ಗೋಣಿಕೊಪ್ಪಲು, ಮಾ. 7: ಅರ್ವತೋಕ್ಲು ಕಾಡ್ಲಯ್ಯಪ್ಪ ದೇವರ ಉತ್ಸವ ತಾ. 4 ರಿಂದ ಪ್ರಾರಂಭಗೊಂಡಿದ್ದು, ತಾ. 18, 19 ರಂದು ವಾರ್ಷಿಕ ಮಹಾಪೂಜೆ ನಡೆಯಲಿದೆ.

ಕಮಟೆ ಉತ್ಸವ: ಮಾಯಮುಡಿ ಗ್ರಾಮದ ಕಮಟೆ ಶ್ರೀ ಮಹಾದೇವರ ವಾರ್ಷಿಕೋತ್ಸವ ತಾ. 12 ರಂದು ನಡೆಯಲಿದೆ. ತಾ. 8 ರಂದು ಸಂಜೆ ಕೊಡಿಮರ ನಿಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ.