ಕೊಡಗಿನಲ್ಲಿ ವಿವಿಧ ನಾನಾ ಸಂಘ-ಸಂಸ್ಥೆಗಳಿದ್ದು, ವಿವಿಧ ಕಾರ್ಯಚಟುವಟಿಕೆಗಳನ್ನು ಮಾಡುತ್ತಿವೆ. ಕೆಲವೊಂದುಕೊಡಗಿನ ಸಂಸ್ಕøತಿ, ಆಚಾರ ವಿಚಾರ, ಪದ್ಧತಿ ಪರಂಪರೆಗಳನ್ನು ಉಳಿಸಿಬೆಳೆಸುವಲ್ಲಿ ತೊಡಗಿದ್ದರೆ ಮತ್ತೆ ಕೆಲವು ಸಂಘ-ಸಂಸ್ಥೆಗಳು ತಮ್ಮದೇ ಆದ ನೀತಿ-ನಿಯಮಗಳೊಂದಿಗೆ ನಡೆದುಕೊಂಡು ಬರುತ್ತಿದೆ. ಕಳೆದ ಆರು ವರ್ಷಗಳ ಹಿಂದೆ ಮಹಿಳೆಯರಿಗೆ ಮಾತ್ರ ಮೀಸಲು ಎಂಬಂತೆ ಚೆಟ್ಟಳ್ಳಿಯಲ್ಲಿ ‘ಅವರ್ ಕ್ಲಬ್’ ಎಂಬ ಹೆಸರಿನ ಸಂಘಟನೆ ಕಾರ್ಯಾಚರಿಸುತ್ತಾ ಬರುತ್ತಿದೆ.

ಮಹಿಳೆಯರಿಗಾಗಿ ಒಂದು ವೇದಿಕೆ ಕಲ್ಪಿಸುವ ಉದ್ದೇಶ ಇಟ್ಟು ಈ ಕ್ಲಬ್‍ನ್ನು 2010ರಲ್ಲಿ ಸ್ಥಾಪಿಸಿ ಕೊಂಡಿದ್ದು, ಯಾವುದೇ ಜಾತಿ ಮತ ಬೇಧÀವಿಲ್ಲದೆ ನಡೆಸಿಕೊಂಡು ಬರಲಾಗುತ್ತಿದ್ದು, ಕೊಡಗಿನ ಸಾಂಸ್ಕøತಿ, ಆಚಾರ-ವಿಚಾರಗಳ ಜೊತೆಗೆ ರಾಷ್ಟ್ರೀಯ ಸಾಂಸ್ಕ್ರತಿಯ ಆನಾವರಣಕ್ಕೂ ವೇದಿಕೆ ಮಾಡಿಕೊಟ್ಟಿದೆ.

ಕೇವಲ 15 ಸದಸ್ಯರುಗಳು ಸೇರಿ ಪ್ರಾರಂಭಿಸಿದ ಈ ಅವರ್ ಕ್ಲಬ್‍ನಲ್ಲಿ ಊರಿನ ಹಾಗೂ ನೆರೆಯ ಊರಿನ ಹಿರಿಯ-ಕಿರಿಯ ಮಹಿಳೆಯರನ್ನೊಳಗೊಂಡಂತೆ ಒಟ್ಟು 67 ಸದಸ್ಯರಿದ್ದಾರೆ. ಮಹಿಳೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ವೇದಿಕೆಯಾಗಿದೆ. ಕ್ಲಬ್‍ನಲ್ಲಿ 6 ಗುಂಪುಗಳನ್ನು ಮಾಡಲಾಗಿದ್ದು, ಒಂದೊಂದು ಗುಂಪಿನಲ್ಲಿ ತಲಾ 11 ಸದಸ್ಯರಿದ್ದು, ಆರು ತಿಂಗಳಿಗೊಮ್ಮೆ ಗ್ರೂಪ್‍ನ ಹೆಸರನ್ನು ಬದಲಾಯಿಸಲಾಗುತ್ತದೆ. ವರ್ಷಕೊಮ್ಮೆ ಸದಸ್ಯರು ಅದಲು ಬದಲಾಗುವರು. ಪ್ರಸ್ತುತ ಯುಕೆ, ರಷ್ಯಾ, ಕೆನಡಾ, ತೈಲ್ಯಾಂಡ್, ಆಫ್ರಿಕಾ, ಸ್ವಿಜರ್‍ಲ್ಯಾಂಡ್ ಇತ್ಯಾದಿ ಹೆಸರಿಡಲಾಗಿ ಒಂದೊಂದು ಗುಂಪುಗಳು ಒಂದೊಂದು ತಿಂಗಳು ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿವೆ. ಗುಂಪಿನ ಸದಸ್ಯರೆಲ್ಲರು ತಮ್ಮ ಹೆಸರಿನ ರಾಷ್ಟ್ರದ ಉಡುಪು, ಆಚಾರ-ವಿಚಾರ, ಭಾಷೆ ಹಾಗೂ ಆಹಾರ ಪದ್ಧತಿಯನ್ನೆಲ್ಲ ಅರಿತು ತಿಂಗಳಿಗೊಮ್ಮೆ ಪ್ರದರ್ಶಿಸುವರು. ಈ ಹಿಂದೆ ಬಣ್ಣದ, ಹೂವಿನ, ರಾಜ್ಯಗಳ ಹೆಸರನ್ನು ಸಂಘಗಳಿಗಿಟ್ಟು ಗ್ರೂಪಿನ ಸದಸ್ಯರು ಅದಕ್ಕೆ ಸಂಬಂಧ ಪಟ್ಟಂತೆ ಪ್ರದರ್ಶನಗೊಳಿಸುತ್ತಾರೆ.

