*ನಾಪೆÇೀಕ್ಲು, ಮಾ. 6: ನಾಪೆÇೀಕ್ಲು ವಿಭಾಗದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಜಾಂಡೀಸ್ ಮತ್ತಿತರ ಮಾರಕ ರೋಗ ಹಿನ್ನೆಲೆ ನಗರದ ವರ್ತಕರಲ್ಲಿ ಜಾಗೃತಿ ಮೂಡಿಸಲು ನಾಪೆÇೀಕ್ಲು ಗ್ರಾಮ ಪಂಚಾಯತ್, ಮಡಿಕೇರಿ ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ರೋಟರಿ ಮಿಸ್ಟಿ ಹಿಲ್ಸ್, ಇಂಟ್ರೇಕ್ಸ್ ಕ್ಲಬ್, ಮತ್ತು ಸ್ಥಳೀಯ ಶ್ರೀ ರಾಮ ಟ್ರಸ್ಟ್ ಶಾಲೆಯ ವಿದ್ಯಾರ್ಥಿಗಳು ನಗರದÀಲ್ಲಿ ಕರಪತ್ರ ಹಂಚಿ ಅಂಗಡಿ, ಹೊಟೇಲ್‍ಗಳಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ. ರವಿ ಕುಮಾರ್ ಮಾತನಾಡಿ, ಸ್ವಚ್ಛತೆ ಬಗ್ಗೆ ಮತ್ತು ರೋಗವನ್ನು ತಡೆಗಟ್ಟುವ ಬಗ್ಗೆ ಮಾತನಾಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಮೋಹನ್, ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸದಸ್ಯೆ ಕೋಡಿಯಂಡ ಇಂದಿರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ತಿಮ್ಮಯ್ಯ, ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಮಹಮ್ಮದ್ ಖುರೇಶಿ, ಟಿ.ಎ. ಮಹಮ್ಮದ್, ಪಿ.ಎಂ. ರಷೀದ್, ಎಂ.ಎಂ. ಆಮೀನಾ, ಕುಲ್ಲೇಟಿರ ಜ್ಯೋತಿ, ಚೀಯಕಪೂವಂಡ ಮುತ್ತುರಾಣಿ ಅಚ್ಚಪ್ಪ, ಶಹನಾಜ್, ಚೋಕಿರ ರೋಶನ್, ಸುಶೀಲಮ್ಮ, ಪುಷ್ಪ ಕೃಷ್ಣಪ್ಪ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಪಿ. ಹೇಮಾವತಿ, ಆರೋಗ್ಯ ಇಲಾಖೆಯ ರಘು, ಶಿಕ್ಷಕಿ ಸುಬ್ಬಮ್ಮ, ಪಿ.ಡಿ.ಓ ಟಿ.ಆರ್. ಕೇಶವ, ಸಿಬ್ಬಂದಿಗಳಾದ ನಂದಿನಿ, ತಂಗಮ್ಮ, ನೀರನ್, ವೇಣು ಸುಬ್ಬಯ್ಯ, ಕುಟ್ಟಪ್ಪ ಮತ್ತಿತರರಿದ್ದರು.