ವಿರಾಜಪೇಟೆ, ಮಾ. 6 : ಒಕ್ಕಲಿಗರ ಯುವ ವೇದಿಕೆಯ ಸಾಮಾನ್ಯ ಸಭೆಯು ಈ ಬಾರಿ ಕೋತೂರಿ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು, ಸಭೆಯ ಅಧ್ಯಕ್ಷತೆಯನ್ನು ಕೋತೂರಿನ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ. ಎಸ್. ಪ್ರಭುರವರು ವಹಿಸಿ ಮಾತನಾಡಿದರು. ಎಲ್ಲಾ ಒಕ್ಕಲಿಗ ಯುವಕರು ಭೇದ-ಬಾವ ಮರೆತು ಒಗ್ಗಟ್ಟಾಗಿ ಸೇರಿ ಸಮಾಜವನ್ನು ಮುನ್ನಡೆಸಬೇಕು ಎಂದು ಅವರು ಹೇಳಿದರು.
ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಮಹೇಶ್ ಮಾತನಾಡಿ ನಾವು ಪ್ರತಿ ಗ್ರಾಮಗಳಿಗೆ ಹೋಗಿ ಸಭೆ ಮಾಡುತ್ತಿರುವದಕ್ಕೆ ಉತ್ತಮ್ಮ ಪ್ರತಿಕ್ರಿಯೆ ದೂರೆಯುತ್ತಿದ್ದು. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ ಗಳಿಗೆ ಭೇಟಿ ನೀಡಿ ವೇದಿಕೆಯನ್ನು ವಿಸ್ತರಿಸುತ್ತೇವೆ ಏಪ್ರಿಲ್ ತಿಂಗಳಲ್ಲಿ ಒಕ್ಕಲಿಗರ ಕ್ರಿಕೆಟ್ ಪಂದ್ಯಾವಳಿ ಸಡೆಸಲು ತಿರ್ಮಾನಿಸಿದ್ದು ಯೋಜನೆಗಳನ್ನು ಕೈಗೂಂಡಿದ್ದೇವೆ ಎಂದರು.
ಒಕ್ಕಲಿಗರ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿ.ಪಿ ಲೋಹಿತ್ ಮಾತನಾಡಿ ಪ್ರತಿ ಗ್ರಾಮ ದಲ್ಲಿ ಸಭೆ ನಡೆಸುತಿರುವದ್ದರಿಂದ ಗ್ರಾಮದ ಯುವಕರೆಲ್ಲ ಸೇರುತ್ತಿದ್ದಾರೆ ಇದರಿಂದ ಒಗ್ಗಟ್ಟಿನಿಂದ ಕಾರ್ಯಕ್ರಮ ಮಾಡಲು ಸಾಧ್ಯವಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಒಕ್ಕಲಿಗರ ಯುವ ವೇದಿಕೆಯ ಉಪಾಧ್ಯಕ್ಷ ಮಂಜುನಾಥ್, ಗೌರವ ಕಾರ್ಯದರ್ಶಿ ಪ್ರವೀಣ್, ನೀತಿ ಕುಮಾರ್, ಮನು ಕುಮಾರ್, ಕೆ.ಬಿ ಪವನ್, ಸುಧಿ, ಜೀವನ್ ಮತ್ತು ಕೋತೂರು, ಕೋಟೆಕೊಪ್ಪ ಗ್ರಾಮದ ಯುವಕರು ಪಾಲ್ಗೊಂಡಿದ್ದರು.