ಮಡಿಕೇರಿ, ಮಾ. 7: 2017-18ನೇ ಸಾಲಿಗೆ ಎಲ್ಲಾ ಖಾಸಗಿ ಶಾಲೆಗಳಲ್ಲಿ (ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ) ಮಕ್ಕಳ ಶಿಕ್ಷಣ ಹಕ್ಕು ಅಧಿನಿಯಮದಂತೆ ಶೇ. 25 ರಷ್ಟು ಸೀಟುಗಳಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಜಿಲ್ಲೆಯ 87 ಶಾಲೆಗಳಲ್ಲಿ 855 ಸೀಟುಗಳು ಲಭ್ಯವಿದ್ದು, ಜಿಲ್ಲೆಯ 3 ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಲ್ಲಿ ಆರ್.ಟಿ.ಇ. ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. 2017-18ನೇ ಶೈಕ್ಷಣಿಕ ಸಾಲಿಗೆ ಪ್ರಾರಂಭಿಕ ತರಗತಿಗಳಾದ ಎಲ್‍ಕೆಜಿ ಮತ್ತು 1 ನೇ ತರಗತಿ ಪ್ರವೇಶಾತಿಗೆ ತಾ. 31 ರೊಳಗೆ ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಎಲ್‍ಕೆಜಿ ದಾಖಲಾತಿಗೆ 3 ವರ್ಷ 10 ತಿಂಗಳು, 1 ನೇ ತರಗತಿಗೆ 5 ವರ್ಷ 10 ತಿಂಗಳು ಆಗಿರಬೇಕು. ಇತರ ವರ್ಗದವರಿಗೆ ರೂ. 3.5 ಲಕ್ಷ ಆದಾಯ ಮಿತಿ ನಿಗದಿಪಡಿಸಿದೆ. ಪ್ರವರ್ಗ-1,ಎಸ್‍ಸಿ, ಎಸ್‍ಟಿ ಸಮುದಾಯದವರಿಗೆ ಆದಾಯ ಮಿತಿ ಇಲ್ಲ. ಪೋಷಕರು ತಮ್ಮ ವಾರ್ಡ್/ಜನವಸತಿ ಪ್ರದೇಶದ ಶಾಲೆಗಳ ಆಯ್ಕೆಗೆ ಅವಕಾಶ ಇದೆ. ಸೀಟು ಆಯ್ಕೆ ಪ್ರಕ್ರೀಯೆಯಲ್ಲಿ ವಾರ್ಡ್ ವ್ಯಾಪ್ತಿಯವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ hಣಣಠಿ://sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ವೆಬ್‍ಪೋರ್ಟಲ್‍ನಲ್ಲಿ ಠಿiಟಿಛಿoಜe bಚಿseಜ ಐoಛಿಚಿಟiಣಥಿ ಚಿಟಿಜ sಛಿhooಟ seಚಿಡಿಛಿh–ಖಖಿಇ 2017 ಲಿಂಕ್ ಕ್ಲಿಕ್ ಮಾಡಿ ಪಿನ್‍ಕೋಡ್ ಮತ್ತು ಬಡಾವಣೆ ಹೆಸರು ದಾಖಲಿಸಿ, ವಾಸಸ್ಥಳ ವ್ಯಾಪ್ತಿಯ ಶಾಲೆಗಳ ಪಟ್ಟಿಯನ್ನು ಪೋಷಕರು ಅವಲೋಕಿಸಬಹುದು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ (ಡಿ.ಡಿ.ಪಿ.ಐ.) ಕಚೇರಿಯಲ್ಲೂ ಸಹಾಯವಾಣಿ ಮತ್ತು ಹೆಲ್ಪ್‍ಡೆಸ್ಕ್‍ಗಳನ್ನು ಆರಂಭಿಸಲಾಗಿದೆ. ಮೊ: 9900457040 , 9945742445, 9611509815, 08272-228337. ಜಿಲ್ಲೆಯ 3 ಶೈಕ್ಷಣಿಕ ವಲಯಗಳ ಶಾಲಾವಾರು, ವರ್ಗಾವಾರು ಸೀಟು, ಬಿ.ಇ.ಓ. ಕಚೇರಿ ಸಹಾಯವಾಣಿ ಕೇಂದ್ರಗಳ ವಿವರ ಇಂತಿದೆ.

ಮಡಿಕೇರಿ ತಾಲೂಕಿನಲ್ಲಿ 26 ಶಾಲೆಗಳು, 69 ಎಸ್‍ಸಿ, 17 ಎಸ್‍ಟಿ, 141 ಇತರೆ ಒಟ್ಟು 227 08272-225664, 9449747771, 9483296561, 9449276547. ಸೋಮವಾರಪೇಟೆ ತಾಲೂಕಿನಲ್ಲಿ 28 ಶಾಲೆಗಳು, 101 ಎಸ್‍ಸಿ, 22 ಎಸ್‍ಟಿ, 200 ಇತರೆ ಒಟ್ಟು 323, 08276-282162, 9986391766, 7411015599, 9449403029, 9449969440, 9483386761. ವೀರಾಜಪೇಟೆ ತಾಲೂಕಿನಲ್ಲಿ 33 ಶಾಲೆಗಳು, 94 ಎಸ್‍ಸಿ, 22 ಎಸ್‍ಟಿ, 189 ಇತರೆ ಒಟ್ಟು 305, 08274-257249, 9449766926, 9448648230, 9008201755, 7406832009. ಮೂರು ತಾಲೂಕಿನಲ್ಲಿ ಒಟ್ಟು ಶಾಲೆಗಳ ಸಂಖ್ಯೆ 87, ಎಸ್‍ಸಿ 264, ಎಸ್‍ಟಿ 61, ಇತರೆ 530 ಒಟ್ಟು 855 ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.