ 25ನೇ ವರ್ಷದ ಬೆಳ್ಳಿ ಹಬ್ಬಕ್ಕೆ ಕ್ರಿಕೆಟ್ ಕ್ಲಬ್ ಹೊಸ

(ಮೊದಲ ಪುಟದಿಂದ) ರೂಪದಲ್ಲಿ ನಡೆಸುವ ಚಿಂತನೆಯನ್ನು ಹೊಂದಿದ್ದು ಹೊನಲು ಬೆಳಕಿನ ಪಂದ್ಯಗಳನ್ನು ನಡೆಸಲು ಉದ್ದೇಶಿಸಿದೆ ಎಂದರು. ಕ್ಲಬ್‍ನ ಕಾರ್ಯದರ್ಶಿ ದಿಲ್ಲಿ ಮಾತನಾಡಿ ಕುಟುಂಬಗಳ ತಂಡಗಳು ಹೆಸರು ನೋಂದಾಯಿಸಲು ಮಾರ್ಚ್ 25 ಕೊನೆಯ ದಿನಾಂಕವಾಗಿದೆ ಎಂದರು. ಮೈದಾನದ ಒಂದು ಬದಿಯಲ್ಲಿ ಚಿಕ್ಕವೀರರಾಜೇಂದ್ರ ಅರಸನ ಸಾಮಂತ ಪ್ರಾಂತ್ಯ ರಾಜ ಚೆಟ್ಟಿಯಾರ್ ಅರಸ್ ನಿರ್ಮಾಣ ಮಾಡಿದ ಕುಟುಂಬದ ಹಿರಿಯರ ನೆನಪಿಗೆ ಕಟ್ಟಿಸಿದ ಗೋರಿಯನ್ನು ಅದೇ ರೂಪದಲ್ಲಿ ಮರುನಿರ್ಮಾಣ ಮಾಡಲಾಗುತ್ತಿದೆ. ಕ್ರಿಕೆಟ್ ಹಬ್ಬಕ್ಕೆ ಸಂಬಂಧಿಸಿದಂತೆ ಕೆಲವೊಂದು ಮೂಲಭೂತ ಸೌಲಭ್ಯಗಳ ಕೆಲಸ ಕಾರ್ಯ ನಡೆಯುತ್ತಿದೆ ಎಂದರು. ಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್, ಸುರೇಶ್, ಕುಟುಂಬಸ್ಥ ರಾದ ರಮೇಶ್, ಋಷಿಕುಮಾರ್, ವಾಸು ಬೆಳ್ಯಪ್ಪ, ಪ್ರವೀಣ್, ಮನೋಹರ್, ಸುರೇಶ್, ರವಿ ಉಪಸ್ಥಿತರಿದ್ದರು.

ತಂಡಗಳ ನೋಂದಣಿಗೆ ದಿಲ್ಲಿ (9448698314), ರವಿ (9448422289), ಜಯಪ್ರಕಾಶ್ (8762623921) ಇವರುಗಳನ್ನು ಸಂಪರ್ಕಿಸಬಹುದಾಗಿದೆ.