ಗೋಣಿಕೊಪ್ಪಲು, ಮಾ. 2: ನೆಹರೂ ಯುವ ಕೇಂದ್ರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಯುವ ಸಂಪರ್ಕ ಸಭೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ. ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ, ಜಿಲ್ಲೆಯಲ್ಲಿ ಬಹುತೇಕ ಸಂಘಗಳು ನಿಷ್ಕ್ರೀಯಗೊಳ್ಳುತ್ತಿದ್ದು, ಇವುಗಳ ಪುನಶ್ಚೇತನಕ್ಕೆ ಯುವ ಒಕ್ಕೂಟ ಮುಂದಾಗಬೇಕು. ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಬಿ ಜೋಯಪ್ಪ, ಜಿಲ್ಲೆಯಲ್ಲಿನ ಸಂಘ-ಸಂಸ್ಥೆಗಳನ್ನು ಬಲಿಷ್ಠಗೊಳಿಸಿ ಸಂಘಟಿತಗೊಳಿಸುವ ಕಾರ್ಯವನ್ನು ಒಕ್ಕೂಟ ಮಾಡಬೇಕಿದೆ ಇದಕ್ಕೆ ತಾಲೂಕು ಒಕ್ಕೂಟಗಳು ಬೆಂಬಲ ನೀಡಬೇಕು ಎಂದರು. ಯುವಜನತೆ ಮೋಜು ಮಸ್ತಿಗೆ ಬಲಿಯಾಗುತ್ತಿರು ವದು ವಿಷಾದನೀಯ ಕೆಟ್ಟ ಚಟಗಳಿಗೆ ಬಲಿಯಾಗದೆ ತಮ್ಮ ಭವಿಷ್ಯ ರೂಪಿಸುವತ್ತ ಚಿಂತಿಸುವ ಅಗತ್ಯ ಇಂದಿನ ಯುವಜನತೆಗಿದ್ದು ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಪ್ರತಿಭೆ ಅನಾವರಣ ಮಾಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ, ಜೆಸಿಐ ಪೊನ್ನಂಪೇಟೆ ನಿಸರ್ಗದ ನಿಕಟಪೂರ್ವಾಧ್ಯಕ್ಷ ರಾಮದಾಸ್, ತಾಲೂಕು ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಡಾಡು ಜೋಸೆಫ್ ಉಪಸ್ಥಿತರಿದ್ದರು.