ಆಲೂರು-ಸಿದ್ದಾಪುರ, ಮಾ. 7: ಇಲ್ಲಿಗೆ ಸಮೀಪದ ಮುಳ್ಳೂರು ಗ್ರಾಮದ ರೈತ ದಂಪತಿ ಎಂ.ಪಿ. ಸೋಮೇಶ್-ಅಶ್ವಿನಿ ಅವರು ತಮ್ಮ ಮನೆಯಲ್ಲಿ ಸಾಕಿದ್ದ ದೇಸಿ ತಳಿಯ ಹಸುವೊಂದು 3 ಗಂಡು ಕರುಗಳಿಗೆ ಜನ್ಮ ನೀಡಿದೆ. ಇವರುಗಳು ತಮ್ಮ ಮನೆಯಲ್ಲಿ ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ.

ದೇಸಿ ತಳಿಯ 10 ವರ್ಷದ ಹಸುವೊಂದು 3 ಗಂಡು ಕರುಗಳಿಗೆ ಜನ್ಮ ನೀಡಿದೆ. ಗ್ರಾಮ ಹಾಗೂ ಪಕ್ಕದ ಗ್ರಾಮಗಳಿಂದ ತಂಡೋಪತಂಡವಾಗಿ ಆಗಮಿಸುತ್ತಿರುವ ಜನರು ಕುತೂಹಲದಿಂದ ಹಸು ಮತ್ತು ಕರುಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ.

- ದಿನೇಶ್ ಮಾಲಂಬಿ