ಮಡಿಕೇರಿ, ಮಾ. 7: ಹಾಕಿ ಕರ್ನಾಟಕ ವತಿಯಿಂದ ಸೀನಿಯರ್ ಹಾಗೂ ಜೂನಿಯರ್ ಪುರುಷರ ತಂಡಕ್ಕೆ ಆಟಗಾರರ ಆಯ್ಕೆ ಪ್ರಕ್ರಿಯೆ ಏರ್ಪಡಿಸಲಾಗಿದೆ.

ಸೀನಿಯರ್ ವಿಭಾಗಕ್ಕೆ ತಾ. 11 ರಂದು ಬೆಳಿಗ್ಗೆ 9 ಗಂಟೆಯಿಂದ ಹಾಗೂ ಜೂನಿಯರ್ ವಿಭಾಗಕ್ಕೆ ತಾ. 12 ರಂದು ಬೆಳಿಗ್ಗೆ 9 ಗಂಟೆಯಿಂದ ಕೆಂಗೇರಿಯ ಸಾಯಿ ಮೈದಾನದಲ್ಲಿ ನಡೆಯಲಿದೆ. ಮುಂಬರುವ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಯಲಿರುವ 7ನೇ ಹಾಕಿ ಇಂಡಿಯಾ ನ್ಯಾಷನಲ್ ಚಾಂಪಿಯನ್‍ಶಿಪ್ ಪಂದ್ಯಾವಳಿಗಾಗಿ ತಂಡದ ಆಯ್ಕೆ ನಡೆಯಲಿದೆ ಎಂದು ಹಾಕಿ ಕರ್ನಾಟಕ ಗೌರವ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ ತಿಳಿಸಿದ್ದಾರೆ.