ಮಡಿಕೇರಿ, ಮಾ. 7: ಕೇಂದ್ರ ಮೌಲ್ಯ ಮಾಪನ ಸಮಿತಿ ಬೆಂಗಳೂರುರವರ ನಿರ್ದೇಶನದನ್ವಯ ಮಡಿಕೇರಿ ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶಗಳ ಸ್ಥಿರಾಸ್ತಿಗಳ ದರವನ್ನು ಮಡಿಕೇರಿ ಮಾರುಕಟ್ಟೆ ಬೆಲೆ ಉಪ ಸಮಿತಿಯಲ್ಲಿ 2017-18ನೇ ಸಾಲಿಗೆ ಅನ್ವಯವಾಗುವಂತೆ ಪರಿಷ್ಕರಿಸಲಾಗಿದೆ.
ಈ ದರಪಟ್ಟಿಯನ್ನು ತಾ. 6 ರಂದು ಹಿರಿಯ ಉಪ ನೋಂದಣಿ ಕಚೇರಿ, ಮಡಿಕೇರಿ, ತಹಶೀಲ್ದಾರ್ ಕಚೇರಿ, ನಗರ ಸಭೆ ಹಾಗೂ ಇತರೆ ಕಚೇರಿಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. 2017-18ನೇ ಸಾಲಿನ ಸ್ಥಿರಾಸ್ತಿಗಳ ಪರಿಷ್ಕøತ ದರಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಹಿರಿಯ ಉಪ ನೋಂದಾಣಾಧಿಕಾರಿಗಳು, ಮಡಿಕೇರಿ ಇವರಿಗೆ ತಾ. 21 ರೊಳಗೆ ದಾಖಲೆಗಳೊಂದಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಬಹುದು ಎಂದು ಮಡಿಕೇರಿ ಹಿರಿಯ ಉಪ ನೋಂದಣಾಧಿಕಾರಿ ತಿಳಿಸಿದ್ದಾರೆ.