ಸುಂಟಿಕೊಪ್ಪ, ಮಾ. 7: ನಾಕೂರು ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ ವತಿಯಿಂದ ನಡೆದ 17ನೇ ವರ್ಷದ ಗ್ರಾಮೀಣ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರ ಜೆಬಿಎಸ್ ತಂಡವು ಪ್ರಥಮ ಬಹುಮಾನ ಪಡೆದುಕೊಂಡಿತು.

ನಾಕೂರು ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ವತಿಯಿಂದ ಕಾನ್‍ಬೈಲ್ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರದ ಜೆಬಿಎಸ್‍ಸಿ ತಂಡವು ಪ್ರಥಮ ಬಹುಮಾನ 15,000 ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ 10,000 ರೂ ನಗದು ಟ್ರೋಫಿಯನ್ನು ಎಫ್‍ವೈಸಿಎನಾಕೂರು ಕಾನ್‍ಬೈಲ್ ಹಾಗೂ ತೃತೀಯ ಸ್ಥಾನ ಅವಂದೂರು ಗೋಪಾಲಕೃಷ್ಣ ತಂಡಕ್ಕೆ ಪ್ರಾಪ್ತಿಯಾಗಿದ್ದು ರೂ. 5,000 ನಗದು ಹಾಗೂ ಟ್ರೋಫಿ ನೀಡಲಾಯಿತು.

ಪುರುಷರ ಹಗ್ಗಜಗ್ಗಾಟ ಪ್ರಥಮ ಕಾನ್‍ಬೈಲ್‍ನ ಎಫ್‍ವೈಸಿಯ ತಂಡ ಹಾಗೂ ದ್ವಿತೀಯ ಬಹುಮಾನ ಮಾಳ್ಳೂರಿನ ಟಿಂಬರ್ ಬಾಯ್ಸ್ ತಂಡಕ್ಕೆ ಲಭ್ಯವಾಗಿದೆ. ಮಹಿಳೆಯರ ಹಗ್ಗ ಜಗ್ಗಾಟ ನಾಕೂರಿನ ಫ್ರೆಂಡ್ಸ್ ತಂಡಕ್ಕೆ ಪ್ರಥಮ ಸೈನಿಂಗ್ ಸ್ಟಾರ್ ಮಂಜಿಕೆರೆ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು. ಪಾಸಿಂಗ್ ದಿ ಬಾಲ್ ಪ್ರಥಮ ಗೀತಾ, ದ್ವಿತೀಯ ಸೀಮಾ, ಹಾಗೂ ತೃತೀಯ ಸ್ಥಾನ ವಿಸ್ಮಿತಾ ಪಡೆದುಕೊಂಡರು. ಬಾಂಬಿಂಗ್‍ದ ಸಿಟಿಯಲ್ಲಿ ಶೃತಿ ಪ್ರಥಮ, ಜೇಬಿ ಶಿವದಾಸ್ ದ್ವಿತೀಯ, ಹಾಗೂ ಭೂಮಿಕ ತೃತೀಯ ಸ್ಥಾನಗಳಿಸಿದರು.

ಗೋಣಿಚೀಲ ಜಿಗಿತ ಪ್ರಥಮ ಶ್ರೇಯ, ದ್ವಿತೀಯ ಕೃತಿಕ್, ಹಾಗೂ ತೃತೀಯ ಅರ್ಜುನ್ ಪಡೆದರು. ರಸ್ತೆ ಓಟದಲ್ಲಿ ಪ್ರಥಮ ಬಿ. ರೇವಣ್ಣ, ಕುಶಾಲನಗರ, ದ್ವಿತೀಯ ರಾಘವೇದ್ರ ಮಡಿಕೇರಿ, ತೃತೀಯ ವಿನೋದ್ ಗುಡ್ಡೆಹೊಸೂರು ಬಹುಮಾನಗಳನ್ನು ಪಡೆದುಕೊಂಡರು.

ಡ್ಯಾನ್ಸ್‍ಮೇಳ ಕಾರ್ಯಕ್ರಮವನ್ನು ಜಿ.ಪಂ.ಸದಸ್ಯೆ ಕುಮುದಾ ಧರ್ಮಪ್ಪ, ನಾಕೂರು ಕಾಫಿ ಬೆಳೆಗಾರ ಎ.ಪಿ. ಧರ್ಮಪ್ಪ, ಹಾಗೂ ಕಾನ್‍ಬೈಲ್ ತೋಟದ ವ್ಯವಸ್ಥಾಪಕರಾದ ಪಿ.ಜಿ.ಹೆಗ್ಡೆಡೆ ಅವರುಗಳು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.