ಮಡಿಕೇರಿ, ಮಾ. 1: ನಾಡಿನ ಹಿರಿಯ ಸಾಹಿತಿ ದಿ.ವಿ.ಎಸ್.ರಾಮಕೃಷ್ಣ ಅವರ ಸಾಹಿತ್ಯದ ವಿಚಾರವನ್ನು ಇಂದಿನ ಪೀಳಿಗೆಯವರು ತಿಳಿದು ಕೊಳ್ಳುವದರ ಮೂಲಕ ಅವರ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಹೇಳಿದರು. ಮಡಿಕೇರಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ವತಿಯಿಂದ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ದಿವಂಗತ ವಿ.ಎಸ್.ರಾಮಕೃಷ್ಣ ದತ್ತಿನಿಧಿ ಉಪನ್ಯಾಸದಲ್ಲಿ ದಿ.ವಿ.ಎಸ್.ರಾಮಕೃಷ್ಣ ಸಾಹಿತ್ಯ ಕೃಷಿಯ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು.

ದಿ.ವಿ.ಎಸ್.ರಾಮಕೃಷ್ಣ ಅವರು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಮೇಲೆ ಕವಿ ಲಕ್ಷ್ಮೀಶನ ಪ್ರಭಾವವಿತ್ತು. 1943ರಲ್ಲಿಯೇ ಕಾವೇರಿ ವಿಜಯ ಪುಸ್ತಕವನ್ನು ಬರೆದಿದ್ದರು. ಕವಿಗಳಾಗಿ ಮಾತ್ರವಲ್ಲದೇ ಸಾಹಿತಿಯಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು.

ಕನ್ನಡ, ಇಂಗ್ಲೀಷ್, ಕೊಡವ ಭಾಷೆಯಲ್ಲಿ ಪರಿಣಿತಿ ಹೊಂದಿದ್ದ ಇವರು ತ್ರಿಭಾಷಾ ಸಾಹಿತಿ ಎಂದು ಗುರುತಿಸಿಕೊಂಡಿದ್ದರು. ಇಂದಿನ ವಿದ್ಯಾರ್ಥಿಗಳು ಅವರ ಧೀಮಂತ ವ್ಯಕ್ತಿತ್ವ, ಬದುಕಿನ ನಿಷ್ಠೆಯನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಕಾಲ ಹರಿದುಹೋಗುವ ನೀರಿನ ಹಾಗೇ. ಬದುಕು ಕೂಡ ಹಾಗೆ. ಕಸಾಪ ಏರ್ಪಡಿಸುವ ಹಲವು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ರಾಮಕೃಷ್ಣ ಅವರ ಶ್ರೀರಾಮಚರಿತಾಮೃತಂ ಹಾಗೂ ಕಾವೇರಿ

(ಮೊದಲ ಪುಟದಿಂದ) ವಿಜಯ ಕೃತಿಯಲ್ಲಿನ ಕಾವ್ಯವನ್ನು ಹಾಡುವ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು.

ದಿ. ಅಸ್ರಣ್ಣ ಮತ್ತು ಲೀಲಾ ಅಸ್ರಣ್ಣ ದತ್ತಿನಿಧಿ ಉಪನ್ಯಾಸ

ಸ್ವಾತಂತ್ರ್ಯ ಹೋರಾಟಗಾರ ದಿ. ಅಸ್ರಣ್ಣ ಹಾಗೂ ಲೀಲಾ ಅಸ್ರಣ್ಣ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೊಡಗಿನ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ವಿಚಾರ ಕುರಿತು ವಕೀಲ ಎಂ.ಎಸ್. ಜಯಚಂದ್ರ ಉಪನ್ಯಾಸ ನೀಡಿದರು. ಇತಿಹಾಸ ಕಾಲದಿಂದಲೂ ಕೊಡಗು ಶ್ರೀಮಂತಿಕೆಯನ್ನು ಹೊಂದಿರುವ ಜಿಲ್ಲೆ. ತನ್ನದೇ ಆದ ಕಲೆ, ಸಂಸ್ಕøತಿ ಯನ್ನು ಉಳಿಸಿಕೊಂಡು ಬಂದಿದ್ದು, ಆ ಮೂಲಕ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದರು.

