*ಗೋಣಿಕೊಪ್ಪಲು, ಮಾ. 2 : ಭಾಷಾ ಚಲನಚಿತ್ರ ಪ್ರಶಸ್ತಿ ಪಡೆದ ಕೊಡವ ಭಾಷಾ ಪ್ರಾದೇಶಿಕ ಚಲನಚಿತ್ರ ‘ತೆಳ್‍ಂಗ್ ನೀರ್’ ತಾ. 3 ರಿಂದ ಇಲ್ಲಿನ ಸ್ವಾತಂತ್ರ್ಯ ಹೋರಾಟ ಭವನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಲನಚಿತ್ರ ನಿರ್ದೇಶಕ ಗೋಪಿ ಪೀಣ್ಯ ತಿಳಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗೋಪಿ ಪೀಣ್ಯ, ತಾ 3ರಂದುಬೆಳಿಗ್ಗೆ 11ಕ್ಕೆ ಮಧ್ಯಾಹ್ನ 2.30.ಕ್ಕೆ ಸಂಜೆ 6.30ಕ್ಕೆ ಪ್ರದರ್ಶನ ಕಾಣಲಿದೆ.

ಕೊಡವ ಭಾಷೆ ಆಧರಿಸಿ ಕೊಡಗಿನ ಪ್ರಕೃತಿಗಳನ್ನು ಸೆರೆಹಿಡಿದು ಚಲನಚಿತ್ರ ನಿರ್ಮಿಸಲಾಗಿದೆ. ಇಲ್ಲಿನ ಮೂಲ ನಿವಾಸಿಗಳು ಉದ್ಯೋಗಕ್ಕಾಗಿ ಪಟ್ಟಣಗಳಿಗೆ ತೆರಳಿ ಇಲ್ಲಿನ ಸಂಸ್ಕøತಿ, ಕೃಷಿ ಆಧಾರಿತ ಬದುಕನ್ನು ಕಳೆದುಕೊಳ್ಳುವ ವಿಚಾರವನ್ನು ಚಲನಚಿತ್ರ ರೂಪದಲ್ಲಿ ಮೂಡಿಸಲಾಗಿದೆ ಎಂದರು.

ಮಡಿಕೇರಿಯ ಟೌನ್ ಹಾಲ್‍ನಲ್ಲಿ, ವಿರಾಜಪೇಟೆ ಕೊಡವ ಸಮಾಜದಲ್ಲಿ ಸಿನಿಮಾ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆದಿದೆ. 2015ರ ಸಾಲಿನ ಕರ್ನಾಟಕ ಸರಕಾರ ನೀಡುವ ಅತ್ಯುತ್ತಮ ಭಾಷಾ ಚಿತ್ರ ಪ್ರಶಸ್ತಿ ಪಡೆದುಕೊಂಡ ಚಲನಚಿತ್ರ ಇದಾಗಿದೆ.

ಅಮೇರಿಕಾದ 2 ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಲಂಡನ್ನಿನ ಪೋಡ್ಸ್ ಮೌತ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಗತ್ತಿನ ಸಿನಿಮಾಗಳ ಜೊತೆ ಪೈಪೋಟಿ ನೀಡಿದೆ.

ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲೂ ಪ್ರದರ್ಶನ ಗೊಂಡಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಡಿ.ಆರ್.ಸಂಪತ್, ಭಾಷಾ ಅನುವಾದ ಸಹನಿರ್ದೇಶನ ಬೆಲ್ಲು ಬೆಳ್ಯಪ್ಪ, ಸಂಗೀತಾ, ಡಾ. ಶಮಿತಾ ಮಲ್ನಾಡ್, ಸಂಕಲನ ಬಿ.ಎಸ್. ಕೆಂಪರಾಜು, ಛಾಯಾಗ್ರಹಣ ರಮೇಶ್ ರಾಜ್, ನಿರ್ಮಾಣ ಲ್ಯಾಟಿಟ್ಯೂಡ್, ಡಾ. ಲಕ್ಷ್ಮಿ, ಡಾ. ನವೀನ್ ಕೃಷ್ಣ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಗೋಪಿ ಪೀಣ್ಯ ಇವರುಗಳು ಕೊಡವ ಚಲನಚಿತ್ರ ನಿರ್ಮಿಸಲು ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು.

ಕಲಾವಿದರಾಗಿ ಶ್ರೀರಾಜ್, ವಾಂಚಿರ ವಿಠಲ್ ನಾಣಯ್ಯ, ನೆರವಂಡ ಉಮೇಶ್, ಕಟ್ಟೆರ ವಿದ್ಯಾ ಅಯ್ಯಪ್ಪ, ಅಡ್ಡಂಡ ಅನಿತಾ ಕಾರ್ಯಪ್ಪ, ತೇಲಪಂಡ ಪವನ್ ತಮ್ಮಯ್ಯ, ಮಂಡಿರ ಪದ್ಮಾ ಬೋಪಯ್ಯ, ಕೋಟ್ರಮಾಡ ಅಚ್ಚಪ್ಪ, ಮುಕ್ಕಾಟಿರ ಸುಷ್ಮ ಸೋಮಯ್ಯ, ತೇಲಪಂಡ ಯಾಶಿ ತಮ್ಮಯ್ಯ, ಚೆಡಿಯಂಡ ಸಂತೋಷ್ ಮೇದಪ್ಪ, ಕಾಳಿಮಾಡ ದಿನೇಶ್ ನಾಚಪ್ಪ, ಮೇವಾಡ ಅಪ್ಪಣ್ಣ, ಕೊಟ್ಟ್‍ಕತ್ತಿರ ಪ್ರಕಾಶ್ ಕಾರ್ಯಪ್ಪ, ನೆಲ್ಲಚಂಡ ರೇಖಾ ನಾಣಯ್ಯ, ಮುಕ್ಕಾಟಿರ ಗೊಂಬೆ ಸೋಮಯ್ಯ, ತೇಲಪಂಡ ಕವನ್ ಕಾರ್ಯಪ್ಪ, ಆಯುಧ್ ಅಪ್ಪಣ್ಣ ಕೊಟ್ಟಂಗಡ, ಕಲ್ಲೇಟಿರ ಪ್ರೇಮ, ವಾಂಚಿರ ಜಯ ನಂಜಪ್ಪ ಕಾಣಿಸಿಕೊಂಡಿದ್ದಾರೆ.