ಮಡಿಕೇರಿ, ಮಾ. 7: ಕೊಡಗು ಪ್ರೆಸ್‍ಕ್ಲಬ್‍ನ 2017-18ನೇ ಸಾಲಿನ ಸದಸ್ಯತ್ವಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ವ್ಯವಸ್ಥಾಪಕರು, ಕೊಡಗು ಪ್ರೆಸ್‍ಕ್ಲಬ್, ಪತ್ರಿಕಾಭವನ, ಮಡಿಕೇರಿ, (08272-224031 ಮೊ. 8970565856) ಇಲ್ಲಿಗೆ ತಾ. 22ರ ಒಳಗಾಗಿ ಸಲ್ಲಿಸಬಹುದಾಗಿದೆ.
ಆಜೀವ ಸದಸ್ಯರುಗಳು ಸದಸ್ಯತ್ವವನ್ನು ನವೀಕರಿಸಲು ರೂ 100 ಸಾಮಾನ್ಯ ಸದಸ್ಯರು ಸದಸ್ಯತ್ವವನ್ನು ನವೀಕರಿಸಲು ರೂ 500 ನೂತನ ಸದಸ್ಯತ್ವ ಬಯಸುವವರು ರೂ 600 ಪಾವತಿಸಿ ತಮ್ಮ ಎರಡು ಫೊಟೋ, ಸ್ವವಿವರಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಿ ಅರ್ಜಿಯನ್ನು ಪ್ರೆಸ್‍ಕ್ಲಬ್ ಕಚೇರಿಗೆ ನೀಡತಕ್ಕದ್ದು. ಅರ್ಜಿಯನ್ನು ಪ್ರೆಸ್ ಕ್ಲಬ್‍ನಲ್ಲಿ ರೂ 10 ನೀಡಿ ಪಡೆದುಕೊಳ್ಳಬಹುದಾಗಿದೆ.
ನೂತನವಾಗಿ ಆಜೀವ ಸದಸ್ಯತ್ವ ಬಯಸುವ, ಸತತವಾಗಿ 3 ವರುಷ ಸಾಮಾನ್ಯ ಸದಸ್ಯರಾಗಿ ಮುಂದುವರೆದಿರುವ ಸದಸ್ಯರು ರೂ. 3000 ಪಾವತಿಸಿ ಆಜೀವ ಸದಸ್ಯತ್ವ ಪಡೆಯಬಹುದಾಗಿದೆ. ಇದಕ್ಕಾಗಿ ಗರಿಷ್ಠ 4 ಕಂತಿನಲ್ಲಿ ರೂ. 750ರಂತೆ ಒಂದು ವರುಷದ ಅವಧಿಯಲ್ಲಿ ಹಣ ಪಾವತಿಸಲು ಅವಕಾಶವಿದೆ.
ಸದಸ್ಯರು ತಮ್ಮ ವಿಳಾಸ, ಕಾರ್ಯ ನಿರ್ವಹಿಸುತ್ತಿರುವ ಪತ್ರಿಕೆಯ ಹೆಸರು ಮತ್ತು ವಿಳಾಸ, ಸಂಪಾದಕರ ಸಹಿ ಅಥವಾ ಜಿಲ್ಲಾ ವರದಿಗಾರರ ಸಹಿ, ಸ್ಥಿರ ದೂರವಾಣಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಅರ್ಜಿಯೊಂದಿಗೆ ನೀಡಬೇಕಾಗಿ ಪ್ರೆಸ್‍ಕ್ಲಬ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮತು ್ತಕಾರ್ಯದರ್ಶಿ ಬಿ.ಸಿ ದಿನೇಶ್ ಕೋರಿದ್ದಾರೆ.