ಕೊಡಗನ್ನು ಪ್ರತಿನಿಧಿಸಿ ಕ್ರೀಡೆಯಲ್ಲಿ ಬೆಳಗಿ ವಿಶ್ವ ಮಟ್ಟದಲ್ಲಿ ಸಾಧನೆಗಳನ್ನು ಮಾಡಿದ ಅನೇಕ ಕ್ರೀಡಾಪಟು ಗಳಿದ್ದಾರೆ. ಹಲವರು ಎಲೆ ಮರೆಯ ಕಾಯಿಗಳಂತಿರು ವರು. ಪ್ರಸ್ತುತ ಸಾಧÀನೆ ಗಳ ಸವಾರಿ ಯಲ್ಲಿದ್ದರೂ, ಅವರ ಸಾಧನೆಗಳ ಸುದ್ಧಿ ತಿಳಿಯುವದೇ ಇಲ್ಲ. ಅದು ಹೇಗೋ ಬೆಳಕಿಗೆ ಬಂದಾಗ ನಮ್ಮ ಜಿಲ್ಲೆಯಲ್ಲಿ ಇಂತಹ ಸಾಧಕರಿದ್ದಾರಾ ಎಂದು ಬೆರಗಾಗುತ್ತೇವೆ. ಗ್ರೀನೀಜ್ ‘ಡಿ’ ಕುನ್ಹ ಕುಶಾಲನಗರದ ಅಂತರರಾಷ್ಟ್ರೀಯ ಮಟ್ಟದ ಪ್ರಖ್ಯಾತ ಕ್ರೀಡಾಪಟು. ಹ್ಯಾಂಡ್ಬಾಲ್ ಕ್ರೀಡೆಯಲ್ಲಿ ಅವರು ವಿಶ್ವ ಮಟ್ಟದ ಮಹಾ ವಿಕ್ರಮಗಳನ್ನೇ ಮೆರೆದಿದ್ದಾರೆ.
ಬಾಲ್ಯ : ಪೀಟರ್ ಡಿ ಕುನ್ಹಾ ಹಾಗೂ ಸಲೀನಾ ‘ಡಿ’ಕುನ್ಹಾ ದಂಪತಿಗಳ ಮಗನೇ ಗ್ರೀನಿಜ್ ‘ಡಿ’ ಕುನ್ಹ 20-4-1984 ರಂದು ಜನಿಸಿದ ಈತ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದ್ದು, ಫಾತಿಮಾ ಕಾನ್ವೆಂಟ್, ಕುಶಾಲನಗರದಲ್ಲಿ ಹಾಗೇ ಪ್ರೌಢ ಶಾಲಾ ಶಿಕ್ಷಣವನ್ನೂ ಅಲ್ಲೇ ಪಡೆದು, ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ತರಬೇತಿ ಕೇಂದ್ರದಿಂದ ಡಿಪ್ಲೋಮಾ ಗಳಿಸಿದರು. ತಮ್ಮ ಡಿಪ್ಲೋಮಾ ಶಿಕ್ಷಣದ ನಂತರ 2002ರಲ್ಲಿ ಜ್ಞಾನ ಭಾರತಿ ಸ್ಪೋಟ್ರ್ಸ್ ಕ್ಲಬ್ಗೆ ಸೇರ್ಪಡೆ ಯಾಗಿ ಕಬಡ್ಡಿಯಲ್ಲಿ ಉತ್ತಮ ಕ್ರೀಡಾಪಟುವಾದರು. ಕ್ಲಬ್ನ ಸಂಸ್ಥಾಪಕರಾದ ಹೆಚ್. ಎಸ್. ಉತ್ತಪ್ಪ ಅವರ ತರಬೇತಿ, ಮಾರ್ಗದರ್ಶನ ಪಡೆದರು.
ಭಾರತೀಯ ಸೇನೆಗೆ ಸೇರ್ಪಡೆ : ದೇಶ ಸೇವೆಯ ಕನಸು ಹೊತ್ತ ಈ ಕ್ರೀಡಾಪಟು 3-3-2004ರಲ್ಲಿ ಬೆಂಗಳೂರಿನಲ್ಲಿ ಎಂ. ಇ. ಜಿ. ಸೆಂಟರ್ಗೆ ಸೇರ್ಪಡೆಗೊಂಡರು. ಸೇನೆಯಲ್ಲಿ ಸೇರಿದ ನಂತರ ಇವರ ಕ್ರೀಡಾ ಉತ್ಸಾಹ ಇಮ್ಮಡಿ ಯಾಯಿತು.
