ಕುಶಾಲನಗರ, ಮಾ. 5: ಹಾರಂಗಿ ಅಣೆಕಟ್ಟು ಮುಂಭಾಗ ಉದ್ಯಾನವನದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಗೀತ ಕಾರಂಜಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತರಾಮ್ ಅವರು ಭೂಮಿ ಪೂಜೆ ನೆರವೇರಿಸಿದರು. ಅಂದಾಜು 2.49 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂಗೀತ ಕಾರಂಜಿ ಉತ್ತಮ ತಂತ್ರಜ್ಞಾನದಿಂದ ಒಳಗೊಂಡಿದ್ದು ಮುಂದಿನ 6 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.ಸುಮಾರು 200 ಜನರು ಏಕ ಕಾಲದಲ್ಲಿ ಈ ಸಂಗೀತ ಕಾರಂಜಿ ವೀಕ್ಷಿಸಲು ಅವಕಾಶ ಇರುವದಾಗಿ ಅವರು ತಿಳಿಸಿದ್ದು ಈ ಮೂಲಕ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇನ್ನೊಂದು ಗರಿ ಮೂಡಿದಂತಾಗುತ್ತದೆ ಎಂದರು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಡವನಾಡು ಅತ್ತೂರು ಗ್ರಾಮದ ಜನತೆಯ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸರ್ಕಾರದೊಂದಿಗೆ ಚರ್ಚಿಸುವದಾಗಿ ತಿಳಿಸಿದರು. ಕಂದಾಯ ಗ್ರಾಮವಾಗಿ ಪರಿವರ್ತಿಸುವಲ್ಲಿ ಸದ್ಯದಲ್ಲೇ ಉಸ್ತುವಾರಿ ಸಚಿವರ ಮೂಲಕ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ವೇಳೆ ನೂತನ ಸ್ವಾಗತ ಕಮಾನು ಉದ್ಘಾಟನೆಯೊಂದಿಗೆ ಪ್ರವಾಸಿಗರಿಗೆ ಜಲಾಶಯ ವೀಕ್ಷಿಸಲು ಅವಕಾಶ ಕಲ್ಪಿಸುವದಾಗಿ ಸಚಿವರು ಭರವಸೆ ನೀಡಿದರು.
(ಮೊದಲ ಪುಟದಿಂದ) ಇದೇ ಸಂದರ್ಭ ಹಾರಂಗಿ ಅಣೆಕಟ್ಟೆಯಿಂದ ಎಡವನಾಡು ಗ್ರಾಮಕ್ಕೆ ತೆರಳುವ ರಸ್ತೆ ಕಾಮಗಾರಿಗೆ ಉಸ್ತುವಾರಿ ಸಚಿವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಜಿ.ಪಂ.ಸದಸ್ಯೆ ಮಂಜುಳ, ತಾ.ಪಂ.ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪಂಚಾಯಿತಿ ಸದಸ್ಯರಾದ ಬಾಸ್ಕರ್ನಾಯಕ್, ರಾಜರಾವ್, ಹಾರಂಗಿಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಧÀರ್ಮರಾಜು, ಸಹಾಯಕ ಅಭಿಯಂತರ ನಾಗರಾಜು, ಕಿರಣ್ ಮತ್ತಿತರರು ಇದ್ದರು.