ನಾಪೆÇೀಕ್ಲು, ಮಾ. 6: ದೇವರ ಕೃಪೆಯಿದ್ದರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯ. ಆದುದರಿಂದ ಎಲ್ಲರು ಸರ್ವ ಶಕ್ತನಾದ ಭಗವಂತನನ್ನು ಪ್ರಾರ್ಥಿಸುವದು ಅಗತ್ಯ ಎಂದು ಖಮರುಲ್ ಉಲಮಾ ಕಾಂತಪುರಂ ಎ.ಪಿ.ಉಸ್ತಾದ್ ಹೇಳಿದರು.ಐತಿಹಾಸಿಕ ಎಮ್ಮೆಮಾಡು ವಾರ್ಷಿಕ ಉರೂಸ್ ಸಮ್ಮೇಳನದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿ ಅವರು ಮಾತನಾಡಿದರು. ಎರಡು ತಂಡಗಳ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ಎಮ್ಮೆಮಾಡು ದರ್ಗಾದ ಅಧಿಕಾರವನ್ನು ವಹಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಎರಡು ಕಡೆಯವರನ್ನು ಕರೆಸಿ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸಿದ ಪರಿಣಾಮ ಮತ್ತೆ ವಕ್ಫ್ ಬೋರ್ಡ್‍ನಿಂದ ಸ್ಥಳೀಯ ಆಡಳಿತ ಅಧಿಕಾರ ಪಡೆದು ಇಂದು ಸಂಭ್ರಮದಿಂದ ಉರೂಸ್ ಆಚರಿಸುವಂತಾಗಿದೆ ಎಂದು ಅವರು ನೆನಪಿಸಿದರು. ಪರಸ್ಪರ ಸ್ನೇಹ, ಪ್ರೀತಿ, ಸೌಹಾರ್ದತೆಯಿಂದ ಮಾತ್ರ ನೆಮ್ಮದಿಯ ಬದುಕು, ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ರಾಷ್ಟ್ರೀಯ ಚಿಂತನೆ, ಅಖಾಂಡತೆಗಾಗಿ ನಾವೆಲ್ಲ ಒಂದಾಗಿ ನಿಲ್ಲಬೇಕು. ಕಲಿಸುವವನು ಸತ್ಯವಂತನಾಗಿರಬೇಕು, ಸಜ್ಜನನಾಗಿರಬೇಕು. ಕಳ್ಳರೊಂದಿಗೆ, ಸುಳ್ಳುಗಾರರೊಂದಿಗೆ ಬೆರೆಯಬಾರದು ಎಂದು ಕಿವಿ ಮಾತು ಹೇಳಿದರು.

ಶಿಕ್ಷಣಕ್ಕೆ ಒತ್ತು ನೀಡಿ : ಕುರಾನ್‍ನ ಪ್ರಕಾರ ನಾವು ಇಂದು ಬಾಳುತ್ತಿದ್ದೇವೆ. ಯಾರನ್ನು ಬಲವಂತವಾಗಿ ಇಸ್ಲಾಂಗೆ ಸೇರಿಸಿಲ್ಲ. ಇಸ್ಲಾಂನ ತತ್ವ ಸಿದ್ಧಾಂತವನ್ನು ಒಪ್ಪಿ ಸ್ವ – ಇಚ್ಛೆಯಿಂದ ಅನೇಕರು ಸೇರಿದ್ದಾರೆ ಎಂದರು. ದರ್ಗಾದ ವತಿಯಿಂದ ಕಾಲೇಜು ಆರಂಭಿಸಿ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಯತ್ನಿಸಬೇಕು. ಐಕ್ಯತೆ, ಸೌಹಾರ್ದತೆಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಅವರು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಕೋಮುವಾದ ಬೇಡ

ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನಿರ್ದೇಶಕ ಶಾಫಿ ಸಹದಿ ಮಾತನಾಡಿ ಐ.ಎಸ್.ಐ.ಎಸ್ ಸಂಘಟನೆಯಿಂದ ಮಾನವ ಕುಲಕ್ಕೆ ಆಪತ್ತು. ನಾವು ಎಂದೂ ಕೋಮುವಾದಿಗಳಾಗಿ ಬದಲಾಗಬಾರದು. ಎಮ್ಮೆಮಾಡು ಹಿಂದೂ, ಮುಸ್ಲಿಂ ಐಕ್ಯತೆಗೆ ಸಾಕ್ಷಿ ಯಾಗಿದೆ. ಇಲ್ಲಿ ಕೋಮವಾದಿಗಳಿಗೆ ಅವಕಾಶ ನೀಡಬಾರದು. ಸ್ನೇಹ, ಸೌಹಾರ್ದದಿಂದ ಎಲ್ಲವನ್ನು ಸಾಧಿಸಬಹುದು ಎಂದರು.

