ಮಡಿಕೇರಿ, ಮಾ. 9: ಕರ್ನಾಟಕ ಸರಕಾರ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಾರುಕಟ್ಟೆ ಆವರಣದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದ 1 ಸಾವಿರ ಲೀ. ಸಾಮಥ್ರ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಉದ್ಘಾಟಿಸಿದರು.
ಈ ಘಟಕದಲ್ಲಿ 2 ರೂ. ಗೆ 20 ಲೀ. ಶುದ್ಧ ಕುಡಿಯುವ ನೀರು ಲಭಿಸಲಿದ್ದು, ಕಾರ್ಡ್ ಬಳಸಿ ನೀರನ್ನು ಪಡೆಯಬಹುದಾಗಿದೆ. ಮೊದಲಿಗೆ ಕಾರ್ಡ್‍ಗೆ 100 ರೂ. ಮತ್ತು ರೀಚಾರ್ಜ್ 100 ರೂ. ಸೇರಿಸಿ 200 ರೂ. ನೀಡಿ ಗ್ರಾಮ ಪಂಚಾಯಿತಿಯಿಂದ ಕಾರ್ಡ್‍ಅನ್ನು ಪಡೆಯಬಹುದಾಗಿದೆ. ನಂತರದ ದಿನಗಳಲ್ಲಿ ನೀರಿನ ಅವಶ್ಯಕತೆಗೆ ಅನುಗುಣವಾಗಿ 20, 50, 100 ರೂ.ಗಳನ್ನು ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಗ್ರಾ. ಪಂ. ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಉಪಾಧ್ಯಕ್ಷ ಸಾಬಾ ತಿಮ್ಮಯ್ಯ, ಆರ್.ಎಂ.ಸಿ. ನಿರ್ದೇಶಕಿ ಬೊಳ್ಳಮ್ಮ ನಾಣಯ್ಯ, ಸೌಕತ್ ಅಲಿ, ಖುರೇಶಿ, ಹರೀಶ್ ಬೋಪಣ್ಣ, ಅರುಣ್ ಬೇಬ, ಚೋಕಿರ ಪ್ರಭು ಪೂವಪ್ಪ ಮತ್ತಿತರರಿದ್ದರು.
ನಾಪೋಕ್ಲು: ಇಲ್ಲಿಗೆ ಸಮೀಪದ ಎಮ್ಮೆ ಮಾಡು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಚಂಬಾರಂಡ ಮತ್ತು ಕನ್ನಡಿಯಂಡ ಕುಟುಂಬಸ್ಥರ ಮನೆಗಳ ಕಡೆ ತೆರಳುವ ಮಾರ್ಗದಲ್ಲಿ ರೂ. 5.60 ಲಕ್ಷ ವೆಚ್ಚದಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ ನೆರವೇರಿಸಲಾಯಿತು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಅಪ್ಪಚೆಟ್ಟೊಳಂಡ ಮನು ಮುತ್ತಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ಕೊಡಿಯಂಡ ಇಂದಿರಾ, ಎಮ್ಮೆಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನೂರೋಟ್ ಆಲಿ, ಸದಸ್ಯರುಗಳಾದÀ ಸಿ. ಮಾಹಿನೆ, ಎ. ಹಂಸ, ಎಮ್ಮೆಮಾಡು ಬಿಜೆಪಿ ಸ್ಥಾಯಿಯ ಸಮಿತಿ ಅಧ್ಯಕ್ಷ ಹಸೈನಾರ್, ಅಬ್ದುಲ್ ಜಲೀಲ್ ಮಿಸಾ ಮಿ, ಸಾದುಲಿ, ಉಮ್ಮರ್, ಸಿ.ಹೆಚ್. ಮೊಯ್ದು, ಕೆ.ಪಿ. ಅಬ್ಬಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೂಡಿಗೆ : ಸಮೀಪದ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿರಂಗಾಲ ಶಾಖೆಯ ಮೇಲಂತಸ್ಥಿನ ಕಚೇರಿ ಕಟ್ಟಡ ನಿರ್ಮಿಸಲು ಶಂಕು ಸ್ಥಾಪನೆ ಹಾಗೂ ತೊರೆನೂರು ಕಚೇರಿಯ ಸುತ್ತ ತಡೆಗೋಡೆ ನಿರ್ಮಾಣಕ್ಕೆÀ ಭೂಮಿ ಪೂಜೆಯನ್ನು ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೆಚ್.ಟಿ. ದಿನೇಶ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯ ಜಯಣ್ಣ, ಸಂಘದ ಉಪಾಧ್ಯಕ್ಷೆ ಕೆ.ಎಂ. ಪೊನ್ನಮ್ಮ, ನಿರ್ದೇಶಕರುಗಳಾದ ಕೆ.ಎಸ್. ಕೃಷ್ಣೇಗೌಡ, ಎಸ್.ಎಸ್. ಚಂದ್ರಶೇಖರ್, ಟಿ.ಬಿ. ಜಗದೀಶ್, ಎನ್.ಎನ್. ಧರ್ಮಪ್ಪ, ಎನ್. ಎಸ್. ರಮೇಶ್, ಟಿ.ಎನ್. ವೇದಾವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಜೀವನ್, ಸೇರಿದಂತೆ ಗ್ರಾಮಸ್ಥರು ಇದ್ದರು.
ಚೆಟ್ಟಳ್ಳಿ : ಜಿಲಾ ್ಲಪಂಚಾಯಿತಿ ಸದಸ್ಯರ ಅನುದಾನದಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂಡಲೂರು ಚೆಟ್ಟಳ್ಳಿ ಗ್ರಾಮದಲ್ಲಿ ರೂ. 2.65 ಲಕ್ಷದ ಕೆರೆ ಹೂಳೆತ್ತುವ ಹಾಗೂ ಅಭಿವೃದ್ಧಿ ಕಾಮಗಾರಿಗೆ ವಾಲ್ನೂರು-ತ್ಯಾಗತ್ತೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ ಭೂಮಿ ಪೂಜೆ ನೆರೆವೇರಿಸಿದರು. ವಲಯ ಕಾಂಗ್ರೆಸ್ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲಾ ಪಿ.ವಿ. ಉಪಾಧ್ಯಕ್ಷ ಡೆನ್ನಿ ಬರೋಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಮತ್ತಿತರರು ಹಾಜರಿದ್ದರು.