ಮಡಿಕೇರಿ, ಮಾ. 2: 33/11ಕೆವಿ ಸಿದ್ದಾಪುರ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾಗುವದರಿಂದ ತಾ.4 ರÀಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 33/11ಕೆವಿ ಸಿದ್ದಾಪುರ, ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಅದ್ದರಿಂದ ಸಿದ್ದಾಪುರ, ಮಾಲ್ದಾರೆ, ಗುಹ್ಯ, ಕರಡಿಗೋಡು, ನೆಲ್ಯಹುದಿಕೇರಿ, ಅಭ್ಯತ್‍ಮಂಗಲ, ಪುಲಿಯೇರಿ, ಅಮ್ಮತ್ತಿ, ಹುಂಡಿ, ಇಂಜಿಲಗೇರಿ, ಬೀಟಿಕಾಡು, ಬಾಡಗ ಬಾಣಂಗಾಲ, ಹುಂಡಿ, ಬಜೆಗೊಲ್ಲಿ, ಮೇಕೂರು ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.