ಸಾಧನೆಗಳ ಸರಮಾಲೆ : ಕಬಡ್ಡಿ ಮತ್ತು ಮೇಲಾಟಗಳಲ್ಲಿ ಆಸಕ್ತಿಯಿದ್ದು, ವಿದ್ಯಾಭ್ಯಾಸದ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಡಿಪ್ಲೋಮಾ ಸ್ಪರ್ಧೆಗಳಲ್ಲಿ ಮೂರು ವಿಭಾಗÀಗಳಲ್ಲಿ ಚಿನ್ನಗಳಿಸಿದ್ದರು. ಇದು ಭವಿಷ್ಯಕ್ಕೆ ಮುನ್ನುಡಿ ಬರೆದಂತೆ ಇತ್ತು. 2008ರಲ್ಲಿ ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನಲ್ಲಿ ಹ್ಯಾಂಡ್ಬಾಲ್ ನಲ್ಲಿ ಚಿನ್ನವನ್ನುಗಳಿಸಿ, 2009ರಲ್ಲಿ ಮಧ್ಯ ಪ್ರದೇಶದ ಉಜೈನಿಯಲ್ಲಿ ಚಿನ್ನ, 2011ರಲ್ಲಿ ಬಿಲಾಯಿಯಲ್ಲಿ ಚಿನ್ನ, 2012ರಲ್ಲ್ಲಿ ಬಿಲಾಸ್ಪುರ ಛತ್ತೀಸ್ಗಡದಲ್ಲಿ ಚಿನ್ನ, 2012ರಲ್ಲಿ ಜಾರ್ಖಂಡ್ನಲ್ಲಿ ಚಿನ್ನ, 2014ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಮತ್ತೆ ಚಿನ್ನ, 2016ರಲ್ಲಿ ಹರಿಯಾಣದಲ್ಲಿ ಚಿನ್ನ ಹೀಗೆ ರಾಷ್ಟ್ರ ಮಟ್ಟದಲ್ಲಿ ಚಿನ್ನವನ್ನು ಕ್ರೀಡಾಸ್ಪರ್ಧೆಗಳಲ್ಲಿ ಕೊಳ್ಳೆ ಹೊಡೆದರೆ, 2010ರಲ್ಲಿ ಪಶ್ಚಿಮ ಬಂಗಾಳದ ಕಲ್ಕತಾದಲ್ಲಿ ಬೆಳ್ಳಿ ಪದಕ, 2010ರಲ್ಲಿ ರಾಷ್ಟ್ರೀಯ ಕ್ರೀಡೆಗಳಲ್ಲಿ ಗೌಹಾಟಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿದರು. 2013ರಲ್ಲಿ ಬೆಳ್ಳಿ ಪದಕವನ್ನು ಚಂಡೀಘಡ ದಲ್ಲಿ ಭಾಗವಹಿಸಿ ಪಡೆದುಕೊಂಡರು. ಹ್ಯಾಂಡ್ಬಾಲ್ನಲ್ಲಿ ಒಟ್ಟು ಹತ್ತು ಚಿನ್ನ ಎರಡು ಬೆಳ್ಳಿ ಪದಕಗಳನ್ನು ಗಳಿಸಿದ ಅಮೋಘ ಸಾಧನೆಗಳನ್ನು ಮಾಡಿದರು. ರಾಷ್ಟ್ರಮಟ್ಟದಲ್ಲಿ ಸಾಧಕನಾದ ಸೇನಾ ಕ್ರೀಡಾಪಟು ವಿನ ಕೀರ್ತಿ ಕೊಡಗಿಗೂ ಅಪಾರಕೀರ್ತಿ ತಂದಿತು.
ಅಂತರರಾಷ್ಟ್ರೀಯ ಮಟ್ಟದ ಸಾಧನೆ : 2010ರಲ್ಲಿ ಚೀನಾದ ಗ್ಯಾಂಗ್ಜುಂಗ್ನಲ್ಲಿ ನಡೆದ ಏಷ್ಯಾ ಗೇಮ್ಸ್ನಲ್ಲಿ ಭಾರತ 9ನೇ ಸ್ಥಾನ ಗಳಿಸಿದರೆ, ಹ್ಯಾಂಡ್ಬಾಲ್ನಲ್ಲಿ ಗ್ರೀನೀಜ್ರ ಸಾಧನೆ ಎಲ್ಲರ ಗಮನ ಸೆಳೆಯಿತು. ಆಟ ಎಲ್ಲರನ್ನೂ ಮುದಗೊಳಿಸಿತು. 2011ರಲ್ಲಿ ಸೌತ್ ಏಷ್ಯನ್ ಗೇಮ್ಸ್ ದೆಹಲಿಯಲ್ಲಿ ನಡೆದಾಗ ಭಾರತ ಚಿನ್ನ ಗಳಿಸಿತು. 