ಸೋಮವಾರಪೇಟೆ, ಮಾ. 7: ಪಾಕಿಸ್ತಾನದ ಭೇಟಿ ಬಳಿಕ ಆ ದೇಶದ ಪರ ಹೇಳಿಕೆ ನೀಡಿದ್ದ ಮಾಜಿ ಸಂಸದೆ ಹಾಗೂ ಸಿನಿಮಾ ನಟಿ ರಮ್ಯ ಅವರ ವಿರುದ್ಧ ಇಲ್ಲಿನ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ದಾಖಲಾಗಿರುವ ಖಾಸಗಿ ದೂರಿನ ವಿಚಾರಣೆ ನಡೆಯಿತು.ರಮ್ಯ ವಿರುದ್ಧ ಪಟ್ಟಣದ ವಕೀಲ, ಕೊಡಗು ಪ್ರಜಾರಂಗದ ಜಿಲ್ಲಾಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಅವರು ಕಳೆದ 2016ರ ಆಗಸ್ಟ್ 22 ರಂದು ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆಯಲ್ಲಿ ದೂರುದಾರ ವಿಠಲ್ ಅವರ ಪ್ರಾಮಾಣೀಕೃತ ಹೇಳಿಕೆಯನ್ನು ನ್ಯಾಯಾಧೀಶ ಶ್ಯಾಂಪ್ರಕಾಶ್ ದಾಖಲು ಮಾಡಿಕೊಂಡರು. ಮುಂದಿನ ವಿಚಾರಣೆಯನ್ನು ತಾ. 10ಕ್ಕೆ ಮುಂದೂಡಿದರು.