ಸೋಮವಾರಪೇಟೆ, ಮಾ. 9: ಜೇಸಿಐ ಮಹಿಳಾ ಘಟಕದ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಅಂಗನವಾಡಿ ಸಿಬ್ಬಂದಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟಕ್ಕೆ ಜೆಸಿಐ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಮನೋಹರ್ ಚಾಲನೆ ನೀಡಿದರು. ನಂತರ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಮನೆಯ ಅಡುಗೆ ಕೋಣೆಗೆ ಮೀಸಲಾಗಿರದೆ ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಿರುವದು ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಮಹಿಳಾ ಘಟಕದ ಅಧ್ಯಕ್ಷೆ ಮೀನಾ ಮಂಜುನಾಥ್ ವಹಿಸಿದ್ದರು. ಈ ಸಂದರ್ಭ ವಲಯಾಧಿಕಾರಿ ಜಿ.ಜೆ. ಗಿರೀಶ್, ಕಾರ್ಯದರ್ಶಿ ರುಬೀನಾ, ಪದಾಧಿ ಕಾರಿಗಳಾದ ಉಷಾ ಪ್ರಕಾಶ್, ಜ್ಯೋತಿ ರಾಜೇಶ್, ಜ್ಯೋತಿ ಅರುಣ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಅಂಗನವಾಡಿ ಸಿಬ್ಬಂದಿಗಳಿಗೆ ರಂಗೋಲಿ ಸ್ಪರ್ಧೆ, ಇಟ್ಟಿಗೆಯ ಮೇಲೆ ಗಂಟೆ ಹಿಡಿದು ನಡಿಗೆ ಹಾಗೂ ಸಂಗೀತ ಕುರ್ಚಿ ಸ್ಪರ್ಧೆಗಳು ನಡೆದವು.