ಗೋಣಿಕೊಪ್ಪಲು, ಮಾ. 8 : ವಿಧಾನ ಪರಿಷತ್ನ ಸದಸ್ಯ ಎಂ. ಪಿ. ಸುನೀಲ್ ಸುಬ್ರಮಣಿ ಅವರು ದಿನಾಂಕ: 23.02.2017ರಂದು ವೀರಾಜಪೇಟೆ ತಾಲೂಕಿನ ಬಾಳಲೆ ಗ್ರಾ.ಪಂ.ಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಪರಿಶೀಲಿಸಿದರು. ಗ್ರಾ.ಪಂ.ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು. ಮನೆ ಕಂದಾಯ ಹಾಗೂ ನೀರಿನ ತೆರಿಗೆ ಸಂಗ್ರಹ ಮಾಡುವಲ್ಲಿ ಗ್ರಾ. ಪಂ.ಸಂಪೂರ್ಣ ವಿಫಲವಾಗಿರುವದು ಕಂಡು ಅಸಮಾಧಾನ ವ್ಯಕ್ತಪಡಿಸಿದ ಅವರು ಪಿ.ಡಿ.ಒ.ರವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಗ್ರಾ.ಪಂ.ಯ ಅಧ್ಯಕ್ಷೆ ಕಾಂಡೇರ ಕುಸುಮಾ ಶೇಖರ್, ಜಿ.ಪಂ. ಸದಸ್ಯ ಪೃಥ್ವಿ, ತಾ.ಪಂ.ಉಪಾಧ್ಯಕ್ಷ ಚಲನ್ ಕುಮಾರ್, ಆರ್. ಎಂ. ಸಿ. ಸದಸ್ಯ ಸುಜಾ ಪೂಣಚ್ಚ, ಮಾಜಿ ಜಿ. ಪಂ. ಸದಸ್ಯ ರಂಜನ್ ಚಂಗಪ್ಪ, ಗ್ರಾ. ಪಂ. ಸದಸ್ಯರು, ಇಲಾಖಾ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.
ಪೊನ್ನಪ್ಪಸಂತೆ : ವಿಧಾನ ಪರಿಷತ್ ಎಂ.ಪಿ ಸುನೀಲ್ ಸುಬ್ರಮಣಿ ಅವರು ಇತ್ತೀಚೆಗೆ ವೀರಾಜಪೇಟೆ ತಾಲೂಕಿನ ಪೆÇನ್ನಪ್ಪಸಂತೆ ಗ್ರಾ. ಪಂ.ಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಪರಿಶೀಲಿಸಿ, ಗ್ರಾ. ಪಂ. ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು. ಪಿ.ಡಿ.ಒ. ಅವರಿಂದ ಗ್ರಾ. ಪಂ. ಅನುದಾನಗಳ ಬಗ್ಗೆ, ತೆರಿಗೆ/ಕಂದಾಯ ವಸೂಲಾತಿ, ಕಾಮಗಾರಿಗಳ ಪ್ರಗತಿಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ರಸ್ತೆಗಳು, ಕುಡಿಯುವ ನೀರು, ಮರಳು ಸಮಸ್ಯೆ, ವಿದ್ಯುತ್ ಮುಂತಾದ ಸಮಸ್ಯೆಗಳನ್ನು ಆಲಿಸಿದರು. ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು ಸಮಸ್ಯೆಗಳನ್ನು ಆಯಾ ಪ್ರಾಧಿಕಾರಿಗಳ ಮೂಲಕ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆಂದು ಭರವಸೆ ನೀಡಿದರು. ಗ್ರಾಮದ ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡುವುದು ಬೇಡ. ಗ್ರಾಮದ ಅಭಿವೃದ್ಧಿಗೆ ಒಟ್ಟಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಪರಸ್ಪರ ಸಹಕಾರ ಮನೋಭಾವನೆಯಿಂದ ಕಾರ್ಯ ನಿರ್ವಹಿಸಿದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಈ ಸಂದರ್ಭ ಗಾ.ಪಂ.ಅಧ್ಯಕ್ಷೆ ಗುಲ್ಷದ್, ಗ್ರಾ.ಪಂ.ಉಪಾಧ್ಯಕ್ಷೆ ಎಂ. ಕೆ. ತನುಜಾ, ಆರ್.ಎಂ.ಸಿ ಸದಸ್ಯ ವಿನು ಚಂಗಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಪೃಥ್ವಿ, ತಾಲೂಕು ಪಂಚಾಯತಿ ಉಪಾಧ್ಯಕ್ಷ ಚಲನ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಂಜನ್ ಚಂಗಪ್ಪ, ಹಾಗೂ ಗ್ರಾ.ಪಂ ಸದಸ್ಯರು, ಇಲಾಖಾ ಅಧಿಕಾರಿಗಳು ಹಾಜರಿದ್ದರು.
ನಿಟ್ಟೂರು : ಶಾಸಕ ಎಂ.ಪಿ ಸುನೀಲ್ ಸುಬ್ರಮಣಿ ಅವರು ನಿಟ್ಟೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಪರಿಶೀಲಿಸಿದರು. ಗ್ರಾ.ಪಂ.ನ ಪಿ.ಡಿ.ಒ ಅವರ ಮೇಲೆ ಸಾರ್ವಜನಿಕ ದೂರುಗಳಿದ್ದು, ಇವರ ಮೇಲೆ ಸೂಕ್ತ ಕ್ರಮ ವಹಿಸಲು ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಸೂಚಿಸಿದರು. ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ರಸ್ತೆಗಳು, ಕುಡಿಯುವ ನೀರು, ಮರಳು ಸಮಸ್ಯೆ, ನೀರು ಸರಬರಾಜು ಮಾಡಲು ಅಗತ್ಯ ಕ್ರಮಗಳ ಬಗ್ಗೆ ಸಮಸ್ಯೆಗಳನ್ನು ಆಲಿಸಿದರು.
ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಗ್ರಾಮ ಪಂಚಾಯತಿ ಎಚ್ಚರ ವಹಿಸಲು ತಿಳಿಸಿದರು. ಈ ಭಾಗದಲ್ಲಿ ಪ.ಜಾ, ಪ.ಪಂದ ಜನರೇ ಹೆಚ್ಚಾಗಿದ್ದು, ಅವರ ಕಲ್ಯಾಣಕ್ಕಾಗಿ ಸೂಕ್ತ ಕ್ರಮ ವಹಿಸಲಾಗುವದು. ಎಂದು ನುಡಿದರು. ಶಾಸಕರ ಅನುದಾನವನ್ನೂ ಸಹ ಈ ಭಾಗಕ್ಕೆ ಮುಂದಿನ ಸಾಲಿನಲ್ಲಿ ನೀಡುತ್ತೇನೆ ಎಂದು ನುಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಕಡೇಮಾಡ ಅನಿತ, ಉಪಾಧ್ಯಕ್ಷ ಪವನ್ ಚಿಟ್ಯಪ್ಪ, ತಾಲೂಕು ಪಂಚಾಯತಿ ಸದಸ್ಯ ಸುನೀತ, ಆರ್.ಎಂ.ಸಿ ಸದಸ್ಯ ಸುಜಾ ಪೂಣಚ್ಚ, ಜಿಲ್ಲಾ ಪಂಚಾಯತಿ ಸದಸ್ಯ ಪೃಥ್ವಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ರಂಜನ್ ಚಂಗಪ್ಪ, ಗ್ರಾ.ಪಂ ಸದಸ್ಯರು ಹಾಗೂ ಇಲಾಖಾ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.
ಮಾಯಮುಡಿ : ಪರಿಷತ್ ಎಂ. ಪಿ. ಸುನೀಲ್ ಸುಬ್ರಮಣಿ ಅವರು ಗಾ. ಪಂ.ಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಪರಿಶೀಲಿಸಿ, ಗ್ರಾ. ಪಂ. ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು. ರಸ್ತೆ, ಕುಡಿಯುವ ನೀರು, ಮರಳು ಸಮಸ್ಯೆ, ಪೈಸಾರಿ ನಿವಾಸಿಗಳ ಮೂಲಭೂತ ಸೌಕರ್ಯ, ಬೆಳೆ ಹಾನಿ, ಪರಿಹಾರ ವಿತರಣೆ ಮುಂತಾದ ಸಮಸ್ಯೆಗಳನ್ನು ಆಲಿಸಿದರು. ಸುಧೀರ್ ಬಿದ್ದಪ್ಪ ಅವರು ರಸ್ತೆ ದುರಸ್ತಿ ರಸ್ತೆಗಳನ್ನು ಮೇಲ್ದರ್ಜೆಗೇರಿಸುವದು ಮರಳು ದಂಧೆಯ ಬಗ್ಗೆ ಗಮನಕ್ಕೆ ತಂದರು. ಟಾಟು ಮೊಣ್ಣಪ್ಪ ಮಾತನಾಡಿ ಗ್ರಾ.ಪಂ.ಯ ನೂತನ ಕಟ್ಟಡ ಕಾಮಗಾರಿ ಪ್ರಾರಂಭಿಸಿದ್ದು, ಅನುದಾನ ನೀಡುವಂತೆ ಮನವಿ ಮಾಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು. ಅಹವಾಲುಗಳನ್ನು ಸ್ವೀಕರಿಸಿ, ಮಾತನಾಡಿದ ಎಂ. ಪಿ. ಸುನೀಲ್ ಸುಬ್ರಮಣಿ ಅವರು ಗ್ರಾ.ಪಂ.ಗೆ ಮೊದಲ ಬಾರಿ ಭೇಟಿ ನೀಡುತ್ತಿದ್ದೇನೆ. ತÀನ್ನ ಕಾರ್ಯ ವ್ಯಾಪ್ತಿಯೊಳಗೆ ಪಂಚಾಯತ್ ರಾಜ್ ವ್ಯವಸ್ಥೆಯಡಿ ಶಾಸಕರ ಸಹಕಾರ ದೊಂದಿಗೆ ಸಮಸ್ಯೆಗಳನ್ನು ಆಯಾ ಪ್ರಾಧಿಕಾರಗಳ ಮೂಲಕ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆಂದು ಭರವಸೆ ನೀಡಿದರು. ಈ ಸಂದರ್ಭ ಗಾ.ಪಂ.ಅಧ್ಯಕ್ಷೆ ಭಾವನ ಆರ್.ಎಂ.ಸಿ ಸದಸ್ಯ ಶ್ರೀ ವಿನು ಚಂಗಪ್ಪ, ಜಿ.ಪಂ.ಸದಸ್ಯೆ ಪಂಕಜ, ಪೃಥ್ವಿ, ತಾಲೂಕು ಪಂಚಾಯತಿ ಉಪಾಧ್ಯಕ್ಷ ಚಲನ್ ಕುಮಾರ್, ಶ್ರೀಧರ್, ಮಾಜೀ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳ, ಗ್ರಾ.ಪಂ ಸದಸ್ಯರು, ಪಿ.ಡಿ.ಓ, ಇಲಾಖಾ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.