ಮಡಿಕೇರಿ, ಮಾ. 2: ಹದಿನಾಲ್ಕು ವರ್ಷಗಳ ನಿರಂತರ ಪ್ರಯತ್ನದಿಂದಾಗಿ ಇದೀಗ ಮಡಿಕೇರಿ ನಗರ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ ದೊರೆತಿದ್ದು, ಉದ್ದೇಶಿತ ಖಾಸಗಿ ಬಸ್ ನಿಲ್ದಾಣ ಜಾಗವನ್ನು ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಪರಿಶೀಲನೆ ನಡೆಸಿ ಗದ್ದೆಯಿಂದ 5 ಅಡಿ ಆಳದಿಂದ ಅಡಿಪಾಯ ನಿರ್ಮಾಣ ಮಾಡುವಂತೆ ಗುತ್ತಿಗೆದಾರರು ಹಾಗೂ ಇಂಜಿನಿಯರ್‍ಗಳಿಗೆ ಸೂಚನೆ ನೀಡಿದರು.ಉದ್ದೇಶಿತ ನಗರ ಖಾಸಗಿ ಬಸ್ ನಿಲ್ದಾಣ ಜಾಗದಲ್ಲಿ ಹಾಕಿರುವ ಮಣ್ಣನ್ನು ನೆಲಸಮಗೊಳಿಸಲಾಗುತ್ತಿದ್ದು, ನಗರಸಭಾ ಆಡಳಿತ ಮಂಡಳಿ ವತಿಯಿಂದ ಇಂದು ಪರಿಶೀಲನೆ ಮಾಡಲಾಯಿತು. ಈ ಸ್ಥಳದಲ್ಲಿದ್ದ ಗುತ್ತಿಗೆದಾರರು ಹಾಗೂ ಇಂಜಿನಿಯರುಗಳಿಗೆ ನಗರಸಭಾ ಅಧ್ಯಕ್ಷರು ಹಾಗೂ

ಗದ್ದೆಯ 5 ಅಡಿ ಆಳದಿಂದ ಅಡಿಪಾಯ ನಿರ್ಮಾಣಕ್ಕೆ ಸೂಚನೆ(ಮೊದಲ ಪುಟದಿಂದ) ಸ್ಥಾಯಿ ಸಮಿತಿ ಅಧ್ಯಕ್ಷರು ಉದ್ದೇಶಿತ ಖಾಸಗಿ ಬಸ್ ನಿಲ್ದಾಣ ಜಾಗವು ಗದ್ದೆ ಪ್ರದೇಶವಾಗಿದ್ದು, ಬಸ್ ನಿಲ್ದಾಣ ಕಟ್ಟಡ ಭದ್ರವಾಗಿ ನಿಲ್ಲಬೇಕಾದರೆ ಅಡಿಪಾಯ ಗಟ್ಟಿಯಾಗಿರಬೇಕು. ಹಾಗಾಗಿ ಅಡಿಪಾಯವನ್ನು ಗದ್ದೆ ಮಣ್ಣಿನಿಂದ 5 ಅಡಿಯಷ್ಟು ಆಳದಿಂದ ನಿರ್ಮಾಣ ಮಾಡಿದಲ್ಲಿ ಈಗಿರುವ ಮಣ್ಣಿನ ಸಮತಟ್ಟಿನಿಂದ ಸುಮಾರು 9-10 ಅಡಿಯಷ್ಟು ಆಳದಿಂದ ನಿರ್ಮಾಣ ಮಾಡಿದಂತಾಗುತ್ತದೆ. ಅಡಿಪಾಯವೂ ಗಟ್ಟಿಯಾಗಿ ಮತ್ತು ಭದ್ರವಾಗಿರುತ್ತದೆ ಎಂದು ಸೂಚನೆ ನೀಡಿದರು.

ಈ ಸಂದರ್ಭ ಮೂಡಾ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ಸದಸ್ಯರಾದ ಕೆ.ಎಂ. ಗಣೇಶ್, ಎಂ.ಎ. ಉಸ್ಮಾನ್ ಹಾಜರಿದ್ದರು.