2012ರಲ್ಲಿ ಸೌತ್ ಏಷ್ಯನ್ ಗೇಮ್ಸ್ ದೆಹಲಿಯಲ್ಲಿ ನಡೆದಾಗ, ಹ್ಯಾಂಡ್ಬಾಲ್ನಲ್ಲಿ ಕುಶಾಲನಗರದ ಮಹಾ ಆಟಗಾರ ಮತ್ತೆ ಚಿನ್ನ ಗಳಿಸಿದರೆ, 2015ರಲ್ಲಿ ಮತ್ತೆ ಸೌತ್ ಏಷ್ಯನ್ ಗೇಮ್ಸ್ನಲ್ಲಿ (ಗೌಹಾಟಿ, ತ್ರಿಪುರಾ) ಭಾರತ ಹ್ಯಾಂಡ್ಬಾಲ್ನಲ್ಲಿ ಚಿನ್ನ ಗಳಿಸಿದಾಗ, ಗ್ರೀನೀಜ್ರವರು 3ನೇ ಬಾರಿ ಚಿನ್ನದ ಪದಕವನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪಡೆಯುತ್ತಾರೆ. ರಾಷ್ಟ್ರ ಮಟ್ಟದಲ್ಲಿ 12 ಬಾರಿ ಭಾಗವಹಿಸಿ, 10 ಚಿನ್ನ, 2 ಬೆಳ್ಳಿ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ 5 ಬಾರಿ ಭಾಗವಹಿಸು ವಿಕೆ, ಅಲ್ಲಿ 3 ಚಿನ್ನ ಪಡೆದು ಭಾರತ ದೇಶಕ್ಕೆ, ಕರ್ನಾಟಕಕ್ಕೆ, ಪುಟ್ಟ ಕೊಡಗಿಗೆ ಅಪಾರ ಕೀರ್ತಿ ಯನ್ನು ತಂದರು. 2014ರಲ್ಲಿ ಇಂಚಾನ್, ಸೌತ್ ಕೊರಿಯಾ ಇಲ್ಲಿ ಹ್ಯಾಂಡ್ಬಾಲ್ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದು, ಅವರ ಸಾಧನೆ ಗಳಿಗೆ ದೊರೆತ ಪ್ರತಿಫಲ.
ಪ್ರಶಸ್ತಿಗಳ ಗರಿ : 3-3-2004 ರಲ್ಲಿ ಸೇನೆಗೆ ಸೇರ್ಪಡೆಯಾಗಿ 2016ಲ್ಲಿ ಉತ್ತಮ ಕ್ರೀಡಾಪಟು ವೆಂಬ ಭಾರತೀಯ ಸೇನಾ ಪ್ರಶಸ್ತಿ 2017ರಲ್ಲಿ ಎಂ.ಯಿ.ಜಿ. ಸೆಂಟರ್ನಿಂದ ಉತ್ತಮ ಕ್ರೀಡಾ ಪ್ರಶಸ್ತಿ, ಚೀಫ್ ಆಫ್ ಆರ್ಮಿ ಸ್ಟಾಫ್ ಪ್ರಶಸ್ತಿ (ಸಿ.ಓ.ವಿ.ಎಸ್.) ಹಾಗೂ ಜನರಲ್ ಆಫ್ ಸೆಂಟರ್ ಪ್ರಶಸ್ತಿ (ಜಿ.ಓ.ಸಿ) ಎಂಬ ಹೆಮ್ಮೆಯ ಪ್ರಶಸ್ತಿಗಳನ್ನು ಗಳಿಸಿ ಪ್ರಸ್ತುತ ಸೇನೆಯಲ್ಲಿ ಹವಲ್ದಾರ ನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಹಾಗೂ ಈರ್ವರು ಮಕ್ಕಳನ್ನು ಹೊಂದಿರುವ ಗ್ರೀನಿಜ್ ‘ಡಿ’ ಕುನ್ಹರವರ ಕ್ರೀಡಾ ಸಾಧನೆ ಕೊಡಗಿಗೆ ಹೆಮ್ಮೆ ತಂದಿದೆ. ದೇಶ ಸೇವೆಯೊಡನೆ ಕ್ರೀಡಾ ಸಾಧನೆ ಗಳನ್ನು ಮಾಡುತ್ತಿರುವದು ವಿಶೇಷ, ಶ್ರೇಷ್ಠ ಸಂಗತಿಯಾಗಿದೆ. ಭವಿಷ್ಯದಲ್ಲಿ ಈ ಕ್ರೀಡಾ ಸಾಧಕನ ಸಾಧನೆಗಳು ಉತ್ತುಂಗಕ್ಕೇರಲಿ ಎಂಬದೇ ಕ್ರೀಡಾಭಿಮಾನಿಗಳ ಹಾರೈಕೆ ಯಾಗಿದೆ. ಸದ್ಯಕ್ಕಂತೂ ಮಾರ್ಚ್ 3,4,5 ರಂದು ಕುಶಾಲನಗರದಲ್ಲಿ ನಡೆಯುವ ಪ್ರೊ. ಕಬಡ್ಡಿ ಪಂದ್ಯಾಟದಲ್ಲಿ (ಪ್ರಥಮ ಬಾರಿಗೆ) ಕೊಡಗಿನ ತಂಡವೊಂದರ ನಾಯಕನಾಗಿ ಪಂದ್ಯಾಟದಲ್ಲಿ ಪಾಲ್ಗೊಳ್ಳುವದರಲ್ಲಿ ತಲ್ಲೀನರಾಗಿದ್ದಾರೆ.