ಸೋಮವಾರಪೇಟೆ, ಮಾ. 9: ಕಳೆದ ಹಲವು ದಶಕಗಳಿಂದ ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಪಾಲೆ, ಆದಿಕರ್ನಾಟಕ, ಹರಿಜನ, ಆದಿದ್ರಾವಿಡ ಬಲಗೈ, ಜಾತಿಯವರಿಗೆ ಆದಿದ್ರಾವಿಡ ಹೆಸರಿನಲ್ಲಿ ಜಾತಿ ದೃಢೀಕರಣ ಪತ್ರ ನೀಡಬೇಕೆಂದು ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಮೀಸಲಾತಿ ಸೌಲಭ್ಯಗಳು ಸಿಗುತ್ತಿವೆ. ಆದರೆ ಆದಿ ದ್ರಾವಿಡ ಜನಾಂಗಕ್ಕೆ ಜಾತಿ ದೃಢೀಕರಣ ಪತ್ರವಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವ ದುಸ್ಥಿತಿ ಒದಗಿದೆ ಎಂದು ಹೇಳಿದರು.
ಜಾತಿ ದೃಢೀಕರಣ ಪತ್ರಕ್ಕಾಗಿ ಕಂದಾಯ ಇಲಾಖೆಗೆ ಈಗಾಗಲೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಸ್ಪಂದಿಸದಿದ್ದರೆ ಹೋರಾಟ ಹಾದಿ ಹಿಡಿಯುವದು ಅನಿವಾರ್ಯ ವಾಗಲಿದೆ. ಕೇವಲ ಓಟ್ ಬ್ಯಾಂಕ್‍ಗಾಗಿ ನಮ್ಮ ಜನಾಂಗವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಆದಿ ದ್ರಾವಿಡ ಬಳಗ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜನಗಣತಿ ನಡೆಯಲಿದೆ. ಆ ಸಂದರ್ಭ ಜಿಲ್ಲೆಯಲ್ಲಿ ವಾಸವಿರುವ ಪಾಲೆ, ಆದಿಕರ್ನಾಟಕ, ಹರಿಜನ, ಆದಿದ್ರಾವಿಡ ಬಲಗೈ ಜಾತಿಯವರು ಜನಗಣತಿ ನಮೂನೆಯ ಜಾತಿ ಕಾಲಂನಲ್ಲಿ ಆದಿದ್ರಾವಿಡ (ಪರಿಶಿಷ್ಟಜಾತಿ) ಎಂದು ಬರೆಯಬೇಕು ಎಂದು ಹೇಳಿದರು. ಈ ಬಗ್ಗೆ ಜಿಲ್ಲಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ವಾಗಲಿದೆ. ಕೇವಲ ಓಟ್ ಬ್ಯಾಂಕ್‍ಗಾಗಿ ನಮ್ಮ ಜನಾಂಗವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಆದಿ ದ್ರಾವಿಡ ಬಳಗ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜನಗಣತಿ ನಡೆಯಲಿದೆ. ಆ ಸಂದರ್ಭ ಜಿಲ್ಲೆಯಲ್ಲಿ ವಾಸವಿರುವ ಪಾಲೆ, ಆದಿಕರ್ನಾಟಕ, ಹರಿಜನ, ಆದಿದ್ರಾವಿಡ ಬಲಗೈ ಜಾತಿಯವರು ಜನಗಣತಿ ನಮೂನೆಯ ಜಾತಿ ಕಾಲಂನಲ್ಲಿ ಆದಿದ್ರಾವಿಡ (ಪರಿಶಿಷ್ಟಜಾತಿ) ಎಂದು ಬರೆಯಬೇಕು ಎಂದು ಹೇಳಿದರು. ಈ ಬಗ್ಗೆ ಜಿಲ್ಲಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದರು.
ಏ.29 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುವ ಆದಿದ್ರಾವಿಡ ದಶಮಾನೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಒಂದು ಸಾವಿರ ಮಂದಿ ಆದಿದ್ರಾವಿಡ ಜನಾಂಗದವರು ತೆರಳಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಆದಿದ್ರಾವಿಡ ಸೇವಾ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್. ಕುಮಾರ್, ಪದಾಧಿಕಾರಿಗಳಾದ ಕೆ.ಆರ್. ರಘು, ಎಚ್.ಪಿ. ತನಿಯಪ್ಪ, ಯಡವಾರೆ ಶಿವಪ್ಪ, ಟಿ. ವಿಜಯ ಉಪಸ್ಥಿತರಿದ್ದರು.