ಮಾನ್ಯರೆ,

ವಿಶಿಷ್ಟ ಸಂಸ್ಕøತಿ ಮತ್ತು ಸಂಪ್ರದಾಯವನ್ನು ಹೊಂದಿರುವ ಅರೆಭಾಷೆ ಗೌಡರ ಕುಲಶಾಸ್ತ್ರ ಅಧ್ಯಯನಕ್ಕೆ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಂಡು ಈ ಜನಾಂಗದ ಅಭ್ಯುದಯಕ್ಕೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು.

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಸ್ಥಾನವಾಗಿದ್ದು, ದೇಶದಾದ್ಯಂತ ವಾಸವಾಗಿರುವ ಸುಮಾರು 5 ಲಕ್ಷಕ್ಕಿಂತಲೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಅರೆಭಾಷೆ ಮಾತನಾಡುವ ಗೌಡ ಸಮುದಾಯ ತಲತಲಾಂತರದಿಂದ ತಮ್ಮದೇ ಆದ ವಿಶಿಷ್ಟ ಸಂಸ್ಕøತಿ ಸಂಪ್ರದಾಯಗಳನ್ನು ಹೊಂದಿರುವವರಾಗಿದ್ದಾರೆ. ತಮ್ಮದೆ ಆದ ಆಚಾರ-ವಿಚಾರಗಳನ್ನು ಪಾಲಿಸುತ್ತಿರುವ ಅರೆಭಾಷೆ ಗೌಡರು ನಿಷ್ಠಾವಂತರು, ದೇಶಭಕ್ತರು ಅಗಿದ್ದಾರೆ. ಇವರುಗಳ ಮೂಲ ವೃತ್ತಿ ಕೃಷಿಯಾಗಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನೂ ಕೂಡ ದುರ್ಬಲರಾಗಿದ್ದಾರೆ. ಹುತಾತ್ಮ ಗುಡ್ಡೆಮನೆ ಅಪ್ಪಯ್ಯಗೌಡ ಹಾಗೂ ಕೆದಂಬಾಡಿ ರಾಮೇಗೌಡ ಅವರುಗಳು 1837ರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬ್ರಿಟೀಷರಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇದೇ ರೀತಿ ಬಲಿದಾನ ಮಾಡಿದ ದೇಶಪ್ರೇಮಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಅರೆಭಾಷೆ ಗೌಡ ಜನಾಂಗದಲ್ಲಿ ಮಿಂಚಿ ಮರೆಯಾಗಿದ್ದಾರೆ ಎಂಬದು ಇಲ್ಲಿ ನೆನಪಿಸಬೇಕು. ಆ ದಿಸೆಯಲ್ಲಿ ಜನಾಂಗದ ಕುಲಶಾಸ್ತ್ರ ಅಧ್ಯಯನ ಅವಶ್ಯಕ.

- ಸೂದನ ಈರಪ್ಪ, ಪಾಲೂರು