ಮಡಿಕೇರಿ, ಮಾ. 6: ಯುವ ಶಕ್ತಿ ದೇಶದ ಶಕ್ತಿಯಾಗಿದ್ದು, ಉತ್ತಮ ಸಮಾಜ ನಿರ್ಮಾಣ ಯುವ ಜನತೆಯ ಧ್ಯೇಯವಾಗಬೇಕು ಎಂದು ಶಾಸಕರುಗಳಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಕರೆ ನೀಡಿದರು. ಕೊಡಗು ಜಿಲ್ಲಾಡಳಿತ, ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಕಾವೇರಿ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಯುವ ಸಮ್ಮೇಳನÀ, ಕ್ರೀಡಾ ಸಾಮಗ್ರಿ ವಿತರಣೆ, ಸಂಘ ಪ್ರಶಸ್ತಿ ಪ್ರದಾನ ಹಾಗೂ ಯುವ ಕೃತಿ ಪ್ರದರ್ಶನವನ್ನು ಉದ್ಘಾಟಿಸಿ ಶಾಸಕದ್ವಯರು ಮಾತನಾಡಿದರು. ದೇಶದ ಅಲ್ಲಲ್ಲಿ ರಾಷ್ಟ್ರೀಯತೆಗೆ ವಿರುದ್ಧವಾದ ಕೆಲಸಗಳು ನಡೆಯುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯಸಿದ ಬೋಪಯ್ಯ ಅವರು ಯುವ ಶಕ್ತಿ ರಾಷ್ಟ್ರೀಯತೆಯ ಪರ ಧ್ವನಿ ಎತ್ತಬೇಕು ಎಂದು ಹೇಳಿದರು.

ಶಾಸಕ ರಂಜನ್ ಮಾತನಾಡಿ, ಯುವ ಶಕ್ತಿ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕು. ಯುವ ಜನತೆಗಾಗಿ ಸರ್ಕಾರ 1,000 ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ಮೀಸಲಿಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್ ಮಾತನಾಡಿ, ಯುವಕ ಯುವತಿಯರ ಮಹತ್ವವನ್ನು ಸಮಾಜಕ್ಕೆ ತಿಳಿಯಪಡಿಸುವದೇ ಯುವ ಸಮಾವೇಶದ ಉದ್ದೇಶವಾಗಿದೆ. (ಮೊದಲ ಪುಟದಿಂದ) ಯುವ ಜನಾಂಗ ಪರಿಸರ ಸಂರಕ್ಷಣೆ, ಜಲಸಂರಕ್ಷಣೆ ಆದ್ಯತೆ ನೀಡಬೇಕೆಮದು ಅವರು ಸಲಹೆಯಿತ್ತರು.

ಮಡಿಕೇರಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ವಿವೇಕಾನಂದ ವಾಣಿಯಂತೆ ಯುವ ಜನತೆ ಗುರಿಮುಟ್ಟುವತ್ತ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ದಯಾನಂದ , ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ಜಿ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಒಕ್ಕೂಟದ ಕಾರ್ಯದರ್ಶಿ ಸುಕುಮಾರ್, ಮೂರು ತಾಲೂಕು ಒಕ್ಕೂಟಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ನೆಲ್ಲಕ್ಕಿ ಯುವತಿ ಮಂಡಳಿಯವರು ಪ್ರಾರ್ಥಿಸಿ, ಒಕ್ಕೂಟ ಸದಸ್ಯ ಸಾಬ ಸುಬ್ರಮಣಿ ನಿರೂಪಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಮಂಡುವಂಡ ಬಿ. ಜೋಯಪ್ಪ ಸ್ವಾಗತಿಸಿದರು.

ಪ್ರಶಸ್ತಿ ವಿತರಣೆ

ಸಮಾರಂಭದಲ್ಲಿ ಉತ್ತಮ ಯುವ ಸಂಘ ಪ್ರಶಸ್ತಿಗಳನ್ನು ವಿತರಿಸಲಾಯಿತು. ಪೊನ್ನಂಪೇಟೆಯ ಚೈತನ್ಯ ಕಲಾ ಯುವ ಮಂಡಳಿ ದಬ್ಬಡ್ಕದ ಶ್ರೀರಾಮ ಯುವಕ ಸಂಘ, ಪೊನ್ನಂಪೇಟೆಯ ಅಂಬೇಡ್ಕರ್ ಕಲಾ ಯುವತಿ ಮಂಡಳಿ ಪ್ರಶಸ್ತಿಗಳನ್ನು ಪಡೆದುಕೊಂಡವು.

ವೈಯಕ್ತಿಕ ಯುವ ಪ್ರಶಸ್ತಿಯನ್ನು ಟಾಟಾ ದೇವಯ್ಯ, ಪ್ರಸಾದ್, ನಿರ್ಮಲ ಗಿರೀಶ್, ವೀಣಾ ಮನುಕುಮಾರ್, ಪ್ರಜ್ವಲ್ ಪಡೆದುಕೊಂಡರು.