ಮಡಿಕೇರಿ, ಮಾ. 6: ಬಲ್ಯಮುಂಡೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಾರ್ಷಿಕೋತ್ಸವ ತಾ.7ರಂದು (ಇಂದು) ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ಅನ್ನಸಂತರ್ಪಣೆಯೊಂದಿಗೆ ಸಂಜೆ 5 ಗಂಟೆಗೆ ದೇವಿಯ ಜಳಕ ನಡೆಯಲಿದೆ.