ನಿಗೂಢವಾಗಿ ಉಳಿದುಹೋದ ವ್ಯಕ್ತಿತ್ವ ಪಾಲಚಂಡ ತುಳಸಿದೇವಿ ಎಂಬ ಅದ್ಭುತ ಜನಪದ ಸಂಶೋಧಕಿ. 1982-84 ರ ಆಸುಪಾಸಿನಲ್ಲಿ ಇಂದಿನ ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ. ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿಗೆ ಸೇರಿಕೊಂಡ ಈ ಸಾಧಕಿಗೆ ಕೊಡವ ಜನಪದ ಸಂಶೋಧನೆಯ ಬಗ್ಗೆ ವಿಪರೀತ ಆಸಕ್ತಿ. ಪಾಲಚಂಡ ತುಳಸಿದೇವಿ ಎಂಬ ಸಾದ್ವಿ ಹೆಣ್ಣುಮಗಳು ಎಫ್.ಎಂ.ಕೆ.ಎಂ.ಸಿ. ಕಾಲೇಜಿನಲ್ಲಿ ಪ್ರಾಧ್ಯಾಪಕಿ ಆಗಿದ್ದ ಸಮಯದಲ್ಲಿ ಕನ್ನಡ ಮಾಸಿಕವಾದ “ತುಷಾರ” ದಲ್ಲಿ ಪ್ರಕಟಗೊಂಡ ಕವನವೊಂದು ಆಕೆಯ ಬದುಕನ್ನೇ ಬದಲಾಯಿಸಿ ಬಿಡುತ್ತದೆ.
ಆ ಕವನದ ಬರಹಗಾರ “ಅಲ್ಲಾಸಾಬ್ ಬುಡನ್” ಆತನಿಗೆ ತುಳಸಿದೇವಿ ಒಂದು ಅಭಿನಂದನಾ ಪತ್ರವನ್ನು ಬರೆದುಬಿಡುತ್ತಾಳೆ. ಪತ್ರ ಪರಿಚಯದಿಂದಾಗಿ ಇಬ್ಬರೂ ಪ್ರೇಮಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಹಂತಕ್ಕೆ ತಲುಪುತ್ತದೆ. ದಾಂಪತ್ಯಕ್ಕೆ ತೊಡಗಿಕೊಂಡ ನಂತರ “ಅಲ್ಲಾ ಸಾಬ್ ಬುಡನ್”. ಆರ್ಯ “ಅರವಿಂದ ಅರ್ಯ” ಎಂಬ ಹೆಸರಿನೊಂದಿಗೆ ಹಿಂದೂ ಬ್ರಾಹ್ಮಣನಾಗಿ ಮತಾಂತರಗೊಳ್ಳುತ್ತಾನೆ. ಮಡದಿ ತುಳಸಿದೇವಿಯ ಸಂಶೋಧನೆಗೆ ಹೆಗಲಿಗೆ ಹೆಗಲು ನೀಡಿ ಶ್ರಮಿಸುತ್ತಾನೆ ಕೂಡ. ಹತ್ತಿನೂಲಿನ ಸೀರೆ ರವಿಕೆಯ ಉಡುಗೆಯೊಂದಿಗೆ ಜತೆಯಲ್ಲೊಂದು ಜೋಳಿಗೆ ತೂಗಿಸಿಕೊಂಡು ಈ ಅದ್ಭುತ ಸಾಧಕಿ. ಕೊಡಗಿನ ಮೂಲೆ ಮೂಲೆಯನ್ನು ತಿರುಗಿದ್ದಾಳೆ. ಸರಿಯಾದ ರಸ್ತೆಗಳು ವಾಹನ ವ್ಯವಸ್ಥೆಗಳ ದೌರ್ಬಲ್ಯದಲ್ಲೂ ಕೇವಲ ಕಾಲು ನಡಿಗೆಯಲ್ಲೇ ಕೊಡಗಿನ ಕುಗ್ರಾಮಗಳ ಮೂಲೆ ಮೂಲೆಯನ್ನು ತಲುಪಿದ್ದಳು. ಹಾಗೆಯೇ ಅಲ್ಲಿಂದ ಮರುಳುವಾಗ ಅಪರೂಪದಲ್ಲಿ ಅಪರೂಪ ವಾದ ಜನಪದ ಪರಿಕರಗಳನ್ನು, ಜನಪದ ವಿದ್ವಾಂಸಗಳನ್ನು ಹೊತ್ತು ಮರಳಿ ಮನೆಗೆ ಬರುತ್ತಿದ್ದಳು. ಇದೀಗ ಕೊಡಗಿನ ಸಂಘಟನೆಯೊಂದು ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಒತ್ತಡ ಹೇರುತ್ತಿರುವುದು ಕೊಡಗಿಗೆ ತಿಳಿದ ವಿಚಾರ.
