ವೀರಾಜಪೇಟೆ, ಮಾ. 7: ಸುಮಾರು ಎಂಟು ಶತಮಾನಗಳ ಇತಿಹಾಸವನ್ನು ಹೊಂದಿರುವ ಶ್ರೀ ಭದ್ರಕಾಳಿ ದೇವಾಲಯ ಶಿಥಿಲಗೊಳ್ಳುವ ಸ್ಥಿತಿಯಲ್ಲಿದ್ದಾಗ ಭಕ್ತಾದಿಗಳ ಸಹಕಾರದಿಂದ ಪುನರ್ ನಿರ್ಮಿಸಲಾಗಿದೆ. ದೇವಾಲಯ ಸಭಾಂಗಣದಲ್ಲಿ ಶಾಸ್ತಾವು ದೇವಸ್ಥಾನದೊಂದಿಗೆ ಜೊತೆಗೆ ಚಿತ್ರಕೂಟ ಸ್ಥಾನವು ಇದೆ. ಅಮ್ಮತ್ತಿ, ಕಾವಾಡಿ, ಕಾರ್ಮಾಡು ಗ್ರಾಮದಲ್ಲಿ ಸುಮಾರು ರೂ. 65 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಿಸಿದ ಭದ್ರಕಾಳಿಯ ನೂತನ ದೇವಸ್ಥಾನವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.

ಇನ್ನು ಮುಂದೆ ದೇವಾಲಯದಲ್ಲಿ ನಿರಂತರ ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳು ಜರುಗಲಿವೆ ಎಂದು ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ತಿಳಿಸಿದರು.

ದೇವತಕ್ಕರಾದ ಕಾವಾಡಿಚಂಡ ಯು. ಗಣಪತಿ, ಎಂ.ಎ. ವಸಂತ್, ಮಾಚಿಮಂಡ ಸುರೇಶ್, ಮಲ್ಲಂಡ ಮಧು ದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.