ಮಡಿಕೇರಿ, ಮಾ. 3: ಶಕ್ತಿಯ ನೂತನ ಸಂಪಾದಕರಾಗಿ ಶಕ್ತಿ ಕಾರ್ಯಾಲಯದಲ್ಲಿ ಜಿ. ಚಿದ್ವಿಲಾಸ್ ಅವರು ಜವಾಬ್ದಾರಿ ವಹಿಸಿಕೊಂಡ ಸಂದರ್ಭ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಶುಭ ಹಾರೈಸಿದರು. ಈ ಸಂದರ್ಭ ನೂತನ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಉಪಸ್ಥಿತರಿದ್ದರು.ಶಕ್ತಿ ದಿನಪತ್ರಿಕೆಯ ನೂತನ ಸಂಪಾದಕರಾಗಿ ಜಿ. ಚಿದ್ವಿಲಾಸ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ಶಕ್ತಿಯ ಆಡಳಿತ ವಿಭಾಗದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಧಾನ ವ್ಯವಸ್ಥಾಪಕರಾಗಿದ್ದ ಶ್ರೀಯುತರನ್ನು ಆಡಳಿತಾಧಿಕಾರಿ ಯನ್ನಾಗಿಯೂ ಆಡಳಿತ ಮಂಡಳಿ ನಿÀಯೋಜಿಸಿದೆ. ಇದುವರೆಗೆ ಸಂಪಾದಕರಾಗಿದ್ದ ಬಿ.ಜಿ.ಅನಂತಶಯನ ಅವರು ಸಲಹಾ ಸಂಪಾದಕರಾಗಿ ನಿಯುಕ್ತಿಗೊಂಡಿದ್ದು, ಜಿ.ರಾಜೇಂದ್ರ ಅವರು ಪ್ರಧಾನ ಸಂಪಾದಕರಾಗಿ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.

ಆಡಳಿತ ವ್ಯವಸ್ಥೆಯೊಂದಿಗೆ ಬರಹದಲ್ಲೂ ಆಸಕ್ತಿ ಹೊಂದಿದ್ದ ಚಿದ್ವಿಲಾಸ್ ಅವರಿಗೆ 2011ರಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ತನಿಖಾ ವರದಿಗಾಗಿ ಪ್ರಶಸ್ತಿ ಹಾಗೂ ಚಿನ್ನದ ಪದಕ ಲಭಿಸಿತ್ತು.

(ಮೊದಲ ಪುಟದಿಂದ) 1993ರಲ್ಲಿ ಜಿಲ್ಲಾ ಮಟ್ಟದಲ್ಲೂ ಪ್ರಶಸ್ತಿಗೆ ಭಾಜನರಾದ ನಂತರ ಆಡಳಿತ ಜವಾಬ್ದಾರಿಯಿಂದಾಗಿ ಬರಹದಲ್ಲಿ ತಮ್ಮನ್ನು ಕಡಿಮೆ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು.

ಪಿ.ಟಿ.ಐ. ನ ಜಿಲ್ಲಾ ವರದಿಗಾರ ರಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರು ದಸರಾ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷರಾಗಿ, 9 ದಿನಗಳ ಕಾರ್ಯಕ್ರಮವನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪತ್ರಿಕಾ ಭವನ ಟ್ರಸ್ಟ್‍ನ ಟ್ರಸ್ಟಿಯಾಗಿ, ಶ್ರೀ ವಿಜಯವಿನಾಯಕ ದೇವಾಲಯದ ಟ್ರಸ್ಟಿಯಾಗಿಯೂ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೊಡಗು ಜಿಲ್ಲಾ ಚೇಂಬರ್‍ನ ಅಧ್ಯಕ್ಷರಾಗಿದ್ದ ಸಂದರ್ಭ ಸುಮಾರು 2500 ಮಂದಿ ನೂತನ ಸದಸ್ಯರ ಸೇರ್ಪಡೆಯೊಂದಿಗೆ 2012ರಲ್ಲಿ ಪ್ರಪ್ರಥಮ ಬಾರಿಗೆ ಬಂಡವಾಳ ಹೂಡಿಕೆದಾರರ ಸಭೆ ಆಯೋಜಿಸಿ ಜಿಲ್ಲೆಯಲ್ಲಿ ಹಲವು ಯೋಜನೆಗಳು ಬರುವಂತೆ ಶ್ರಮವಹಿಸಿದ್ದರು. ಸುಗಮ ಸಂಗೀತದಲ್ಲೂ ಆಸಕ್ತಿ ಹೊಂದಿ ಸುಮಾರು 150 ಕ್ಕೂ ಹೆಚ್ಚು ಕಡೆಗಳಲ್ಲಿ ಕಾರ್ಯಕ್ರಮ ನೀಡಿರುವ ಚಿದ್ವಿಲಾಸ್ ಅವರಿಗೆ 2007ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಜಿಲ್ಲಾ ಚೇಂಬರ್, ಮಡಿಕೇರಿ ಲಯನ್ಸ್ ಕ್ಲಬ್ -ಜೆಸಿಐ ಸಂಸ್ಥೆ ಹಾಗೂ ಇತರ ಸಂಸ್ಥೆಗಳು ಇವರನ್ನು ಗೌರವಿಸಿವೆ. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ, ಸ್ನೇಹ ಸಂಗಮ ಕಲಾವಿದರ ಬಳಗದ ಸಂಚಾಲಕರಾಗಿ, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕøತಿಕ ಸಮಿತಿ ಸಂಚಾಲಕರಾಗಿ, ಮಡಿಕೇರಿ ಎಫ್.ಎಂ.ಕೆ.ಎಂ. ಕಾರ್ಯಪ್ಪ ಕಾಲೇಜಿನ Iಕಿಂಅ ಸದಸ್ಯರಾಗಿ, ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ದಸರಾ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ.