ಶಿವ ಅವತಾರಿಯಾದ ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಗಳು 5ನೇ ವಯಸ್ಸಿನಲ್ಲಿ ಕುಲಗುರು ಗಳಾದ ವೀರಭದ್ರ ಸ್ವಾಮಿಗಳ ಆಶ್ರಯದಲ್ಲಿ ವಿಚಾರ ಧಾರೆಯನ್ನು ಕೇಳುತ್ತಿರುವಾಗ ಗುರುಗಳು ಅಂದದ್ದು ಇಡೀ ಪ್ರಪಂಚ ಒಂದು ದಿವಸ ಪ್ರಳಯ ಆಗುತ್ತದೆ ಎನ್ನುವಾಗ ಸಿದ್ಧರೂಢ ಸ್ವಾಮಿಗಳು ಎಲ್ಲವೂ ಪ್ರಳಯ ಆಗುತ್ತದೆ. ಆಕಾಶವೂ ಪ್ರಳಯ ಆಗುತ್ತದೆಯಾ ಎಂದು ಕೇಳಿದರು.
ಆಗ ಗುರುಗಳು ಅದು ನನ್ನಿಂದ ಅಸಾಧ್ಯ ಆದರಿಂದ ಅಂತಹ ಒಬ್ಬ ಗುರುಗಳನ್ನು ಕಂಡು ಹಿಡಿದು ಅದನ್ನು ತಿಳಿದುಕೋ ಎಂದರು. ನಂತರ ಅವರ ಮನಸ್ಸು ಪರಿವರ್ತನೆಯಾಗಿ ಅವರ 7ನೇ ವಯಸ್ಸಿನಲ್ಲಿಯೇ ಗುರುಗಳ ಹುಡುಕಾಟಕ್ಕೆ ಪ್ರಾರಂಭಿಸಿದರು. ಹಾಗೆಯೇ ಅವರು ಅವಧೂತ ಮಾರ್ಗದಲ್ಲಿ ಒಂದು ಲಂಗೋಟಿ ಕಟ್ಟಿಕೊಂಡು ಹೊರಟು ಹೋದರು. ಹಾಗೆಯೇ ತಿರುಗಾಡುತ್ತಾ ಬಳ್ಳಾರಿಗೆ ತಲಪಿದರು. ಅವರನ್ನು ಮಳೆ ಸ್ನಾನ ಮಾಡಿಸಿದರೆ, ಬಿಸಿಲು ಒಣಗಿಸುತ್ತಿತ್ತು.
ಹಾಗೆಯೇ ಒಂದು ದಿವಸ ದೊಡ್ಡ ಮಳೆಯಾದಾಗ ಆ ವೇಳೆಗೆ ಓರ್ವ ಸಾಹುಕಾರನ ಮನೆಯ ಮೆಟ್ಟಿಲಿನಲ್ಲಿ ಬಂದು ನಿಂತುಕೊಂಡರು. ಕೂಡಲೇ ಆ ಮನೆಯ ಪಹರೆಗಾರ ಬಂದು ಇದು ಸಾಹುಕಾರನ ಮನೆ. ಇಲ್ಲಿ ನಿಲ್ಲಬೇಡ ಹೋಗು ಎಂದು ಹೇಳಿದನು. ಆಗ ಸ್ವಾಮಿಯು ಹಿಂದಿ ಭಾಷೆಯಲ್ಲಿ ಇದು ಬಾಡಿಗೆ ಮನೆ ಎಂದು ಹೇಳಿದರು. ಅಷ್ಟು ಹೊತ್ತಿಗೆ ಆ ಸಾಹುಕಾರ ಬಂದು ಇದು ನನ್ನ ಮನೆ, ಬಾಡಿಗೆ ಮನೆ ಅಲ್ಲ ಎಂದು ಹೇಳಿದನು. ಅದಕ್ಕೆ ಉತ್ತರಿಸಿದ ಸ್ವಾಮಿಗಳು ಇದಕ್ಕೆ ಮೊದಲು ಈ ಮನೆಯೊಳಗೆ ಯಾರಿದ್ದರು. ನನ್ನ ತಂದೆ ಎಂದು ಉತ್ತರಿಸಿದ. ಅದಕ್ಕೆ ಮೊದಲು ಯಾರು ಇದ್ದರು ಎಂದು ಕೇಳಿದರು. ನನ್ನ ಅಜ್ಜಿ ಎಂದು ಉತ್ತರಿಸಿದ. ಅದಕ್ಕೆ ಸ್ವಾಮಿಗಳು ಒಬ್ಬರ ಹಿಂದೆ ಒಬ್ಬರು ಆಗಿ ಹೋಗಿದ್ದಾರೆ. ಆಗ ಅದು ಬಾಡಿಗೆ ಮನೆ ಅಲ್ಲವೇ ಎಂದು ಹೇಳಿದಾಗ ಆ ಸಾಹುಕಾರನಿಗೆ ಜ್ಞಾನೋದಯ ವಾಗಿ ಮನೆ ಒಳಗೆ ಕರೆದು ಸತ್ಕರಿಸಿ ಕಳುಹಿಸಿದನು. ಒಮ್ಮೆ ಹಾದಿಯಲ್ಲಿ ಹೋಗುತ್ತಿರುವಾಗ ಅವರ ಹಿಂದಿನಿಂದ ಒಬ್ಬ ಕುದುರೆ ಓಡಿಸಿಕೊಂಡು ಬರುತ್ತಿದ್ದ. ಕುದುರೆ ಸವಾರನು ಮುಂದೆ ಹೋಗುತ್ತಿರುವ ಸ್ವಾಮಿಗಳನ್ನು ನೋಡಿ ಸವಾರನು ಈ ಅನಿಷ್ಟನನ್ನು ನೋಡಿ ಹೋದರೆ ನನ್ನ ಕಾರ್ಯ ಜಯವಾಗುವದಿಲ್ಲ ಎಂದು ಕುದುರೆಯನ್ನು ಜೋರಾಗಿ ಓಡಿಸಿದನು. ಆದರೂ ಕುದುರೆಗೆ ಸ್ವಾಮಿಗಳನ್ನು ದಾಟಲು ಅಸಾಧ್ಯವಾಯಿತು. ಸವಾರನ ಆತುರವನ್ನು ನೋಡಿ ಸ್ವಾಮಿಗಳು ನಿಂತರು. ಇದನ್ನು ನೋಡಿದ ಸವಾರನು ಸ್ವಾಮಿಗಳ ಹತ್ತಿರ ಬಂದು ನಿನ್ನನ್ನು ನೋಡಿದರೆ ಸಣ್ಣಗಾಗಿದ್ದಿಯಾ, ನಾನು ಕುದುರೆಯನ್ನು ಜೋರಾಗಿ ಓಡಿಸಿದರೂ ನೀನು ನನಗೆ ಸಿಗಲಿಲ್ಲ ಅದಕ್ಕೆ ಸ್ವಾಮಿಗಳು ನಿನ್ನ ಅಹಂಕಾರವೇ ಇದಕ್ಕೆ ಕಾರಣ ಎಂದು. ಉತ್ತರಿಸಿದರು. ಕುದುರೆ ಸವಾರನು ಕುದುರೆಯಿಂದ ಕೆಳಗಿಳಿದು ಸ್ವಾಮಿಗಳ ಪಾದಕ್ಕೆ ನಮಸ್ಕರಿಸಿ ನಿಮ್ಮ ಪಾದ ಸ್ಪರ್ಶದಿಂದ ನಾನು ಧನ್ಯನಾದೆ ಆದ್ದರಿಂದ ಮಾನವನಾದವನು ಅಹಂಕಾರÀ ವನ್ನು ತ್ಯಜಿಸಬೇಕು. ಹಾಗೇ ಮಹಾತ್ಮರ ಆಶೀರ್ವಾದದಿಂದ ಮಾನವನು ಧನ್ಯನಾಗುತ್ತಾನೆ.
ಶ್ರೀ ಎಸ್. ಎಸ್. ಸಿದ್ದುಸ್ವಾಮಿ,
ಸಿದ್ಧರೂಢ ಮಠ, ಟಿ. ಶೆಟ್ಟಿಗೇರಿ.