ನಾಪೆÇೀಕ್ಲು, ಮಾ. 9: ಕಕ್ಕಬೆ ಫಾರ್ಮರ್ಸ್ ಕ್ಲಬ್ ವತಿಯಿಂದ ಗಣರಾಜ್ಯೋತ್ಸವ ಸಂದರ್ಭ ಉತ್ತಮ ಸೇವಾ ಪ್ರಶಸ್ತಿ ಪಡೆದ ಜಿಲ್ಲಾ ತಾಂತ್ರಿಕ ಕೃಷಿ ಅಧಿಕಾರಿ ಅಜ್ಜಿಕುಟ್ಟಿರ ಗಿರೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಕ್ಕಬೆ ದಿ ಹೈಲಾಂಡರ್ಸ್ ಕ್ಲಬ್‍ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಗಿರೀಶ್ ಮಾತನಾಡಿ, ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ತೃಪ್ತಿ ಇದೆ. ಪ್ರಶಸ್ತಿಗಾಗಿ ಎಂದೂ ಕೆಲಸ ಮಾಡಿಲ್ಲ. ಜಿಲ್ಲೆಯ ಕೃಷಿಕರಿಗೆ ಸರಕಾರದ ಸವಲತ್ತುಗಳನ್ನು ನೀಡುತ್ತಾ ಬಂದಿದ್ದು, ಎಲ್ಲರೂ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಕ್ಕಬೆ ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಕೋಟೆರ ಸುರೇಶ್ ಚಂಗಪ್ಪ ಪ್ರಾಮಾಣಿಕತೆಗೆ, ನಿಷ್ಠೆಗೆ ಗಿರೀಶ್ ಅವರಿಗೆ ಲಭಿಸಿದ ಪ್ರಶಸ್ತಿ ಸಾಕ್ಷಿಯಾಗಿದೆ. ಇವರ ಸೇವೆ ಕೊಡಗಿಗೆ ಇನ್ನೂ ಹೆಚ್ಚು ಲಭ್ಯವಾಗಬೇಕಾಗಿದ್ದು, ಹೆಚ್ಚಿನ ಪ್ರಶಸ್ತಿ-ಗೌರವಗಳು ಇವರಿಗೆ ಲಭಿಸಲಿ ಎಂದರು.

ಫಾರ್ಮರ್ಸ್ ಕ್ಲಬ್ ಕಾರ್ಯದರ್ಶಿ ಅನ್ನಾಡಿಯಂಡ ದಿಲೀಪ್, ಕಕ್ಕಬೆ ದಿ ಹೈಲಾಂಡರ್ಸ್ ಕ್ಲಬ್‍ನ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ, ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೇಟೋಳಿರ ಕುಟ್ಟಪ್ಪ, ಅಜ್ಜಿಕುಟ್ಟಿರ ಗಿರೀಶ್ ಪತ್ನಿ ಸುನಿತಾ ಗಿರೀಶ್ ಸೇರಿದಂತೆ ಕ್ಲಬ್‍ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.