*ಗೋಣಿಕೊಪ್ಪಲು, ಮಾ. 6: ತಾ.ಪಂ. ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಪೊನ್ನಂಪೇಟೆ ತಾ.ಪಂ. ಕಚೇರಿ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ತಾಲೂಕಿನ ವಿವಿಧÀ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.ಗಂಗಾ ಕಲ್ಯಾಣ ಯೋಜನೆಯಿಂದ ತಿತಿಮತಿ ಗ್ರಾಮದ 24 ಮನೆಗಳಿಗೆ ಸೌಲಭ್ಯ ಒದಗಿಸಿದ್ದು, ಮೀಟರ್ ಅಳವಡಿಕೆಯಷ್ಟೆ ಉಳಿದಿದೆ. 2016-17ನೇ ಸಾಲಿನ ಕುಡಿಯುವ ನೀರು ಯೋಜನೆಗೆ ವಿದ್ಯುತ್ ಅಳವಡಿಕೆ ಪೂರ್ಣಗೊಂಡಿದೆ ಎಂದು ಸೆಸ್ಕ್ ತಾಲೂಕು ಅಧಿಕಾರಿ ಅಂಕಯ್ಯ ಮಾಹಿತಿ ನೀಡಿದರು.ರುಬೇಲ್ಲಾ ಹಾಗೂ ದಡಾರ ಚುಚ್ಚುಮದ್ದು ಅಳವಡಿಕೆಯಲ್ಲಿ ಜಿಲ್ಲೆಗೆ ವೀರಾಜಪೇಟೆ ತಾಲೂಕು ಪ್ರಥಮ ಸ್ಥಾನ ಪಡೆದಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಮಾಹಿತಿ ನೀಡಿದರು.ಅಬಕಾರಿ ಇಲಾಖೆ ಸಹಾಯಕ ಅಧಿಕಾರಿ ಸೋಮಣ್ಣ, ಈ ಬಾರಿ ಮದ್ಯ ಮಾರಾಟದಲ್ಲಿ ಶೇ. 80ರಷ್ಟೆ ಗುರಿ ಸಾಧಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ, ಕೃಷಿ, ಪಶು ಸಂಗೋಪನೆ, ಶಿಕ್ಷಣ ಇಲಾಖೆಗಳು ಸೇರಿದಂತೆ 24 ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಕಾರ್ಯನಿರ್ವಹಣಾ ಅಧಿಕಾರಿ ಕಿರಣ್ ಪಡ್ನೇಕರ್ ಉಪಸ್ಥಿತರಿದ್ದರು.