ವೀರಾಜಪೇಟೆ, ಮಾ. 7: ಪೋಷಕರು ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ವಿದ್ಯಾ ಸಂಸ್ಥೆಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸಿದರೂ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಶಿಕ್ಷಕರಷ್ಟೇ ಪೋಷಕರ ಮಹತ್ತರ ಜವಾಬ್ದಾರಿ ಇದೆ. ಮಕ್ಕಳಿಗೆ ಮನೆಯಿಂದಲೇ ಶಿಸ್ತು, ಸಂಯಮ, ದಕ್ಷತೆ, ಪ್ರಾಮಾಣಿಕತೆಯ ಪಾಠ ಮನೆಯಿಂದಲೇ ಆರಂಭವಾಗುವಂತಿರಬೇಕು ಎಂದು ಅಮ್ಮತ್ತಿ ಪ್ರೌಢ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ನಿವೃತ್ತ ಕರ್ನಲ್ ಕೆ.ಸಿ. ಸುಬ್ಬಯ್ಯ ತಿಳಿಸಿದರು.

ಅಮ್ಮತ್ತಿಯ ನೆಕ್ಸ್ ಜನರೇಶನ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಮಾತನಾಡಿ, ಮಕ್ಕಳಿಗೆ ಉತ್ತಮ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದರು.

ಕೊಡಗು ಜಿಲ್ಲಾ ಮಾರ್ಕೆಟಿಂಗ್ ಫೆಡರೇಶನ್‍ನ ಅಧ್ಯಕ್ಷ ಐನಂಡ ಅಚ್ಚಪ್ಪ ಮಾತನಾಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಅಮ್ಮತ್ತಿಯ ಪಿ.ಎ.ಸಿ.ಎಸ್. ಅಧ್ಯಕ್ಷ ಮೂಕೋಂಡ ಅಯ್ಯಪ್ಪ, ಎ.ಪಿ.ಸಿ.ಎಂ.ಎಸ್. ನಿರ್ದೇಶಕ ಮೊಳ್ಳೇರ ಪೂಣಚ್ಚ, ಅಮ್ಮತ್ತಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪಟ್ಟಡ ಸೋಮಯ್ಯ, ಕಾವೇರಿ ರಾಯಲ್ಸ್ ಕ್ಲಬ್ ಅಧ್ಯಕ್ಷ ಉದ್ದಪಂಡ ಪೊನ್ನಣ್ಣ, ಕೆ.ಯು. ಗಣಪತಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಟಿ. ಸದಾನಂದ ಉಪಸ್ಥಿತರಿದ್ದರು.

ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಮ್ಮತ್ತಿಯ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದ ನಂತರ ಶಾಲೆಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಪ್ರಾಂಶುಪಾಲೆ ಇಂದು ಗಣಪತಿ, ಪ್ರಿಯ ಕಾರ್ಯಪ್ಪ ಮೊದಲಾದವರು ಪಾಲ್ಗೊಂಡಿದ್ದರು.