ಚೆಟ್ಟಳ್ಳಿ, ಮಾ. 3: ಚೆಟ್ಟಳ್ಳಿಯ ಕಂಡಕೆರೆ ಬ್ರೈಟ್ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ನಡೆದ ಒಂದನೇ ವರ್ಷದ ಜಿಲ್ಲಾಮಟ್ಟದ 21 ಪಾಯಿಂಟ್ ಬೆಸ್ಟ್ ಆಫ್ ಥ್ರೀ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಇತ್ತೀಚೆಗೆ ಕೊನೆಗೊಂಡಿತು. ತಾ. 23ರಿಂದ ಪ್ರಾರಂಭಗೊಂಡ ಪಂದ್ಯಾಟದಲ್ಲಿ ಜಿಲ್ಲೆಯಿಂದ 48 ತಂಡಗಳು ಭಾಗವಹಿಸಿದ್ದವು. ದಿನಂಪ್ರತಿ 12 ಪಂದ್ಯಾಟಗಳು ನಡೆದು ಸೆಮಿಫೈನಲ್, ಫೈನಲ್ ಮತ್ತು ಲೂಸರ್ ಫೈನಲ್ ಪಂದ್ಯಾಟಗಳು ನಡೆದವು.
ನಂತರ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲಾ, ಮಡಿಕೇರಿಯ ವಕೀಲ ಕುಂಞÂ ಅಬ್ದುಲ್ಲಾ, ಚೆಟ್ಟಳ್ಳಿ ನಗರ ಕಾಂಗ್ರೆಸ್ ಅಧ್ಯಕ್ಷ ಪಪ್ಪು ತಿಮ್ಮಯ್ಯ, ತೀರ್ಥಕುಮಾರ್, ಹಿರಿಯ ಬ್ಯಾಡ್ಮಿಂಟನ್ ಆಟಗಾರರಾದ ಮೊಯಿದ್ದೀನ್ ಮತ್ತಿತರರು ಭಾಗವಹಿಸಿದ್ದರು.
ಕ್ಲಬ್ ಸದಸ್ಯ ಶಶಿ ಮಾತನಾಡಿ, ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ನಂತರ ನಡೆದ ಬಹುಮಾನ ವಿತರಣೆಯಲ್ಲಿ ಕ್ರಮವಾಗಿ ಮೊದಲನೇ ಬಹುಮಾನ ವನ್ನು ಕುಶಾಲನಗರದ ಸದಾಯತ್ ಮತ್ತು ಶ್ರೀನಿವಾಸ್ ಪಡೆದರೆ ದ್ವಿತೀಯ ಬಹುಮಾನವನ್ನು ಮಡಿಕೇರಿಯ ಸತೀಶ್ ಮತ್ತು ವಿಕ್ಕಿ ಪಡೆದರು. ತೃತೀಯ ಬಹುಮಾನವನ್ನು ಸಿದ್ದಾಪುರದ ಡಿಜಿತ್ ಮತ್ತು ಯೂಸಫ್ ತಂಡ ಪಡೆದುಕೊಂಡಿತು. ಸುಂಟಿಕೊಪ್ಪ ಗದ್ದೆಹಳ್ಳದ ಚಾಮು ಕಿರಿಯ ವೇಗದ ಆಟಗಾರ ಕೀರ್ತಿಗೆ ಪಾತ್ರರಾದರು. ಎಲ್ಲಾ ಬಹುಮಾನಕ್ಕೂ ಕ್ರಮವಾಗಿ ಟ್ರೋಫಿ ಮತ್ತು ನಗದು ಬಹುಮಾನ ವಿತರಿಸಲಾಯಿತು.