ವೀರಾಜಪೇಟೆ, ಮಾ. 8: ಜಾಗೃತಿ ಹೊಂದಿದ ಸಮಾಜ ನಿರ್ಮಾಣ ಆಗಬೇಕಾದರೆ ಮಹಿಳೆಯರ ಪಾತ್ರ ಪ್ರಮುಖವಾದದ್ದು ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ, ಇವರ ಸಹಯೋಗದಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಂತ ರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಭಾರತ ದೇಶ ಆಚಾರ,ವಿಚಾರ, ವಿಭಿನ್ನ ಸಂಸ್ಕøತಿಯನ್ನು ಹೊಂದಿರು ವದರಿಂದಲೇ ತಾಯಿಗೆ ಪ್ರಮುಖ ಸ್ಥಾನ ನೀಡಿ ಮಾತೃದೇವೋಭವ ಎನ್ನುತ್ತೇವೆ. ಕುಟುಂಬ ಉದ್ದಾರ ವಾದರೆ ಸಮಾಜ, ದೇಶ ಉದ್ಧಾರವಾಗುತ್ತದೆ. ಮಹಿಳೆ ಸಬಲೀಕರಣವಾದರೆ ಸಮಾಜ ಪ್ರಗತಿಯತ್ತ ಮುಂದುವರೆಯಲು ಸಾಧ್ಯ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಬಲಳಾಗಿ ಸಮಾಜ ಮುಖಿಯಾಗಿ ಕೆಲಸ ನಿರ್ವಹಿಸುತ್ತಿ ದ್ದಾಳೆ. ಆರ್ಥಿಕ, ಸಾಮಾಜಿಕವಾಗಿ ಸಬಲರಾಗುವ ದರೊಂದಿಗೆ ಮಾನಸಿಕವಾಗಿ ಸಮಾಜದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾನಂಗಡ ಅರುಣ್ ಕುಮಾರ್ ಉಪಸ್ಥಿತರಿದ್ದರು. ವೀರಾಜಪೇಟೆ ಯೋಜನಾಧಿಕಾರಿ ಸದಾನಂದಗೌಡ ಸ್ವಾಗತಿಸಿದರು. ಸಪ್ನಾ ಕಾರ್ಯಕ್ರಮ ನಿರೂಪಿಸಿ, ಚೇತನ್ ವಂದಿಸಿದರು.