ಕರ್ನಾಟಕದಲ್ಲಿ 80 ಲಕ್ಷ ಮುಸ್ಲಿಮರಿದ್ದೇವೆ. ಆದರೂ ಕೇಂದ್ರದಲ್ಲಿ ಒಂದು ಲೋಕಸಭಾ ಸ್ಥಾನ ನಮಗೆ ಲಭಿಸಿಲ್ಲ. ರಾಜ್ಯದಲ್ಲಿ ಪ್ರಮುಖ ಮಂತ್ರಿ ಸ್ಥಾನ ದೊರೆತಿಲ್ಲ. ನಾವು ಕಚ್ಚಾಡುವದನ್ನು ಬಿಟ್ಟು ರಾಜಕೀಯವಾಗಿ ಬೆಳೆಯಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ರಾಜ್ಯದಲ್ಲಿ 50% ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದಾರೆ. ಅವಕಾಶವನ್ನು ಕೇಳಿ ಪಡೆದುಕೊಳ್ಳಬೇಕು. ನಾವು ಕೇರಳದ ಮುಸ್ಲಿಮರನ್ನು ನೋಡಿ ಕಲಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಿ.ಎಂ.ಉಸ್ಮಾನ್ ಹಾಜಿ ವಹಿಸಿದ್ದರು.

ವೇದಿಕೆಯಲ್ಲಿ ಮಾಜಿ ಶಾಸಕ ಜೀವಿಜಯ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹಿಮಾನ್, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್, ಎ.ಡಿ.ಎಲ್. ಆರ್. ಷಂಶುದ್ದೀನ್, ಪಿ.ಎಂ. ಖಾಸಿಮ್, ಎಂ.ಎ. ಮನ್ಸೂರ್ ಅಲಿ, ಸಯ್ಯದ್ ಇಲ್ಯಾಸ್ ಸಖಾಪಿ

(ಮೊದಲ ಪುಟದಿಂದ) ಅಲ್ ಹೈದ್ರೂಸಿ ಮತ್ತಿತರರು ಇದ್ದರು. ಉರೂಸ್ ಪ್ರಯುಕ್ತ ಸಾರ್ವಜನಿಕ ಅನ್ನದಾನ ನಡೆಯಿತು.

ಸಾಲಿಬ್ ತಂಞಳ್ ಪ್ರಾರ್ಥನೆ, ಎಮ್ಮೆಮಾಡು ಜಮಾಅತ್ ಪ್ರಧಾನ ಕಾರ್ಯದರ್ಶಿ ಹುಸೈನ್ ಸಖಾಫಿ ಸ್ವಾಗತಿಸಿ, ಬಿ.ಯು.ಅಸ್ರಫ್ ವಂದಿಸಿದರು.

ಪೆÇಲೀಸರಿಂದ ಭಿಗಿ ಭದ್ರತೆ

ಮುಸ್ಲಿಂ ಧರ್ಮ ಗುರು ಖಮಾರುಲ್ ಉಲಾಮ ಕಾಂತಪುರಂ ಎ.ಪಿ.ಉಸ್ತಾದ್ ಅವರ ಆಗಮನದ ಹಿನ್ನಲೆಯಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಓರ್ವ ಡಿವೈಎಸ್‍ಪಿ, 5 ವೃತ್ತ ನಿರೀಕ್ಷಕರು, 12 ಪಿ.ಎಸ್.ಐ, 46 ಎ.ಎಸ್.ಐ, 86 ಹೆಡ್ ಕಾನ್‍ಸ್ಟೇಬಲ್, 181 ಕಾನ್‍ಸ್ಟೇಬಲ್‍ಗಳು, 38 ಮಹಿಳಾ ಸಿಬ್ಬಂದಿ, 4 ಡಿಆರ್ ತುಕಡಿ, ಕೆಎಸ್‍ಆರ್‍ಪಿ 2 ತುಕಡಿ, ಅಗ್ನಿ ಶಾಮಕ ದಳ 1, ಆಂಬ್ಯುಲೆನ್ಸ್ 1ನ್ನು ಕರ್ತವ್ಯಕ್ಕೆ ನಿಯೋಜನೆ ಗೊಳಿಸಲಾಗಿತ್ತು.

- ಚಿತ್ರ, ವರದಿ: ಪ್ರಭಾಕರ್, ದುಗ್ಗಳ