ಮಡಿಕೇರಿ, ಮಾ. 6: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇದೇ ತಾ. 8ರಂದು ಬೆಂಗಳೂರಿನ ಕಲಾ ಗ್ರಾಮದಲ್ಲಿ ನಡೆಯಲಿರುವ ರಾಜ್ಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಮಂಡಲದ ಮಿಲನಾ ಭರತ್ ನೇತೃತ್ವದ ನಾಟ್ಯ ಮಿಲನ ಕಲಾ ಟ್ರಸ್ಟ್ ತಂಡ ಭಾಗವಹಿಸಲಿದೆ. ರಾಧಾಕೃಷ್ಣ ನೃತ್ಯ ಲೀಲೆ, ಅರೆಭಾಷೆ ನೃತ್ಯ ಪ್ರದರ್ಶನ ನೀಡಲಿದೆ. ಅಂದು ಸಂಜೆ 4 ಗಂಟೆಗೆ ಮಲ್ಲತಳ್ಳಿಯ ಕಲಾಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ.