ಮಡಿಕೇರಿ, ಮಾ. 6 : ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ರಾಜ್ಯದ ಏಕೈಕ ದೇವಾಲಯವಾಗಿರುವ ಶ್ರೀಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ತಾ.7ರಿಂದ (ಇಂದಿನಿಂದ) ಚಾಲನೆ ದೊರೆಯಲಿದೆ. ತಾ.7ರಂದು ಸಂಜೆ 7 ಗಂಟೆಗೆ ಕೊಡಿಮರ ನಿಲ್ಲಿಸುವ ಮೂಲಕ ವಾರ್ಷಿಕ ಉತ್ಸವ ಆರಂಭಗೊಳ್ಳಲಿದ್ದು, ತಾ.17ರಂದು ದೇವರ ಅವಭೃಥ ಸ್ನಾನ ಜರುಗಲಿದೆ. ಈ ಅವಧಿಯಲ್ಲಿ ಎಂದಿನಂತೆ ನಿತ್ಯ ಪೂಜೆ, ತೂಚಂಬಲಿ ಉತ್ಸವ ಮೂರ್ತಿ ದರ್ಶನ ತುಲಾಭಾರ ಕೈಂಕರ್ಯಗಳು ನಡೆಯಲಿದೆ. ತಾ.16ರಂದು ಬೆ. 5 ಗಂಟೆಗೆ ಇರುಬೆಳಕು ಹರಕೆ ಬಳಕಿನ ಪ್ರಸಾದ ವಿತರಣೆ 11 ಗಂಟೆಗೆ ತುಲಾಭಾರ ಸಂಜೆ 5 ಗಂಟೆಗೆ ನೆರಪು, ಉತ್ಸವ ಮೂರ್ತಿ ದರ್ಶನವಿದೆ. ಅಂತಿಮ ದಿನವಾದ ತಾ.17ರಂದು ಬೆಳಿಗ್ಗೆ 10 ಗಂಟೆಯಿಂದ ನಿತ್ಯಪೂಜೆ, 12 ಗಂಟೆಗೆ ತುಲಾಭಾರ, ಮಧ್ಯಾಹ್ನ 3 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಸಂಜೆ 5 ಗಂಟೆಗೆ ಉತ್ಸವ ಮೂರ್ತಿ ದರ್ಶನ, ದೇವರ ಅವಭೃತ ಸ್ನಾನ, ವಸಂತ ಪೂಜೆಯೊಂದಿಗೆ ವಾರ್ಷಿಕ ಉತ್ಸವಕ್ಕೆ ತೆರೆ ಬೀಳಲಿದೆ.