ಮಹಿಳೆಯ ನಾನಾ ರೀತಿಯ ಅಡುಗೆ, ಗ್ರಹ ಬಳಕೆಯ ವಸ್ತುಗಳ ತಯಾರಿ, ಆರೋಗ್ಯ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ, ತಮ್ಮ ತಮ್ಮಲ್ಲಿರುವ ಪ್ರತಿಭೆಯನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾ ಜಾನಪದ ಕಲೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಇಂತಹ ಕಾರ್ಯಕ್ರಮಗಳ ಜೊತೆಗೆ ಸಂಘದ ಮಹಿಳಾ ಸದಸ್ಯರೇ ಸ್ವತಃ ಹಣ ನೀಡಿ ಚೆಟ್ಟಳ್ಳಿ ಆಸ್ಪತ್ರೆಗೆ ಇಂಕ್ಯೂಬಿಲೇಟರ್, ಮಡಿಕೇರಿಯ ಶಿಶುಕಲ್ಯಾಣ ಸಂಸ್ಥೆಯ ಸಭಾಂಗಣ ಕೆಲಸಕ್ಕೆ ರೂ. 25000, ಕೊಡಗಿನ ಕ್ಯಾನ್ಸರ್ ಪೀಡಿತ ಪ್ರಜ್ವಲ್ ಹಾಗೂ ಮರ ಬಿದ್ದು ಅಪಘಾತಕ್ಕೆ ಒಳಗಾದ ವಿದ್ಯಾರ್ಥಿಗೆ ಅವರ್ ಕ್ಲಬ್ಬಿನಿಂದ ಸಹಾಯ ಧನ ನೀಡಲಾಗಿ, ಪೊನ್ನಂಪೇಟೆಯ ವ್ಯದ್ಧಾಶ್ರಮದ ಸದಸ್ಯರ ಸೇವೆ, ಸ್ಥಳೀಯ ಸಾಧಕರಿಗೆ ಸನ್ಮಾನ ರಕ್ತದಾನ ಶಿಬಿರಗಳನ್ನು ಕ್ಲಬಿನಿಂದ ನಡೆಸಲಾಗಿದ್ದು, ಗುಂಪಿನೊಂದಿಗೆ ಹಾಗೂ ಇತರ ಮಹಿಳಾ ಕ್ಲಬ್ಬ್‍ಗಳೊಂದಿಗೆ ಹಲವು ಟೂರ್ನಮೆಂಟನ್ನೂ ನಡೆಸಲಾಗಿದೆ.

ಮಹಿಳೆಯರಿಂದ, ಮಹಿಳೆಯರಿಗಾಗಿ ಹಾಗೂ ಮಹಿಳೆಯರಿಗೋಸ್ಕರ ಚೆಟ್ಟಳ್ಳಿಯಲ್ಲಿ ಸ್ಥಾಪಿಸಲಾದ ‘ಅವರ್‍ಕ್ಲಬ್’ ಮಹಿಳೆಯರಿಗೊಂದು ಮುಕ್ತ ವೇದಿಯಾಗಿದೆಯೆಂದು ಕ್ಲಬ್‍ನ ಅಧ್ಯಕ್ಷರು ಹಾಗೂ ಹಿರಿಯವರಾದ ಕೊಂಗೇಟಿರ ಕುಸುಮ ಪೊನ್ನಪ್ಪ ಹೇಳುತ್ತಾರೆ.

-ಪುತ್ತರಿರ ಕರುಣ್ ಕಾಳಯ್ಯ