ಕೊಡವ ಕುಲಶಾಸ್ತ್ರ ಅಧ್ಯಯನವನ್ನು 1988-87 ರ ದಶಕದಲ್ಲೇ ಈ ಸಾಧಕಿ ಅಧ್ಯಯನ ನಡೆಸಿ ತನ್ನ ಅಧ್ಯಯನವನ್ನು ಅಭಿವ್ಯಕ್ತಿಗೊಳಿಸಿದಾಗ ಕೊಡಗಿನಿಂದಲೇ ಸ್ವತÀಃ ಗಡಿಪಾರಾಗುವಂತೆ ಕೊಡವ ಸಾಂಸ್ಕøತಿಕ ಪ್ರಿಯರು ಅರಿವಿದ್ದೊ ಇಲ್ಲದೆಯೋ ಮಾಡಿಕೊಂಡ ಸ್ವಯಂಕೃತ ಅಪರಾಧದಿಂದ ಕೊಡಗು ಇತಿಹಾಸಕ್ಕೆ ನಷ್ಟವಾಗಿರುವುದಂತೂ ನಿಜ.
ನಮ್ಮ ಕೊಡಗಿನ ಜನಪದ ಲೋಕದ ನಿಜ ಸಾಧಕಿ ತಾನು ಅಧ್ಯಯನಿಸಿದ ಅದೆಷ್ಟೋ ಬರಹಗಳು ಮುದ್ರಣಗೊಳ್ಳದಿರುವುದು ಕೊಡವ ಕುಲಶಾಸ್ತ್ರ ಅಧ್ಯಯನ ಅಥವಾ ಜನಾಂಗೀಯ ಅಧ್ಯಯನಕ್ಕೆ ಬೆಳಕು ಚೆಲ್ಲಲಿಲ್ಲ ಎಂಬುದು ಸ್ಪಷ್ಟ ಸತ್ಯ. ತುಳಸಿದೇವಿ ತನ್ನ ಕೊನೆ ದಿನಗಳನ್ನು ಸಮೀಪಿಸಿಕೊಳ್ಳುತ್ತಿರುವಾಗ ನನ್ನ ಅವರ ಭೇಟಿ ನಡೆದಿತ್ತು. ಆ ಸಂದರ್ಭದಲ್ಲಿ ಆಕೆ “ನಾನು ಕೊಡಗಿನಲ್ಲಿ ಸಂಗ್ರಹಿಸಿರುವ ಜನಪದ ಪರಿಕರಗಳು ಏನಿದೆಯೋ ಅವೆಲ್ಲಾ ಕೊಡಗಿನಲ್ಲಿಯೇ ಇರಬೇಕೆಂದು ನನ್ನ ಅಂತಿಮ ಆಸೆ” ಎಂಬುದಾಗಿ ಹೇಳಿದ್ದರು. ಅವರನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ಅವರ ಮರಣ ವಾರ್ತೆ ಮಾಧ್ಯಮ ಮುಖಾಂತರ ತಿಳಿದು ಬಂತು. ತುಳಸಿದೇವಿಯ ಆಶೆ ಆಕಾಂಕ್ಷೆಯಂತೆ ಆಕೆ ಸಂಗ್ರಹಿಸಿದ ಕೊಡವ ಜನಪದ ಪರಿಕರಗಳು ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿರುವ ಹೊಟೇಲ್ ಒಂದರಲ್ಲಿ ಶೇಖರಣೆಗೊಂಡಿರುವದು ಆಕೆಯ ಆತ್ಮಕ್ಕೆ ಬಯಸಿದ ಶಾಂತಿಯೆಂದು ಭಾವಿಸಬೇಕಾಗುತ್ತದೆ. ತುಳಸಿದೇವಿ ಅಕ್ಷರಗಳಲ್ಲಿ ಕೊಡವ ಜನಪದಗಳನ್ನು ಮಸಿಯಲ್ಲಿ ಬರೆದು ಎಲ್ಲೂ ಪ್ರಕಟಿಸಿಕೊಳ್ಳದೆ ಮರೆಯಾದರು.
ಕೊನೆ ಮಾತು : ಉಮಾದೇವಿ ತಾನಾಯಿತು ತನ್ನ ಬರಹವಾಯಿತು ಪ್ರೀತಿಯಿಂದ ಸಾಕಿದ ನಾಯಿಗಳೊಂದಿಗೆ ಬದುಕು ಸವೆಸಿಬಿಟ್ಟಳು. ತುಳಸಿದೇವಿಯೆಂಬ ಕೊಡಗಿನ ಜಾನಪದ ಗಣಿ ತಾನು ಸಂಶೋದಿಸಿದ ವಿಚಾರಗಳನ್ನು ಎಲ್ಲೂ ಪ್ರಕಟಿಸದೆ ಅಜ್ಞಾತವಾಗಿ ಹೋದಳು. ವರುಷಾನುಗಟ್ಟಲೆ ಶ್ರಮವಹಿಸಿ ಸಂಶೋಧನೆ ಮಾಡಿ ಸಂಗ್ರಹಿಸಿದ ವಿಚಾರಗಳೆಲ್ಲಾ ತುಳಸಿದೇವಿಯೊಂದಿಗೆ ಮಣ್ಣು ಪಾಲಾಗುವದು ದುರಂತ. ನಿಗೂಢ ಬದುಕನ್ನು ಬದುಕಿ ಅದ್ಭುತ ಸಾಧನೆ ಮಾಡಿದ ಇವರಿಬ್ಬರ ಅಂತ್ಯಕ್ರಿಯೆ ಸಂದರ್ಭದಲ್ಲಿ ಸೇರಿದ ಜನಸಂಖ್ಯೆ ಬೆರಳೆಣಿಕೆಯಷ್ಟು ಎಂಬದು ವಿಷಾದಕರ.