ಮಾನ್ಯ ಓದುಗಾರರೇ, ಕರ್ನಾಟಕದ ಪುಟ್ಟ ಜಿಲ್ಲೆಯಾದ ಕೊಡಗಿನಿಂದ 61 ವರ್ಷಗಳ ಮುಂಚೆ ಉದಯಿಸಿದ ಮೊದಲ ಜಿಲ್ಲಾ ದಿನಪತ್ರಿಕೆ ಶಕ್ತಿ. ಕೊಡಗಿನ ವಿದ್ಯಾವಂತರು, ಜಾತಿ-ಮತ ಭೇದವಿಲ್ಲದೆ ದಿನವು ಶಕ್ತಿ ಪತ್ರಿಕೆಯನ್ನು ಓದದೇ ಇರಲಾರರು ಎಂಬದು ನನ್ನ ಅನಿಸಿಕೆ ಕೊಡಗು ಜಿಲ್ಲೆಯ ಪ್ರಮುಖ ಸುದ್ದಿಗಳಲ್ಲಿ ಶಕ್ತಿಯ ವರದಿ ಹೇಗಿದೆ ಎಂದು ನೋಡಿ, ಇಂದು ಕೊಡಗಿನಲ್ಲಿ ಚರ್ಚೆ ನಡೆಯುತ್ತದೆ. ಕೊಡಗು ಜಿಲ್ಲೆಯಿಂದ ರಾಜ್ಯಾದ್ಯಂತ (ಕರ್ನಾಟಕ ರಾಜ್ಯಕ್ಕೆ) ಪ್ರಕಟಗೊಳ್ಳುವ ದಿನಪತ್ರಿಕೆ ಶಕ್ತಿಯಾಗಿ ಹೊರ ಬರಬೇಕು. ಎಂಬದು ನನ್ನ ಅನಿಸಿಕೆ ಇದಕ್ಕೆ ಬೇಕಾದ ಸಲಹೆ-ಸೂಚನೆಗಳನ್ನು ಶಕ್ತಿಯ ಓದುಗರು ನೀಡಿ ಪ್ರೋತ್ಸಾಹಿಸಬೇಕು. ಪತ್ರಿಕಾ ಮಾಧ್ಯಮದ ಬೃಹತ್ ಶಕ್ತಿಯಾಗಿ ‘‘ಶಕ್ತಿ ದಿನಪತ್ರಿಕೆ ಹೊರ ಹೊಮ್ಮಿದ್ದು, ನಿತ್ಯವೂ ಪ್ರಕಟಗೊಳ್ಳುತ್ತಿರುವದು ಬಹಳ ಸಂತೋಷ ಪಡುವ ವಿಷಯವಾಗಿದೆ. ಶಕ್ತಿ ಪತ್ರಿಕೆಯ ಮೂಲಕ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಬೇಕಾದ ಲೇಖನ ಕೊಡಗಿನಲ್ಲಿ ಸೌಹಾರ್ದ ಜೀವನ ನಡೆಸಲು ಉಪಕಾರಪ್ರದವಾದ ಲೇಖನ ಬಡತನ ನೀಗಿಸಬೇಕಾದ ಲೇಖನ, ನಿರಂತರವಾಗಿ ಪ್ರಕಟವಾಗಬೇಕು. ಜಿಲ್ಲೆಯ ಗ್ರಾಮಗಳಲ್ಲಿ ಇರುವಂತಹ ಲೇಖಕರು ಗುರುವರ್ಯರು ಹೋರಾಟಗಾರರು, ಸಾಹಸಿಗರು ಗ್ರಾಮಕ್ಕೆ ಹೆಮ್ಮೆ ಪಡುವಂತಹ ವ್ಯಕ್ತಿಗಳನ್ನು ಗುರುತಿಸಿ ಶಕ್ತಿಯ ಮೂಲಕ ಪರಿಚಯಿಸುವುದು ಉತ್ತಮ. ಮಾರ್ಚ್ 4 ರಂದು ನಡೆಯಲಿರುವ ಶಕ್ತಿ ಹುಟ್ಟು ಹಬ್ಬಕ್ಕೆ ನನ್ನ ಹೃದಯ ಅಂತರಾಳದಿಂದ ಹೊರಹೊಮ್ಮುವ ಹುಟ್ಟುಹಬ್ಬದ ಶುಭಾಶಯಗಳನ್ನು ಲೇಖನದ ಮೂಲಕ ಸೌದಿ ಅರೇಬಿಯಾ, ದರಿಯಾದ್‍ನಿಂದ ತಿಳಿಸುತ್ತಿದ್ದೇನೆ.
ಶಕ್ತಿಯ ಅಭಿಮಾನಿ ಹಾಗೂ ಓದುಗ
ಕೆ.ಹೆಚ್.ಎಂ. ಮುಸ್ತಾಫ ಝೈನಿ, ಕಂಬಿಬಾಣೆ
ಕೋಶಾಧಿಕಾರಿ, ಕೊಡಗು ಮುಸ್ಲಿಂ ಯುವಕ ಸಂಘ ಜಿ.ಸಿ.ಸಿ. ಸಮಿತಿ (ಕೆ.ಎಂ.ವೈ.ಡಬ್ಲ್ಯು.ಜಿ.ಸಿ.ಸಿ.),
ಕಾರ್ಯದರ್ಶಿ ರಿಸಾಲ ಸಾಹಿತ್ಯ ವೇದಿಕೆ, ರಿಯಾದ್ ಆರ್.ಎಸ್.ವಿ.