ಕೊಡಗು ದಿನದಿಂದ ದಿನಕ್ಕೆ ಪ್ರವಾಸೋದ್ಯಮದಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ. ಪ್ರವಾಸೋದ್ಯಮದಿಂದ ಅನುಕೂಲತೆ ಇದ್ದಷ್ಟೇ ಅನಾನು ಕೂಲತೆ ಕೂಡ ಇದೆ. ನಾವು ಇಂದು ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರಕ್ಕೆ ಕಂಟಕವನ್ನು ತಂದೊಡ್ಡು ತ್ತಿದ್ದೇವೆ ಎಂದು ವಿಷಾದಿಸಿದ ಅವರು, ಸ್ವತಃ ನಾವೇ ಮುತುವರ್ಜಿ ವಹಿಸಿ ಪರಿಸರವನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಕೆ.ಪಿ.ಗುರುರಾಜ್, ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯ ಪ್ರತಿ ಸಂದರ್ಭದಲ್ಲೂ ಒಂದೇ ತೆರನಾಗಿ ಇರುವದಿಲ್ಲ. ಅಂತಹ ಸಂದರ್ಭದಲ್ಲಿ ಉಪನ್ಯಾಸ ಕಾರ್ಯಕ್ರಮದ ಅಗತ್ಯ ವಿರುತ್ತದೆ ಇಂತಹ ಕಾರ್ಯಕ್ರಮ ಗಳಿಂದ ಮಾಹಿತಿ ಹಾಗೂ ಜ್ಞಾನದ ಶಕ್ತಿ ಪಡೆದುಕೊಳ್ಳ ಬಹುದೆಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಇತರ ಭಾಷೆಗಳಿಗಿಂತ ಸುಲಲಿತವಾಗಿ ಕನ್ನಡವನ್ನು ಅರ್ಥೈಸಿಕೊಳ್ಳುವದು ಸಾಧ್ಯ. ಅದು ಕನ್ನಡಕ್ಕೆ ಇರುವ ಶಕ್ತಿ. ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಇಂತಹ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಶಾಲಾ ಕಾಲೇಜಿನಲ್ಲಿ ಕನ್ನಡದ ಕಾರ್ಯಕ್ರಮ ಹಮ್ಮಿಕೊಳ್ಳುವದರ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಲಾಗುವದು ಎಂದರು. ವಿದ್ಯಾರ್ಥಿ ಜೀವನ ಜ್ಞಾನವನ್ನು ಸಂಪಾದಿಸುವ, ಜ್ಞಾನವನ್ನು ಅರ್ಜಿಸಿಕೊಳ್ಳುವ ಕಾಲಘಟ್ಟವಾಗಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಉತ್ತಮ ವಿಚಾರಗಳನ್ನು ತುಂಬಿದರೆ ಮನನ ಮಾಡಿಕೊಳ್ಳಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಕಸಾಪದ ಗೌರವ ಕಾರ್ಯದರ್ಶಿ ಕೂಡಕಂಡಿ ದಯಾನಂದ್ ಪ್ರಾಸ್ತಾವಿಕ ನುಡಿಯಾಡಿದರು.

ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್, ಕ.ಸಾ.ಪ. ಗೌರವ ಕಾರ್ಯದರ್ಶಿ ಬಾಳೆಯಡ ಕಿಶನ್, ಕೋಶಾಧಿಕಾರಿ ಬಾಳೆಕಜೆ ಯೋಗೇಂದ್ರ, ಪದಾಧಿಕಾರಿಗಳಾದ ಪರ್ಲಕೋಟಿ ಸುನಿತಾ ಪ್ರೀತು, ಕೇಕಡ ಇಂದುಮತಿ ರವೀಂದ್ರ, ಚೋಕಿರ ಅನಿತಾ ದೇವಯ್ಯ, ಶಾಲೆಯ ಕನ್ನಡ ಶಿಕ್ಷಕಿ ಶಶಿಕಲಾ, ಮತ್ತಿತರರು ಇದ್ದರು.

ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಕ್ತಿಗೀತೆಯಲ್ಲಿ ಹೇಮಂತ್ (ಪ್ರ), ಆನಂದಿ (ದ್ವಿ) ಲಕ್ಷ್ಮಿ (ತೃ), ಆಶುಭಾಷಣದಲ್ಲಿ ದಿವ್ಯ (ಪ್ರ), ಹರಿಪ್ರಸಾದ್ (ದ್ವ್ವಿ), ಹೇಮಂತ್ (ತೃ), ಸ್ವರಚಿತ ಕವನದಲ್ಲಿ ಮಣಿ (ಪ್ರ), ಯೋಗೇಶ್ (ದ್ವಿ), ಜನಿತಾ (ತೃ). ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿ ಗಮನ ಸೆಳೆದರು.

ಶಿಕ್ಷಕಿ ಕ.ಸಾ.ಪ. ಪದಾಧಿಕಾರಿ ಪುಷ್ಪಾ ವಂದಿಸಿ, ವಿದ್ಯಾರ್ಥಿ ವಿನೋದ್ ಕಾರ್ಯಕ್ರಮ ನಿರೂಪಿಸಿದರು.