ಚೆಂಬೆಬೆಳ್ಳೂರು ಗ್ರಾಮದ ಪೊರುಕೊಂಡ ಬೆಳ್ಯವ್ವ (76) ಅವರು ತಾ. 7 ರಂದು ನಿಧನರಾದರು. ಮೃತರು ಪತ್ನಿ ಹಾಗೂ ಈರ್ವರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ.8 ರಂದು (ಇಂದು) ಚೆಂಬೆಬೆಳ್ಳೂರು ಗ್ರಾಮದ ಮೃತರ ಸ್ವಗೃಹದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
=ಮಡಿಕೇರಿಯ ದಿವಂಗತ ಪಿ.ಎ. ಹಾರೂನ್ (ಫೈವ್‍ಸ್ಟಾರ್) ಅವರ ಮಾತೋಶ್ರೀ ಆಸಿಯಾ (85) ಅವರು ತಾ. 4 ರಂದು ರಾತ್ರಿ ನಿಧನರಾದರು.
=ವೀರಾಜಪೇಟೆ ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಕೆ. ಮುಹಮ್ಮದ್ ರಾಫಿ ಅವರ ತಂದೆ ಸುಣ್ಣದ ಬೀದಿಯ ನಿವಾಸಿ ಕೆ.ಹಂಝ (79) ತಾ. 8ರಂದು ಬೆಳಿಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ 8 ಮಂದಿ ಪುತ್ರಿಯರನ್ನು ಅಗಲಿದ್ದಾರೆ. ಮೃತರು ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿ ಸದಸ್ಯರಾಗಿದ್ದರು.
=ಶನಿವಾರಸಂತೆ 1ನೇ ವಿಭಾಗದ ನಿವಾಸಿ ಕಂದಾಯ ಇಲಾಖೆಯಲ್ಲಿ ಮಾಜಿ ಸಹಾಯಕರಾಗಿದ್ದ ಬಿ.ಕೆ. ನರೇಂದ್ರ (72) ತಾ. 6ರಂದು ನಿಧನ ಹೊಂದಿದರು.